‘ಅನಿಮಲ್’ ಬ್ಯೂಟಿ ತೃಪ್ತಿ ದಿಮ್ರಿ (Tripti Dimri) ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಹೊಸ ಪ್ರಾಜೆಕ್ಡ್‌ಗೆ ಬ್ರೇಕ್ ಸಿಕ್ಕ ಬೆನ್ನಲ್ಲೇ ಬಾಯ್‌ಫ್ರೆಂಡ್ ಜೊತೆ ಗೋವಾಗೆ ಹಾರಿದ್ದಾರೆ. ಗೋವಾದ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.
‘ಭೂಲ್ ಭುಲೈಯಾ 3’ ಚಿತ್ರದಲ್ಲಿ ಕಾರ್ತಿಕ್ ಆರ್ಯನ್‌ಗೆ ತೃಪ್ತಿ ದಿಮ್ರಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಇತ್ತ ಶೂಟಿಂಗ್‌ಗೆ ಬ್ರೇಕ್ ಬೀಳುತ್ತಿದ್ದಂತೆ ಬಾಯ್‌ಫ್ರೆಂಡ್ ಸ್ಯಾಮ್ ಮರ್ಚೆಂಟ್ ಜೊತೆ ಗೋವಾದಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ.
ಬಾಯ್‌ಫ್ರೆಂಡ್ ಜೊತೆ ಇರುವ ಫೋಟೋ ನಟಿ ಶೇರ್ ಮಾಡದೇ ಇದ್ದರೂ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಫೋಟೋ ಒಂದೇ ಆಗಿದೆ. ಇಬ್ಬರ ಡೇಟಿಂಗ್ ಬಗ್ಗೆ ಫ್ಯಾನ್ಸ್‌ಗೆ ಪುಷ್ಠಿ ಸಿಕ್ಕಂತೆ ಆಗಿದೆ.
ಇದಷ್ಟೇ ಅಲ್ಲ, ಕೆಲದಿನಗಳ ಹಿಂದೆ ಬಾಯ್‌ಫ್ರೆಂಡ್ ಜೊತೆ ಹೋಳಿ ಹಬ್ಬವನ್ನು ನಟಿ ಸಂಭ್ರಮದಿಂದ ಆಚರಿಸಿದ್ದರು. ಇಬ್ಬರ ಹೋಳಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಇದನ್ನೂ ಓದಿ:‘ಆಡುಜೀವಿತಂ’ ಬಾಕ್ಸ್ ಆಫೀಸಿನಲ್ಲೂ ಅಚ್ಚರಿಯ ಗಳಿಕೆ
ರಣ್‌ಬೀರ್ ಕಪೂರ್ (Ranbir Kapoor) ಜೊತೆ ‘ಅನಿಮಲ್’ (Animal) ಸಿನಿಮಾದಲ್ಲಿ ನಟಿಸಿದ ಮೇಲೆ ತೃಪ್ತಿ ದಿಮ್ರಿಗೆ ಬೇಡಿಕೆ ಜಾಸ್ತಿ ಆಗಿದೆ. ರಶ್ಮಿಕಾ ಮಂದಣ್ಣಗೆ (Rashmika Mandanna) ಠಕ್ಕರ್ ಕೊಟ್ಟು ತೃಪ್ತಿ ಮಿಂಚಿದ್ದಾರೆ. ಹೊಸ ಸಿನಿಮಾ ಆಫರ್ಸ್ ನಟಿ ಗಿಟ್ಟಿಸಿಕೊಳ್ತಿದ್ದಾರೆ.