ರಕ್ತಾಭಿಷೇಕ ನಡೆದಿದ್ದು ಬಲಪಡಿಸೋದಕ್ಕಲ್ಲ, ನನ್ನ ವಶೀಕರಣಕ್ಕೆ – ಸ್ನೇಹಮಯಿ ಕೃಷ್ಣ ದೂರು

Public TV
1 Min Read
Animal Sacrifices Snehamayi Krishna

ಮೈಸೂರು: ಮುಡಾ ಪ್ರಕರಣದ (MUDA Case) ದೂರುದಾರ ಸ್ನೇಹಮಯಿ ಕೃಷ್ಣ ಹಾಗೂ ಗಂಗರಾಜು ಪೋಟೋಗೆ ರಕ್ತದ ಅಭಿಷೇಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೂಜೆ ಮಾಡಿದ್ದು, ಶಕ್ತಿ ತುಂಬಲು ಅಲ್ಲ ವಶೀಕರಣಕ್ಕೆ ಎಂದು ಸ್ನೇಹಮಯಿ ಕೃಷ್ಣ (Snehamayi Krishna) ಗಂಭೀರ ಆರೋಪ ಮಾಡಿ ಮಂಗಳೂರು ಪೊಲೀಸ್ ಕಮಿಷನರ್‌ಗೆ (Mangaluru Police Commissioner) ಸ್ನೇಹಮಯಿಕೃಷ್ಣ ಲಿಖಿತ ದೂರು ನೀಡಿದ್ದಾರೆ.

ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 13/2025 ಸಂಖ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ತಿಳಿದುಕೊಂಡು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ ಎಂದು ದೂರು ನೀಡಿದ್ದಾರೆ. ಇದನ್ನೂ ಓದಿ: ಸ್ನೇಹಮಯಿ ಕೃಷ್ಣ ಕೈಬಲಪಡಿಸಲು ಮಂಗಳೂರಲ್ಲಿ ಪ್ರಾಣಿಬಲಿ ಶಂಕೆ

Snehamayi Krishna

ಮುಡಾ ಪ್ರಕರಣದಲ್ಲಿ ಹೋರಾಟ ನಡೆಸುತ್ತಿರುವ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜುರವರಿಗೆ ಬಲ ತುಂಬುವ ಸಲುವಾಗಿ ಈ ರೀತಿ ಮಾಡಲಾಗಿದೆ ಎಂದು ಹೇಳಿರುತ್ತೀರಿ. ಆದರೆ ನನ್ನ ಅನುಭವ ಮತ್ತು ಲಭ್ಯವಿರುವ ಮಾಹಿತಿ ಪ್ರಕಾರ ನಮಗೆ ಬಲ ತುಂಬುವ ಸಲುವಾಗಿ ಈ ಕೃತ್ಯ ನಡೆಸಿರುವುದಿಲ್ಲ. ನಮ್ಮನ್ನು ವಶೀಕರಣ ಮಾಡಿಕೊಂಡು, ಆಮೀಷಕ್ಕೆ ಒಳಪಡಿಸಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ ಅನುಕೂಲ ಮಾಡಿಕೊಡಬೇಕು. ಮುಡಾ ಹೋರಾಟದಿಂದ ಹಿಂದೆ ಸರಿಯಬೇಕು ಅಂತ ಹೀಗೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದರೆ. ಇದನ್ನೂ ಓದಿ: ಬಜೆಟ್‌ ಮಂಡನೆ ವೇಳೆ ನಿರ್ಮಲಾ ಉಲ್ಲೇಖಿಸಿದ ಕವಿತೆ ಬರೆದ ಗುರಜದ ವೆಂಕಟ ಅಪ್ಪರಾವ್ ಯಾರು ಗೊತ್ತಾ?

ಅದರಲ್ಲೂ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯನ್ನು ಹಿಂದಕ್ಕೆ ಪಡೆಯಬೇಕು. ಈ ದುರುದ್ದೇಶದಿಂದ ಈ ಕೃತ್ಯವನ್ನು ನಡೆಸಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಸಾಕ್ಷ್ಯಾಧಾರಗಳನ್ನು ನೀಡುತ್ತಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಿ ಎಂದು ಮಂಗಳೂರು ಕಮಿಷನರ್‌ಗೆ ಲಿಖಿತ ದೂರು ನೀಡಿದ್ದಾರೆ. ಇದನ್ನೂ ಓದಿ: ಅನಗತ್ಯ ವೆಚ್ಚ, ಲೂಟಿಗೆ ಕಡಿವಾಣ ಹಾಕಿ ಅತ್ಯಧಿಕ ಗಾತ್ರದ ಬಜೆಟ್‌ ಮಂಡಿಸಿದ ಕೇಂದ್ರ ಸರ್ಕಾರ: ಆರ್‌.ಅಶೋಕ್

Share This Article