Connect with us

Latest

ತನ್ನ ನೆಚ್ಚಿನ ಕ್ಯಾಪ್ಟನ್ ಹೆಸ್ರು ರಿವೀಲ್ ಮಾಡಿದ್ರು ಅನಿಲ್ ಕುಂಬ್ಳೆ

Published

on

ನವದೆಹಲಿ: ಭಾರತದ ಕ್ರಿಕೆಟ್ ತಂಡದ ಮಾಜಿ ಕೋಚ್ ಅನಿಲ್ ಕುಂಬ್ಳೆಗೆ ಕ್ಯಾಪ್ಟನ್ ಮೊಹಮ್ಮದ್ ಅಝರುದ್ದೀನ್ ಅವರು ಇಷ್ಟವಾದ ಕ್ಯಾಪ್ಟನ್ ಆಗಿದ್ದಾರೆ.

ಶೇನ್ ವಾರ್ನ್ ಹಾಗೂ ಮುತ್ತಯ್ಯ ಮುರುಳೀಧರನ್ ಬಳಿಕ ಅತೀ ಹೆಚ್ಚು ವಿಕೆಟ್ ಪಡೆದ ಖ್ಯಾತಿಯಲ್ಲಿರುವ ಅನಿಲ್ ಕುಂಬ್ಳೆ ಅವರು ಕ್ಯಾಪ್ಟನ್ ಮೊಹಮ್ಮದ್ ಅಝರುದ್ದೀನ್ ತನಗೆ ಇಷ್ಟವಾದ ಕ್ಯಾಪ್ಟನ್ ಅಂತ ಹೇಳಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದಾಗ, ತಂಡದ ನಾಯಕನಾಗಿದ್ದ ಅಝರುದ್ದೀನ್ ಅವರಿಗೆ, ನಾಯಕತ್ವದ ವಿಚಾರದಲ್ಲಿ ಹೆಚ್ಚು ಅಂಕ ನೀಡುತ್ತೇನೆ ಅಂದ್ರು.

ನಾಯಕತ್ವ ಗುಣಗಳನ್ನು ಹೊಂದಿದ್ದ ಅಝರುದ್ದೀನ್, 174 ಏಕದಿನ ಪಂದ್ಯದಲ್ಲಿ 90 ಏಕದಿನ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು. 2014 ರಲ್ಲಿ ಎಂ.ಎಸ್ ಧೋನಿ, ಅವರ ದಾಖಲೆಯನ್ನೇ ಮುರಿದರು. ಅನಿಲ್ ಕುಂಬ್ಲೆ ಅವರ ಪತ್ನಿ ಚೇತನಾ ಕುಂಬ್ಳೆ, ಧೋನಿಯ ದೊಡ್ಡ ಅಭಿಮಾನಿಯಾಗಿದ್ದಾರೆ. ಧೋನಿ ಅವರನ್ನು ಭೇಟಿ ಮಾಡಿದಾಗ ಅವರೊಂದಿಗೆ ಫೋಟೋ ತೆಗೆಸಿಕೊಳ್ಳದೇ ಇರುವುದಿಲ್ಲ ಎಂದು ಹೇಳಿದರು.

1990 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಬಂದ ನಂತರ ಕುಂಬ್ಳೆ ಅವರು 132 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿ ಮುಟ್ಟಯ್ಯ ಮುರಳೀಧರನ್ ಮತ್ತು ಶೇನ್ ವಾರ್ನ್ ಮಾತ್ರ ಮೂರನೇ ವಿಕೆಟ್ ಪಡೆದವರು. 271 ಏಕದಿನ ಪಂದ್ಯಗಳಲ್ಲಿ ಅವರು 4.30ರ ಎಕಾನಮಿಯಲ್ಲಿ 337 ವಿಕೆಟ್‍ಗಳನ್ನು ಪಡೆದರು. 1999 ರಲ್ಲಿ ಕುಂಬ್ಳೆ ಅವರು ಟೆಸ್ಟ್ ಪಂದ್ಯವೊಂದರಲ್ಲಿ 10 ವಿಕೆಟ್‍ಗಳ ನೆರವಿನಿಂದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು. ಅವರು 300 ಟೆಸ್ಟ್ ವಿಕೆಟ್‍ಗಳನ್ನು ಪಡೆದ ಮೊದಲ ಭಾರತೀಯ ಸ್ಪಿನ್ನರ್ ಆಗಿದ್ದಾರೆ ಮತ್ತು ನವೆಂಬರ್ 2007 ರಲ್ಲಿ ತಂಡದ ನಾಯಕನಾಗಿ ಆಯ್ಕೆಯಾದರು. ನವೆಂಬರ್ 2008 ರಲ್ಲಿ ಅವರ ಅದ್ಭುತ ವೃತ್ತಿಜೀವನಕ್ಕೆ ಬ್ರೇಕ್ ಹಾಕಿದರು.

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷರಾಗಿ ಆಯ್ಕೆಯಾದರು ಮತ್ತು 2016 ರಲ್ಲಿ ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದ ಪ್ರಧಾನ ತರಬೇತುದಾರರಾಗಿ ನೇಮಕಗೊಳ್ಳುವ ಮುನ್ನ ಮೂರು ವರ್ಷಗಳವರೆಗೆ ಪಾತ್ರ ವಹಿಸಿದ್ದರಿಂದ ಕುಂಬ್ಳೆ ಅವರು ನಿವೃತ್ತಿಯ ನಂತರವೂ ಸಹ ಕ್ರಿಕೆಟ್‍ನೊಂದಿಗಿನ ಸಂಬಂಧವನ್ನು ಮುಂದುವರಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *