ಪಡ್ಡೆಹುಡುಗರ ಎದೆಬಡಿತ ಹೆಚ್ಚಿಸಿದ ತೃಪ್ತಿ ದಿಮ್ರಿ ನಯಾ ಫೋಟೋಶೂಟ್

Public TV
1 Min Read
triptii dimri

ಬಾಲಿವುಡ್ ಬ್ಯೂಟಿ ತೃಪ್ತಿ ದಿಮ್ರಿ (Triptii Dimri) ಅವರು ಸದ್ಯ ಪಡ್ಡೆಹುಡುಗರ ಎದೆ ಬಡಿತ ಹೆಚ್ಚಿಸಿದ್ದಾರೆ. ನಯಾ ಫೋಟೋಶೂಟ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ‘ಅನಿಮಲ್’ (Animal) ಬ್ಯೂಟಿಯ ಹೊಸ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

triptii dimri 2

ಇಂಟರ್‌ನೆಟ್ ಸೆನ್ಸೇಷನ್ ಕ್ವೀನ್ ತೃಪ್ತಿ ಅವರು ಗುಲಾಬಿ ಬಣ್ಣದ ಡ್ರೆಸ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ತೃಪ್ತಿ ಬ್ಯೂಟಿಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಸಖತ್ ಹಾಟ್ ಆಗಿದ್ದೀರಾ ಎಂದೆಲ್ಲಾ ನಟಿಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.‌ ಇದನ್ನೂ ಓದಿ:ಖ್ಯಾತ ನಟ ಬ್ರಿಜೇಶ್ ತ್ರಿಪಾಠಿ ಹೃದಯಾಘಾತದಿಂದ ನಿಧನ

triptii dimri 3

‘ಅನಿಮಲ್’ ಚಿತ್ರದಲ್ಲಿ ಸೆಕೆಂಡ್ ಹೀರೋಯಿನ್ ಅದ್ಯಾವಾಗ ದರ್ಶನ ಕೊಟ್ಟ ದಿನದಿಂದ ತೃಪ್ತಿ ದಿಮ್ರಿ ಲಕ್ ಬದಲಾಯ್ತು. ರಶ್ಮಿಕಾ (Rashmika Mandanna) ನ್ಯಾಷನಲ್ ಕ್ರಶ್ ಅಲ್ಲ, ನೀವು ನಿಜವಾದ ನ್ಯಾಷನಲ್ ಕ್ರಶ್ ಎಂದು ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ.

ರಣ್‌ಬೀರ್ (Ranbir Kapoor) ಜೊತೆ ಅರೆ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದ ತೃಪ್ತಿಗೆ ಇದೀಗ ಬಾಲಿವುಡ್‌ನಲ್ಲಿ ಬೇಡಿಕೆ ಜಾಸ್ತಿ ಆಗಿದೆ. ತೆಲುಗು, ತಮಿಳು ಸಿನಿಮಾಗಳಲ್ಲೂ ನಟಿಗೆ ಅವಕಾಶಗಳು ಒಲಿದು ಬರುತ್ತಿವೆ.

Share This Article