‘ಅನಿಮಲ್’ ಖ್ಯಾತಿಯ (Animal) ನಟಿ ತೃಪ್ತಿ ದಿಮ್ರಿಗೆ (Tripti Dimri) ಬಿಗ್ ಚಾನ್ಸ್‌ವೊಂದು ಸಿಕ್ಕಿದೆ. ಸೂಪರ್ ಸ್ಟಾರ್ ಪ್ರಭಾಸ್‌ಗೆ ನಾಯಕಿಯಾಗಿ ತೃಪ್ತಿ ದಿಮ್ರಿ ನಟಿಸಲಿದ್ದಾರೆ. ಈ ಕುರಿತು ಚಿತ್ರತಂಡವೇ ಅಧಿಕೃತ ಘೋಷಣೆ ಮಾಡಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಬಳಿಕ ಬಿಗ್ ನ್ಯೂಸ್ ಕೊಟ್ರು ಮೋಕ್ಷಿತಾ ಪೈ!
ಡಾರ್ಲಿಂಗ್ ಪ್ರಭಾಸ್ (Prabhas) ಜೊತೆ ತೃಪ್ತಿ ದಿಮ್ರಿ ರೊಮ್ಯಾನ್ಸ್ ಮಾಡಲಿದ್ದಾರೆ. ‘ಸ್ಪಿರಿಟ್’ಗೆ (Spirit) ತೃಪ್ತಿ ನಾಯಕಿ ಎಂದು 9 ಭಾಷೆಗಳಲ್ಲಿ ಪೋಸ್ಟರ್ ಮೂಲಕ ಚಿತ್ರತಂಡ ತಿಳಿಸಿದೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದಗಳು. ಈ ಚಿತ್ರದ ಭಾಗವಾಗಲು ಹೆಮ್ಮೆಯಾಗುತ್ತಿದೆ. ‘ಅನಿಮಲ್’ ಬಳಿಕ ಮತ್ತೆ ‘ಸ್ಪಿರಿಟ್’ ಅವಕಾಶ ಕೊಟ್ಟಿದ್ದಕ್ಕೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾಗೆ (Sandeep Reddy Vanga) ನಟಿ ಥ್ಯಾಂಕ್ಯೂ ಎಂದಿದ್ದಾರೆ.
View this post on Instagram
ನಾಯಕಿ ತೃಪ್ತಿ ಹೆಸರನ್ನು 9 ಭಾಷೆಗಳಲ್ಲಿ ಉಲ್ಲೇಖಿಸಿ ಅನೌನ್ಸ್ ಮಾಡಿರೋದ್ದಕ್ಕೆ ‘ಸ್ಪಿರಿಟ್’ ಸಿನಿಮಾ 9 ಭಾಷೆಗಳಲ್ಲಿ ಮೂಡಿ ಬರಲಿದ್ಯಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಇದನ್ನೂ ಓದಿ:‘ಮಾರ್ನಮಿ’ಗೆ ಮೋಹಕ ತಾರೆ ರಮ್ಯಾ ಸಾಥ್ – ರಿವೀಲಾಯ್ತು ಚೈತ್ರಾ ಆಚಾರ್ ರೋಲ್
ಈ ಚಿತ್ರದಲ್ಲಿ ಪ್ರಭಾಸ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ತಿದ್ದಾರೆ. ಹೀಗಾಗಿ ತೃಪ್ತಿ ಪಾತ್ರ ಈ ಚಿತ್ರದಲ್ಲಿ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.