ರಶ್ಮಿಕಾ ಮಂದಣ್ಣ ಜಪಾನ್‌ಗೆ ಹೋಗಿದ್ದು ಪುಷ್ಪ 2ಗಾಗಿ ಅಲ್ಲ- ಮತ್ಯಾಕೆ?

Public TV
1 Min Read
rashmika mandanna

ನ್ನಡದ ನಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ಈಗ ಭಾರೀ ಬೇಡಿಕೆಯಿದೆ. ಸೌತ್ ಮತ್ತು ಬಾಲಿವುಡ್‌ನಲ್ಲಿ ಕಿರಿಕ್ ಬ್ಯೂಟಿಗೆ ಭಾರೀ ಬೇಡಿಕೆಯಿದೆ. ಸದ್ಯ ನಟಿ ಜಪಾನ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಆದರೆ ‘ಪುಷ್ಪ 2’ ಚಿತ್ರದ ಶೂಟಿಂಗ್‌ಗಾಗಿ (Pushpa 2) ಅಲ್ಲ. ಹಾಗಾದ್ರೆ ಮತ್ಯಾಕೆ ಅಲ್ಲಿದ್ದಾರೆ. ಇಲ್ಲಿದೆ ಮಾಹಿತಿ.

rashmika mandanna 1 1

ರಶ್ಮಿಕಾ ಮಂದಣ್ಣ ನ್ಯಾಶನಲ್ ಕ್ರಶ್ ಆಗಿದ್ದರು. ಈಗ ಇಂಟರ್‌ನ್ಯಾಶನಲ್ ಕ್ರಶ್ ಆಗಿದ್ದಾರೆ. ಅದಕ್ಕೆ ಸಾಕ್ಷಿ ಸಿಕ್ಕಿದೆ. ದೂರದ ಟೋಕಿಯೋ ನಗರಕ್ಕೆ ರಶ್ಮಿಕಾ ಹಾರಿದ್ದಾರೆ. ಇದ್ದ ಬದ್ದ ಕೆಲಸವನ್ನು ಬಿಟ್ಟು ರಶ್ಮಿಕಾ ಅಲ್ಲಿಗೆ ಹೋಗಿದ್ದಕ್ಕೆ ಕಾರಣ ಅಲ್ಲಿ ನಡೆಯುತ್ತಿರುವ ಫಿಲ್ಮ್ ಫೆಸ್ಟಿವಲ್. ಕ್ರಂಚ್ ರೋಲ್ ಅನಿಮೆ ಅವಾರ್ಡ್ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದಾರೆ. ಇಂಡಿಯಾದಿಂದ ಅಲ್ಲಿಗೆ ಹೋಗಿರುವ ಏಕೈಕ ಸ್ಟಾರ್ ರಶ್ಮಿಕಾ ಮಂದಣ್ಣ. ಇದನ್ನೂ ಓದಿ:ಅಂಬಾನಿ ಮಗನ ಪ್ರೀ-ವೆಡ್ಡಿಂಗ್‌ನಲ್ಲಿ ಬಾಯ್‌ಫ್ರೆಂಡ್ ಜೊತೆ ಶ್ರದ್ಧಾ ಕಪೂರ್

Rashmika Mandanna

6-7 ವರ್ಷದ ಹಿಂದೆ ಇಲ್ಲಿದ್ದ ಹುಡುಗಿ ಇದು. ‘ಕಿರಿಕ್ ಪಾರ್ಟಿ’ (Kirik Party) ಕೊಟ್ಟ ಹಿಟ್ ಇದೆಯಲ್ಲ. ಅದು ಇಂದು ಆಕೆಯನ್ನು ಎಲ್ಲಿಗೋ ಹೋಗಿ ಮುಟ್ಟಿಸಿದೆ. ಟಾಲಿವುಡ್‌ನಲ್ಲಿ ಹವಾ ಎಬ್ಬಿಸಿ ಈಗ ಬಾಲಿವುಡ್‌ನಲ್ಲಿ ಬೆರಗು ಮೂಡಿಸುತ್ತಿದ್ದಾರೆ. ಈಗ ನೋಡಿ ಬಿರುಗಾಳಿ ಅಲ್ಲಿ ಎಬ್ಬಿಸುತ್ತಿದ್ದಾರೆ.

ಪುಷ್ಪ 2, ರೈನ್‌ಬೋ, ಗರ್ಲ್‌ಫ್ರೆಂಡ್, ಅನಿಮಲ್ 2, ಧನುಷ್ (Dhanush) ಜೊತೆಗಿನ ಹೊಸ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳು ರಶ್ಮಿಕಾ ಮಂದಣ್ಣ ಕೈಯಲ್ಲಿದೆ.

Share This Article