‘ಅನಿಮಲ್’ (Animal) ಸಿನಿಮಾದ ಸಕ್ಸಸ್ ನಂತರ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ರಣ್ಬೀರ್ ನೀಡಿರುವ ಸಂದರ್ಶನವೊಂದರಲ್ಲಿ ಸ್ಟಾರ್ ನಟಿಯರ ಜೊತೆಗಿನ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. ನನಗೆ ಸ್ತ್ರೀಲೋಲ, ಚೀಟರ್ ಎಂಬ ಹಣೆಪಟ್ಟಿ ಇದೆ. ಈಗಾಲೂ ಹಾಗೆಯೇ ಬದುಕುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:ಧ್ರುವ ಸರ್ಜಾ ಫ್ಯಾನ್ಸ್ಗೆ ಗುಡ್ ನ್ಯೂಸ್- ಜು.29ರಂದು ಹೊರಬೀಳಲಿದೆ ‘ಕೆಡಿ’ ಚಿತ್ರದ ಅಪ್ಡೇಟ್
Advertisement
ಈ ಹಿಂದೆ ಕತ್ರಿನಾ ಕೈಫ್ (Katrina Kaif) ಮತ್ತು ದೀಪಿಕಾ ಪಡುಕೋಣೆ (Deepika Padukone) ಜೊತೆ ಡೇಟಿಂಗ್ ಮಾಡಿದ್ದರ ಕುರಿತು ರಣ್ಬೀರ್ ಕಪೂರ್ (Ranbir Kapoor) ಸಂದರ್ಶನವೊಂದರಲ್ಲಿ ಮೌನ ಮುರಿದಿದ್ದಾರೆ. ನಾನು ಈ ಹಿಂದೆ ಇಬ್ಬರು ಯಶಸ್ವಿ ನಟಿಯರೊಂದಿಗೆ ಡೇಟ್ ಮಾಡಿದ್ದೆ. ಅದು ನನ್ನ ಐಡೆಂಟಿಟಿ ಆಗಿ ಹೋಯಿತು. ನನಗೆ ಚೀಟರ್, ಸ್ತ್ರೀಲೋಲ ಎನ್ನುವ ಟ್ಯಾಗ್ ಸಿಕ್ಕಿತು. ನನ್ನ ಜೀವನದ ಬಹುಪಾಲು ನಾನು ಮೋಸಗಾರ ಎಂಬ ಹಣೆಪಟ್ಟಿಯೊಂದಿಗೆ ಬದುಕಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:ರೇಣುಕಾಸ್ವಾಮಿ ಕುಟುಂಬಕ್ಕೆ 1 ಲಕ್ಷ ನೆರವು ನೀಡಿದ ನಟ ವಿನೋದ್ ರಾಜ್
Advertisement
Advertisement
ಮಗಳು ರಾಹಾ ಮೇಲೆ ರಣ್ಬೀರ್ಗೆ ಅಪಾರ ಪ್ರೀತಿ ಇದೆ. ಈ ಮೂಲಕ ರಾಹಾ (Raha) ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಆಲಿಯಾ ಭಟ್ (Aliaa Bhatt) ಜೊತೆ ಸುಂದರ ಬದುಕು ಕಂಡುಕೊಂಡಿದ್ದಾರೆ ರಣ್ಬೀರ್.
Advertisement
ಅಂದಹಾಗೆ, ದೀಪಿಕಾ ಪಡುಕೋಣೆ ಜೊತೆ ನಟ ಡೇಟ್ ಮಾಡಿದ್ದರು. ಈ ರಿಲೇಷನ್ಶಿಪ್ಗೆ 2010ರಲ್ಲಿ ಬ್ರೇಕ್ ಬಿದ್ದಿತ್ತು. ಬಳಿಕ 6 ವರ್ಷಗಳ ಡೇಟಿಂಗ್ ನಂತರ 2016ರಲ್ಲಿ ಕತ್ರಿನಾ ಕೈಫ್ ಜೊತೆನೂ ರಣ್ಬೀರ್ ಬ್ರೇಕಪ್ ಮಾಡಿಕೊಂಡರು. ನಂತರ ಆಲಿಯಾ ಭಟ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.