1970ರಲ್ಲಿ ಬೆಂಗಳೂರಿನಲ್ಲಿ (Bengaluru) ಸ್ಟುಡಿಯೋ ನಿರ್ಮಾಣ ಮಾಡುವ ಸಲುವಾಗಿ ಸರ್ಕಾರ ಅರಣ್ಯ ಪ್ರದೇಶದ ಆದೇಶ ಜಾರಿ ಮಾಡಿ ಕೆಲವು ನಿಯಮಗಳಡಿ 20 ಎಕರೆ ಜಾಗವನ್ನ ಹಿರಿಯ ನಟ ಟಿ.ಎನ್ ಬಾಲಣ್ಣ ಅವರ ಕುಟುಂಬಕ್ಕೆ ನೀಡಿತ್ತು. ಬಳಿಕ ಬಾಲಣ್ಣ ಕುಟುಂಬಸ್ಥರು ಸರ್ಕಾರ ವಿಧಿಸಿದ್ಧ ನಿಯಮಗಳ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪದಡಿ ಆ ಜಾಗವನ್ನ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿ ಅರಣ್ಯ ಇಲಾಖೆ ಜಿಲ್ಲಾಧಿಕಾರಿಗಳಿಗೆ ಪತ್ರವನ್ನ ಬರೆದಿದೆ. ಈ ಬಗ್ಗೆ ನಟ ಹಾಗೂ ಡಾ.ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಜಟ್ಕರ್ (Aniruddha Jatkar) ʻಪಬ್ಲಿಕ್ ಟಿವಿʼಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಸರ್ಕಾರ ಅಭಿಮಾನ್ ಸ್ಟುಡಿಯೋ (Abhiman Studio) ಜಾಗ ವಶಪಡಿಸಿಕೊಳ್ಳಬಹುದು ಅಂತಾ ಮೊದಲೇ ನನಗೆ ಗೊತ್ತಿತ್ತು. ಆ ನಿಟ್ಟಿನಲ್ಲಿ 6 ವರ್ಷದಿಂದ ನಾವು ಸಾಕಷ್ಟು ಪ್ರಯತ್ನ ಪಟ್ಟೆವು, ಆದ್ರೆ ಅದು ಆಗ್ಲಿಲ್ಲ. ಈಗ ನಮಗೆ ತುಂಬಾ ಖುಷಿ ಕೊಟ್ಟಿದೆ. ಅಪ್ಪಾಜಿ ಅಂತ್ಯ ಸಂಸ್ಕಾರ ಆದ ಜಾಗದಲ್ಲಿ ಭಾರತಿ ಅಮ್ಮ ಸ್ಮಾರಕವನ್ನ ಕಟ್ಟಿದರು. ಆದರೆ ಹಬ್ಬದ ದಿನವೇ ರಾತ್ರೋ ರಾತ್ರಿ ಅಲ್ಲಿ ನೆಲಸಮ ಮಾಡಲಾಯಿತು. ಅದು ಅಭಿಮಾನಿಗಳಿಗೆ ಹಾಗೂ ನಮ್ಮ ಕುಟುಂಬಕ್ಕೆ ಬೇಸರ ತಂದಿತ್ತು. ಈಗ ಅರಣ್ಯ ಪ್ರದೇಶ ಅಂತಾ ಹೇಳಿದೆ. ಸರ್ಕಾರಕ್ಕೆ ಅಲ್ಲಿ 10 ಗುಂಟೆ ಜಾಗ ಕೊಡಿ ಸ್ಮಾರಕ ಕಟ್ಟಿಕೊಡೋದು ಬೇಡ ಅಂತಾ ಮನವಿ ಮಾಡ್ತೀವಿ. ಸರ್ಕಾರ ಈ ಮನವಿಗೆ ಖಂಡಿತ ಸ್ಪಂದಿಸುತ್ತೆ ಅನ್ನೋ ಭರವಸೆ ಇದೆ ಅಂತಾ ಅನಿರುದ್ಧ ಹೇಳಿದ್ದಾರೆ.
ಈ ವಿಚಾರದಲ್ಲಿ ನಾನು ಏನು ಹೇಳ್ತಿದಿನೋ ಅದನ್ನ ಅಮ್ಮನೂ ಹೇಳೋದು. ಸಿಎಂ ಕಳೆದ ಬಾರಿ ಹೋದಾಗಲೂ ಈ ಬಾರಿ ಹೋದಾಗಲೂ ಕರ್ನಾಟಕ ರತ್ನ ಗೌರವದ ನೀಡುವ ಬಗ್ಗೆ ಭರವಸೆ ಕೊಟ್ಟಿದ್ದಾರೆ. ನಾನು ಅಲ್ಲಿ ಬೇಡಿಕೊಂಡಿಲ್ಲ ಬದಲಾಗಿ ನೆನಪಿಸಿದ್ದೇನೆ. ಅವರ ಗಮನಕ್ಕೆ ತಂದಿದ್ದೇನೆ. ಬಾಲಣ್ಣ ಅವರ ಬಗ್ಗೆ ಹಾಗೂ ಅವರ ಕುಟುಂಬದ ಬಗ್ಗೆ ಸಾಕಷ್ಟು ಗೌರವ ಇದೆ. ಆ ಜಾಗದಲ್ಲಿ ಅಭಿವೃದ್ಧಿ ಆಗಿದ್ರೆ ಚೆನ್ನಾಗಿರ್ತಿತ್ತು. ಅಲ್ಲಿ ಅಪ್ಪಾಜಿ ಅವರ ಸಮಾಧಿಗೆ ಅವಕಾಶ ಕೊಟ್ಟಿದ್ದರು ಅವರಿಗೂ ಗೌರವ ಇರ್ತಿತ್ತು. ಈಗ ಸರ್ಕಾರ ಮುಟ್ಟುಗೋಲು ಹಾಕಿಕೊಳ್ತಿದೆ ಎಂದಿದ್ದಾರೆ ಅನಿರುದ್ಧ.