ಲಾಫಿಂಗ್ ಬುದ್ದ ಫಿಲಂಸ್ ಲಾಂಛನದಲ್ಲಿ ಇಂದ್ರಜಿತ್ ಲಂಕೇಶ್ ನಿರ್ಮಿಸಿ, ನಿರ್ದೇಶಿಸಿರುವ ಹಾಗೂ ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸಿರುವ ಮೊದಲ ಚಿತ್ರ ‘ಗೌರಿ’. ಇತ್ತೀಚಿಗೆ ಈ ಚಿತ್ರದ ಪ್ರೀ ಟೀಸರ್ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಸ್ಪಿನ್ ಮಾಂತ್ರಿಕ ಎಂದೆ ಖ್ಯಾತರಾಗಿರುವ ಅನಿಲ್ ಕುಂಬ್ಳೆ ಹಾಗೂ ಹೆಸರಾಂತ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಗೌರಿ ಚಿತ್ರದ ಪ್ರೀ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು. ನಿರ್ಮಾಪಕ ರಮೇಶ್ ರೆಡ್ಡಿ, ಪತ್ರಕರ್ತ ಸದಾಶಿವ ಶೆಣೈ, ಕವಿತಾ ಲಂಕೇಶ್ ಸೇರಿದಂತೆ ಸಾಕಷ್ಟು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
Advertisement
ನಾನು ಹಾಗೂ ಅಜಿತ್(ಇಂದ್ರಜಿತ್) ಹಲವು ವರ್ಷಗಳ ಗೆಳೆಯರು. ಅವರ ಮಗ ಸಮರ್ಜಿತ್ ನನ್ನ ಜೊತೆ ಜಾಹೀರಾತೊಂದರಲ್ಲಿ ಅಭಿನಯಿಸಿದ್ದರು. ಈಗ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಾನ್ಯಾ ಅಯ್ಯರ್ ನಾಯಕಿಯಾಗಿ ನಟಿಸಿದ್ದಾರೆ. ಇಬ್ಬರು ಯುವ ಪ್ರತಿಭೆಗಳ ಭವಿಷ್ಯ ಉಜ್ವಲವಾಗಲಿ ಎಂದು ಅನಿಲ್ ಕುಂಬ್ಳೆ ಹಾರೈಸಿದರು.
Advertisement
Advertisement
ಅನಿಲ್ ಕುಂಬ್ಳೆ ಅವರ ಜೊತೆಗೆ ನನ್ನದು ಮೂವತ್ತು ವರ್ಷಕ್ಕೂ ಮೀರಿದ ಗೆಳೆತನ. ಹಾಗೆ ಪುನೀತ್ ರಾಜಕುಮಾರ್ ಸಹ ಬಹಳ ಆತ್ಮೀಯರು. ಇಂದು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಅನಿಲ್ ಕುಂಬ್ಳೆ ಅವರು ನಮ್ಮ ಗೌರಿ ಚಿತ್ರದ ಪ್ರೀ ಟೀಸರ್ ಬಿಡುಗಡೆ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ. ನನ್ನ ಮಗ ಸಮರ್ಜಿತ್ ನಾಯಕನಾಗಲು ಬೇಕಾದ ಎಲ್ಲಾ ತಯಾರಿ ಮಾಡಿಕೊಂಡು ಈ ಚಿತ್ರದಲ್ಲಿ ಅಭಿನಯಿಸಿದ್ದಾನೆ. ಸಾನ್ಯಾ ಅವರ ಅಭಿನಯ ಕೂಡ ಉತ್ತಮವಾಗಿದೆ. ಗೌರಿ ಚಿತ್ರ ಯಾವುದಕ್ಕೂ ಕಡಿಮೆ ಇಲ್ಲದೆ ಅದ್ದೂರಿಯಾಗಿ ಮೂಡಿಬಂದಿದೆ. ಚಿತ್ರಕ್ಕೆ ಎ.