ಜ್ಯೂ.ಎನ್‌ಟಿಆರ್ ಜೊತೆ ತೆರೆಹಂಚಿಕೊಳ್ತಾರಂತೆ ತೃಪ್ತಿ ದಿಮ್ರಿ

Public TV
1 Min Read
tripthi dimri

ಸಿನಿಮಾ, ಸೋಷಿಯಲ್ ಮೀಡಿಯಾ ಏಲ್ಲೆಲ್ಲೂ ಸದ್ದು ಮಾಡ್ತಿರೋ ಏಕೈಕ ಹೆಸರು ಅಂದರೆ ‘ಅನಿಮಲ್’ ಬೆಡಗಿ ತೃಪ್ತಿ ದಿಮ್ರಿ. ಅಷ್ಟರ ಮಟ್ಟಿಗೆ ‘ಅನಿಮಲ್’ (Animal) ಚಿತ್ರದ ನಟಿ ತೃಪ್ತಿ ಮೇಲಿನ ಕ್ರೇಜ್ ಫ್ಯಾನ್ಸ್‌ಗೆ ಹೆಚ್ಚಾಗಿದೆ. ತೆಲುಗಿನ ಸ್ಟಾರ್ ಹೀರೋ ಜ್ಯೂ.ಎನ್‌ಟಿಆರ್ ಜೊತೆ ತೃಪ್ತಿ ತೆರೆಹಂಚಿಕೊಳ್ತಾರಂತೆ. ಈ ಕುರಿತ ವಿಚಾರ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

tripti dimri

ರಣ್‌ಬೀರ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಅನಿಮಲ್’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಲೂಟಿ ಮಾಡ್ತಿದೆ. ರಶ್ಮಿಕಾರನ್ನ ನೋಡಲು ಹೋಗಿದ್ದ ಫ್ಯಾನ್ಸ್ ಇದೀಗ ತೃಪ್ತಿ ದಿಮ್ರಿ (Tripti Dimri) ನಶೆಯಲ್ಲಿದ್ದಾರೆ. ಅಷ್ಟರ ಮಟ್ಟಿಗೆ ತೃಪ್ತಿ ಪಡ್ಡೆಹುಡುಗರ ಎದೆಯಲ್ಲಿ ಆವರಿಸಿಕೊಂಡಿದ್ದಾರೆ.

tripti dimri 1 1

‘ಅನಿಮಲ್’ ಚಿತ್ರದಲ್ಲಿ ತೃಪ್ತಿ, ಸಿಕ್ಕಾಪಟ್ಟೆ ಬೋಲ್ಡ್ ಆಗಿ ರಣ್‌ಬೀರ್ (Ranbir Kapoor) ಜೊತೆ ನಟಿಸಿದ್ದರು. ಬ್ಯೂಟಿ ಅಷ್ಟೇ ಅಲ್ಲ, ಆ್ಯಕ್ಟಿಂಗ್ ಮೂಲಕನೂ ತೃಪ್ತಿ ಸೈ ಎನಿಸಿಕೊಂಡರು. ಇದೀಗ ಬಾಲಿವುಡ್, ಟಾಲಿವುಡ್‌ನಿಂದ ನಟಿಗೆ ಅಪಾರ ಅವಕಾಶಗಳು ಅರಸಿ ಬರುತ್ತಿವೆ. ಇದೀಗ ಸಂದರ್ಶನವೊಂದರಲ್ಲಿ ನಟಿ ತಮ್ಮ ಆಸೆಯನ್ನ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:‘ಕಾಂತಾರ’ದಲ್ಲಿ ನಟಿಸೋಕೆ ಅವಕಾಶ ಕೇಳಿದ ನಟಿಯರು

ತೆಲುಗು ಸಿನಿಮಾರಂಗದಿಂದ ಸಾಕಷ್ಟು ಅವಕಾಶಗಳು ಬರುತ್ತಿವೆ. ಆದರೆ ನನ್ನ ತೆಲುಗು ಡೆಬ್ಯೂ ಸಿನಿಮಾ ಜ್ಯೂ.ಎನ್‌ಟಿಆರ್ (Jr.Ntr) ಜೊತೆ ಮಾಡಲು ಇಷ್ಟ ಎಂದು ತೃಪ್ತಿ ಹೇಳಿದ್ದಾರೆ. ತಾರಕ್ ನಟನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಮೂಲಕ ನಟಿ, ತಾರಕ್ ಜೊತೆ ನಟಿಸುವ ಸೂಚನೆ ಕೊಟ್ರಾ? ಎಂಬ ಅನುಮಾನ ಕೂಡ ಎಲ್ಲರನ್ನ ಕಾಡುತ್ತಿದೆ. ಸದ್ಯ ಅನಿಮಲ್ ಸಕ್ಸಸ್ ಖುಷಿಯಲ್ಲಿರೋ ನಟಿ ಮುಂದಿನ ನಡೆಯೇನು? ಸಿನಿಮಾ ಕುರಿತು ಗುಡ್ ನ್ಯೂಸ್ ಕೊಡ್ತಾರೆ ಕಾಯಬೇಕಿದೆ.

Share This Article