ಜೊತೆ ಜೊತೆಯಲಿ ಸೀರಿಯಲ್ ನಿಂದ ಅನಿರುದ್ಧ ಹೊರ ನಡೆದ ಸುದ್ದಿ ಧಾರಾವಾಹಿ ಲೋಕದಲ್ಲಿ ಕೋಲಾಹಲ ಉಂಟು ಮಾಡಿದೆ. ಈ ಧಾರಾವಾಹಿ ಅನಿರುದ್ಧ ಅವರಿಗೆ ವೃತ್ತಿ ಜೀವನದಲ್ಲಿ ದೊಡ್ಡದೊಂದು ಬ್ರೇಕ್ ನೀಡಿದ್ದು ಸುಳ್ಳಲ್ಲ. ಅವರ ಮೂಲ ಹೆಸರನ್ನು ಮರೆತು, ಅನಿರುದ್ಧ ಅವರನ್ನು ಆರ್ಯವರ್ಧನ್ ಹೆಸರಿನಿಂದಲೇ ಅಭಿಮಾನಿಗಳು ಕರೆಯುವಷ್ಟು ದೊಡ್ಡ ಮಟ್ಟದಲ್ಲಿ ಅವರಿಗೆ ಹೆಸರು ತಂದುಕೊಟ್ಟಿತ್ತು. ಹೆಸರು ಮಾತ್ರವಲ್ಲ ಕೈ ತುಂಬಾ ಸಂಬಳವನ್ನೂ ಅದು ನೀಡಿತ್ತು.
Advertisement
ಈ ಮಧ್ಯೆ ಧಾರಾವಾಹಿ ತಂಡಕ್ಕೂ ಮತ್ತು ಅನಿರುದ್ಧ ಅವರಿಗೆ ಮನಸ್ತಾಪವಾಗಿ, ನಿನ್ನೆಯಷ್ಟೇ ಶೂಟಿಂಗ್ ಗೆ ಬಂದಿದ್ದ ಅನಿರುದ್ಧ ಕ್ಯಾಮೆರಾಗೆ ಕೈ ಮುಗಿದು, ಶೂಟಿಂಗ್ ಸ್ಥಳದಿಂದ ಹೊರ ನಡೆದಿದ್ದಾರೆ ಎನ್ನುತ್ತಿವೆ ಮೂಲಗಳು. ಈ ಮನಸ್ತಾಪ ನಿನ್ನೆಯಷ್ಟೇ ಆದದ್ದು ಅಲ್ಲವಂತೆ. ಹಲವು ದಿನಗಳಿಂದ ಧಾರಾವಾಹಿ ತಂಡಕ್ಕೂ ಮತ್ತು ಅನಿರುದ್ಧ ಅವರಿಗೂ ಮುಸುಕಿನ ಗುದ್ದಾಟ ನಡೆದೇ ಇತ್ತಂತೆ. ನಿನ್ನೇ ಅದು ಸ್ಪೋಟವಾಗಿ ಧಾರಾವಾಹಿ ಸೆಟ್ ನಿಂದ ಹೊರ ಹೋಗುವಂತೆ ಮಾಡಿದೆ. ಇದನ್ನೂ ಓದಿ:ರಾಜ್ಯಪಾಲರಾಗ್ತಾರಾ ಸೂಪರ್ ಸ್ಟಾರ್ ರಜನಿಕಾಂತ್?
Advertisement
Advertisement
ಧಾರಾವಾಹಿಯ ತಂಡದ ಸದಸ್ಯರು ಹೇಳುವಂತೆ, ಅನಿರುದ್ಧ ಅವರು ಹಲವು ತಿಂಗಳಿಂದ ತಂಡದೊಂದಿಗೆ ಕಿರಿಕಿರಿ ಮಾಡುತ್ತಲೇ ಇದ್ದರಂತೆ. ಶೂಟಿಂಗ್ ಗೆ ತಡವಾಗಿ ಬರುವುದು, ಡೇಟ್ ಕೊಡದೇ ಇರುವುದು ಹಾಗೂ ಬರೆದು ಡೈಲಾಗ್ ಅನ್ನು ಹೇಳದೇ ಇರುವುದು ಹೀಗೆ ನಾನಾ ರೀತಿಯ ತೊಂದರೆಗಳನ್ನು ಮಾಡುತ್ತಲೇ ಇದ್ದರಂತೆ. ನಿನ್ನೆ ಕೂಡ ಇದನ್ನೇ ಮಾಡಿದ್ದರಿಂದ, ನಿರ್ಮಾಪಕರಿಗೂ ಮತ್ತು ಅನಿರುದ್ಧ ಮಧ್ಯೆ ಸಣ್ಣದೊಂದು ಗಲಾಟೆ ಕೂಡ ಆಗಿದೆಯಂತೆ.
Advertisement
ನಿನ್ನೆ ಶೂಟಿಂಗ್ ಸ್ಪಾಟ್ ನಿಂದ ಹೊರ ಹೋದ ಅನಿರುದ್ಧ ಅವರನ್ನು ಮನವೊಲಿಸುವ ಪ್ರಯತ್ನಕ್ಕಿಂತ, ಅವರ ಪಾತ್ರಕ್ಕೆ ಬೇರೆ ಕಲಾವಿದರನ್ನು ಹುಡುಕುವ ಕೆಲಸ ಈಗಾಗಲೇ ನಡೆದಿದೆಯಂತೆ. ಈ ವಿಷಯದ ಕುರಿತು ವಾಹಿನಿಯೊಂದಿಗೆ ಮಾತನಾಡಿದ್ದಾರೆ ಎನ್ನಲಾಗುತ್ತದೆ. ಹೊಸ ಕಲಾವಿದರನ್ನು ಹುಡುಕಲು ವಾಹಿನಿಯೂ ಗ್ನೀನ್ ಸಿಗ್ನಲ್ ಕೊಟ್ಟಿದೆ ಎಂದು ಹೇಳಲಾಗುತ್ತಿದೆ. ಅನಿರುದ್ಧ ಬದಲಾಗಿ ಬೇರೆ ಕಲಾವಿದರನ್ನೇ ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಶೂಟ್ ಮಾಡಲಾಗುತ್ತಿದೆ ಎನ್ನುತ್ತಿವೆ ಮೂಲಗಳು.