ಆಲಿಯಾ ಭಟ್ ಸಿನಿಮಾಗೆ ಅನಿಲ್ ಕಪೂರ್ ಎಂಟ್ರಿ

Public TV
1 Min Read
alia bhatt

ಬಾಲಿವುಡ್ ಬ್ಯೂಟಿ ಆಲಿಯಾ ಭಟ್ (Alia Bhatt) ಇದೀಗ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಚಿತ್ರದಲ್ಲಿ ರಾ ಏಜೆಂಟ್ ಪಾತ್ರದಲ್ಲಿ ಆಲಿಯಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ‘ಅನಿಮಲ್’ (Animal) ಖ್ಯಾತಿಯ ಅನಿಲ್ ಕಪೂರ್ (Anil Kapoor) ಎಂಟ್ರಿ ಕೊಟ್ಟಿದ್ದಾರೆ.

alia bhatt 1ಆಲಿಯಾ ಭಟ್ ಹೀರೋಯಿನ್ ಆಗಿ ಡ್ಯುಯೇಟ್ ಹಾಡೋಕೆ ಸೈ. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸೋದಕ್ಕೂ ಮುಂದಿದ್ದಾರೆ. ಹೀಗಿರುವಾಗ ಆಲಿಯಾ ಆ್ಯಕ್ಷನ್ ಪಾತ್ರದಲ್ಲಿ ನಟಿಸಲು ರೆಡಿಯಾಗಿದ್ದಾರೆ. ಇದನ್ನೂ ಓದಿ:ಮಹೇಶ್ ಬಾಬು ಫೋಟೋಗೆ ರಶ್ಮಿಕಾರನ್ನು ಹೋಲಿಸಿದ ನೆಟ್ಟಿಗರು

heart of stone alia bhatt 2

ಪತ್ತೇದಾರಿ ಸಿನಿಮಾದಲ್ಲಿ ಆಲಿಯಾ ಭಟ್ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಆಲಿಯಾಗೆ ಸಾಥ್ ನೀಡಲು ಅನಿಲ್ ಕಪೂರ್ ಕೂಡ ಬಹುಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾ ಏಜೆಂಟ್ ಮುಖ್ಯಸ್ಥ ಪಾತ್ರದಲ್ಲಿ ಅನಿಲ್ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ:ಹೆಣ್ಣಿಗೆ ನೋವು ಕೊಟ್ಟರೆ ಉದ್ಧಾರ ಆಗಲ್ಲ- ಅಶ್ವಿನಿ ಬೆಂಬಲಕ್ಕೆ ನಿಂತ ಜಗ್ಗೇಶ್


ಟೈಗರ್ 3, ವಾರ್ 2 ಸಿನಿಮಾದ ನಂತರ ಆಲಿಯಾ ಹೊಸ ಸಿನಿಮಾ ಸೆಟ್ಟೇರಲಿದೆ. ಸದ್ಯದಲ್ಲಿ ಚಿತ್ರದ ಶೂಟಿಂಗ್ ಕೂಡ ಶುರುವಾಗಲಿದೆ.

Share This Article