ಪುಷ್ಪ, ಅನಿಮಲ್ (Animal) ಸಿನಿಮಾಗಳ ಮೂಲಕ ಬಹುಬೇಡಿಕೆಯ ನಟಿಯಾಗಿರುವ ರಶ್ಮಿಕಾ ಮಂದಣ್ಣ (Rashmika Mandanna) ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ನಟಿ ಬಿಗ್ ಅಪ್‌ಡೇಟ್‌ವೊಂದನ್ನು ನೀಡಿದ್ದಾರೆ. ಈ ಹಿಂದೆ ಡೀಪ್ ಫೇಕ್ ವಿಡಿಯೋನಿಂದ ಸಮಸ್ಯೆ ಎದುರಿಸಿದ್ದ ರಶ್ಮಿಕಾ ಮಂದಣ್ಣ ಈಗ ಸೈಬರ್ ಕ್ರೈಂ ರಾಷ್ಟ್ರೀಯ ರಾಯಭಾರಿ ನೇಮಕ ಆಗಿದ್ದಾರೆ. ಈ ಕುರಿತು ನಟಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಬಳ್ಳಾರಿ ಜೈಲಧಿಕಾರಿಗಳ ಕೈ ಸೇರಿದ ದರ್ಶನ್ ಮೆಡಿಕಲ್ ರಿಪೋರ್ಟ್
Advertisement
ವಿಡಿಯೋದಲ್ಲಿ ರಶ್ಮಿಕಾ ಮಾತನಾಡಿ, ಸೈಬರ್ ಅಪರಾಧವು ಅಪಾಯಕಾರಿ ಮತ್ತು ವ್ಯಾಪಕವಾದ ಸಮಸ್ಯೆಯಾಗಿದೆ. ಅದು ಪ್ರಪಂಚದಾದ್ಯಂತ ಇರುವ ವ್ಯಕ್ತಿಗಳು, ವ್ಯವಹಾರಗಳು ಮತ್ತು ಸಮುದಾಯಗಳ ಮೇಲೆ ಪರಿಣಾಮ ಬೀರುತ್ತದೆ. ಸೈಬರ್ ಸಮಸ್ಯೆಯನ್ನು ಅನುಭವಿಸಿರುವ ವ್ಯಕ್ತಿಯಾಗಿ, ಈ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಧನಾತ್ಮಕ ಬದಲಾವಣೆಯನ್ನು ತರಲು ಸೈಬರ್ ಸುರಕ್ಷತೆಯ ಸಂದೇಶವನ್ನು ಪ್ರಚಾರ ಮಾಡಲು ನಾನು ಉತ್ಸುಕಗಳಾಗಿದ್ದೇನೆ. ಈ ಕಾರ್ಯದಲ್ಲಿ ನಾನು ಸಕ್ರಿಯವಾಗಿ ತೊಡಗಿಕೊಳ್ಳಲಿದ್ದೇನೆ. ಎಲ್ಲರೂ ಒಟ್ಟಾಗಿ ಭಾರತವನ್ನು ಸೈಬರ್ ಅಪರಾಧಗಳಿಂದ ಮುಕ್ತಗೊಳಿಸೋಣ ಎಂದು ನಟಿ ತಿಳಿಸಿದ್ದಾರೆ.
Advertisement
View this post on Instagram
Advertisement
ಇನ್ನೂ ಮುಂದೆ ಅಪಾಯಕಾರಿ ಸೈಬರ್ ಕ್ರೈಂ, ಡೀಪ್ ಫೇಕ್ ವಿಡಿಯೋ, ಆನ್ ಲೈನ್ ಫ್ರಾಡ್ ಇನ್ನಿತರೆ ಸೈಬರ್ ಸಂಬಂಧಿ ಅಪರಾಧಗಳ ಕುರಿತಾಗಿ ಸಾಕ್ಷರತೆ, ಜಾಗೃತೆ ಮೂಡಿಸುವ ಕಾರ್ಯವನ್ನು ರಶ್ಮಿಕಾ ಮಾಡಲಿದ್ದಾರೆ.
Advertisement