ಜೆ.ಶೆಟ್ಟಿ ಹಾಗೂ ಕೆ.ಕೆ ಇಬ್ಬರು ಛಾಯಾಗ್ರಾಹಕರು, ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಬೋರ್ಗಿ ಹಾಗೂ ಅನಿರುದ್ದ್ ಶಾಸ್ತ್ರಿ ನಾಲ್ವರು ಸಂಗೀತ ನಿರ್ದೇಶಕರು. ಮ್ಯಾಥ್ಯೂಸ್ ಮನು ರೀರೆಕಾರ್ಡಿಂಗ್ ಮಾಡಿದ್ದಾರೆ. ವಿ.ನಾಗೇಂದ್ರಪ್ರಸಾದ್, ಕವಿರಾಜ್, ಕೆ.ಕಲ್ಯಾಣ್, ವರದರಾಜ್ ಈ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಕೈಲಾಶ್ ಖೇರ್ ,ಚಂದನ್ ಶೆಟ್ಟಿ, ಅನಿರುದ್ಧ ಶಾಸ್ತ್ರಿ, ಜಾವೇದ್ ಅಲಿ, ಅನನ್ಯ ಭಟ್, ನಿಹಾಲ್ ತೌರೋ, ಅದಿತಿ ಸಾಗರ್, ಬಾಲಸುಬ್ರಹ್ಮಣ್ಯಂ ಹಾಗೂ ಪ್ರಜ್ಞಾ ಮರಾಠೆ, ಸಮರ್ಜಿತ್ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಗುಬ್ಬಿ, ಮಾಸ್ತಿ, ರಾಜಶೇಖರ್ ಹಾಗೂ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ರವಿವರ್ಮ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಹೀಗೆ ನುರಿತ ತಂತ್ರಜ್ಞರ ಕಾರ್ಯವೈಖರಿ ಹಾಗು ಕಲಾವಿದರ ಉತ್ತಮ ಅಭಿನಯದಿಂದ ಚಿತ್ರ ಚೆನ್ನಾಗಿ ಬಂದಿದೆ ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದರು.
Advertisement
ನಮ್ಮ ಚಿತ್ರದ ಪ್ರೀ ಟೀಸರ್ ಬಿಡುಗಡೆ ಮಾಡಿಕೊಟ್ಟ ಅನಿಲ್ ಕುಂಬ್ಳೆ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಸಮರ್ಜಿತ್ ಲಂಕೇಶ್. ಅವಕಾಶ ಕೊಟ್ಟ ನಿರ್ಮಾಪಕ, ನಿರ್ದೇಶಕರಿಗೆ ಹಾಗೂ ಆಗಮಿಸಿದ್ದ ಗಣ್ಯರಿಗೆ ನಾಯಕಿ ಸಾನ್ಯಾ ಅಯ್ಯರ್ ವಿಶೇಷವಾಗಿ ಧನ್ಯವಾದ ಹೇಳಿದರು.
ಸಂಭಾಷಣೆ ಬರೆದಿರುವ ಮಾಸ್ತಿ, ರಾಜಶೇಖರ್, ಸಂಗೀತ ನಿರ್ದೇಶನ ಮಾಡಿರುವ ಅನಿರುದ್ದ್ ಶಾಸ್ತ್ರಿ, ಹಿನ್ನೆಲೆ ಸಂಗೀತ ನೀಡಿರುವ ಮ್ಯಾಥ್ಯೂಸ್ ಮನು, ನಟ ನೀನಾಸಂ ಅಶ್ವಥ್ ಹಾಗೂ ಗಾಯಕರಾದ ಅದಿತಿ ಸಾಗರ್, ಬಾಲಸುಬ್ರಹ್ಮಣ್ಯಂ ಹಾಗೂ ಪ್ರಜ್ಞಾ ಮರಾಠೆ ಮುಂತಾದವರು ಗೌರಿ ಚಿತ್ರದ ಕುರಿತು ಮಾತನಾಡಿದರು.