ಇನ್ಮುಂದೆ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟ ಅನಿರುದ್ಧ ಇರುವುದಿಲ್ಲವೆಂದು ಜೀ ಕನ್ನಡ ವಾಹಿನಿಯೂ ಸ್ಪಷ್ಟ ಪಡಿಸಿದ ಬೆನ್ನಲ್ಲೇ ನಟ ಅನಿರುದ್ಧ್ ಪ್ರತಿಕ್ರಿಯೆ ನೀಡಿದ್ದು, ನಾಲ್ಕು ಗೋಡೆ ಮಧ್ಯೆ ಜಗಳವಾಡಿರೋದು ಬೀದಿಗೆ ತರಬಾರದು ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೆಲಸ ಮಾಡ್ತಿರೋ ಯಾವುದೇ ಕ್ಷೇತ್ರವಾಗಿರಬಹುದು ಅಥವಾ ಜೊತೆ ಜೊತೆಯಲಿ ಸೀರಿಯಲ್ ಸೆಟ್‍ಲ್ಲಿ ಅಹಂಕಾರ ನೋಡಿದ್ದೀರಾ, ಸೆಟ್‍ನಲ್ಲಿ ಕೆಲಸಕ್ಕಾಗಿ ಜಗಳ ಮಾಡಿದ್ದೀನಿ. ಮನುಷ್ಯನಿಗೆ ಕೋಪ ಸಹಜ. ನಾನು ಸಾಮಾಜಿಕ ಕೆಲಸ ಮಾಡುತ್ತೇನೆ. ಕಸದ ಹತ್ತಿರ ನಿಂತು ವಿಡಿಯೋ ಮಾಡಿದ್ದೀನಿ. ದುರಂಹಕಾರ ಇದ್ದಿದ್ರೆ ಈ ರೀತಿ ಮಾಡ್ತಿದ್ನಾ ಎಂದು ಪ್ರಶ್ನಿಸಿದರು.
ಟೀಮ್ ವರ್ಕ್ ಹಾಗೂ ಜನರ ಹಾರೈಕೆ ಸಿಕ್ಕಿರೋ ಯಶಸ್ಸಾಗಿದೆ. ಇದಕ್ಕಿಂತ ಹಿಂದೆ ಸಿನಿಮಾಗಳಿಗೂ ಯಶಸ್ಸು ಸಿಕ್ಕಿದೆ. ನನ್ನ ಅಭಿನಯಕ್ಕೆ ತುಂಬಾ ಜನ ಒಳ್ಳೆಯ ಮಾತು ಹೇಳಿದ್ದಾರೆ. ಅಭಿಮಾನಿಗಳು ಪ್ರೀತಿ ತೋರಿಸುತ್ತಿದ್ದಾರೆ. ಇದಕ್ಕಿಂತ ಯಶಸ್ಸು ಬೇಕಾ, 20 ದಾಖಲೆಗಳನ್ನ ಸೃಷ್ಟಿ ಮಾಡಿದ್ದೀನಿ. ಇದು ಯಶಸ್ಸಾಗಿದೆ. ಈ ರೀತಿ ಸಾಕಷ್ಟು ಯಶಸ್ಸು ಇದೆ. ಇಂತಹ ಯಶಸ್ಸು ಕೊಟ್ಟಿರೋದು ದೇವರು ಎಂದರು. ಇದನ್ನೂ ಓದಿ: ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟ ಅನಿರುದ್ಧ ಇರಲ್ಲ: ವಾಹಿನಿ ಸ್ಪಷ್ಟನೆ
ನಾನು ಶ್ರದ್ಧೆಯಿಂದ ಕೆಲಸ ಮಾಡಿದ್ದೀನಿ. ಅಭಿಮಾನಿಗಳ ಪ್ರೀತಿ, ಕುಟುಂಬದರ ಹಾರೈಕೆ ಇದೆ. ನನಗೆ ಕೆಲಸ ಸಿಕ್ಕೇ ಸಿಗುತ್ತದೆ. ನನಗೆ ಇನ್‍ಸೆಕ್ಯೂರಿಟಿ ಬರಲು ಸಾಧ್ಯವೇ ಇಲ್ಲ. ಸಿನಿಮಾಗಳಲ್ಲಿ ಕೆಲ ವರ್ಷ ಕೆಲಸ ಇರಲಿಲ್ಲ. ಅಗಲೇ ಆರಾಮಾಗಿ ಇದ್ದೇ ಇವಾಗ ಕೆಲಸ ಸಿಗಲ್ವಾ ಎಂದು ಕೇಳಿದರು.
ಅವರು ನನ್ನ ಹತ್ತಿರ ಬಂದು ಚರ್ಚೆ ಮಾಡಬಹುದಿತ್ತು. ಅವರು ನೇರವಾಗಿ ನನ್ನ ಹತ್ತಿರ ಕೇಳಬಹುದಿತ್ತು. ಜೊತೆ ಜೊತೆಯಲಿ ತಂಡದ ಕಲಾವಿದರು ನನ್ನ ಜೊತೆ ಇದ್ದೇವೆ ಅಂತ ಹೇಳಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ‘ಜೊತೆ ಜೊತೆಯಲಿ’ ಶೂಟಿಂಗ್ ಗೆ ನಾನು ಹೋಗಲು ರೆಡಿ : ನಟ ಅನಿರುದ್ಧ
ನಾನು ಕ್ಯಾರೆವನ್ ಕೇಳಕ್ಕೆ ಹುಚ್ಚನಾ, ಹೆಣ್ಣುಮಕ್ಕಳಿಗೋಸ್ಕರ ಕೇಳಿರೋದು. ನನ್ನ ಕೇಳದೆ ಎರಡು ವರ್ಷ ಯಾವ ಚಾನೆಲ್‍ನಲ್ಲೂ ಆ್ಯಕ್ಟ್ ಮಾಡಬಾರದು ಅಂತ ನಿರ್ಬಂಧ ಹಾಕಿದ್ದಾರೆ. ಓನ್ ಸೈಡ್ ಮಾಡ್ತಿದ್ದಾರೆ. ಭಾರತಿ ವಿಷ್ಣುವರ್ಧನ್ ಸಹ ಹೇಳಿದ್ರು, ವಿಷ್ಣುಗಾಗಿರೋದೆ ನಿನಗಾಗಿರೋದು. ಅವರದೇ ನೆನಪು ಬಂತು ಅಂದರು. ನಮ್ಮ ಕುಟುಂಬಕ್ಕೆ ಹೋರಾಟ ಹೊಸದಲ್ಲ ಎಂದು ಹೇಳಿದರು.