ದುಬೈ: ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿ ವಿವಾದಾತ್ಮಕ ‘ಬೌಂಡರಿ ಕೌಟ್’ ಸೇರಿದಂತೆ ಇತರೇ ಕ್ರಿಕೆಟ್ ನಿಯಮಗಳ ಬಗ್ಗೆ ಚರ್ಚೆ ನಡೆಸಲಿದೆ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬೌಂಡರಿಗಳ ಆಧಾರದಲ್ಲಿ ಇಂಗ್ಲೆಂಡ್ ನ್ಯೂಜಿಲೆಂಡ್ ಗೆಲುವು ಪಡೆದಿತ್ತು. ಆ ಬಳಿಕ ಐಸಿಸಿ ನಿಯಮಗಳ ಕುರಿತು ಹಲವರು ಕಿಡಿಕಾರಿದ್ದರು.
ಸೂಪರ್ ಓವರಿನಲ್ಲಿ ಟೈ ಆದ ಸಂದರ್ಭದಲ್ಲಿ ಯಾವ ತಂಡ ಹೆಚ್ಚು ಬೌಂಡರಿ ಸಿಡಿಸಿದೆ ಎಂಬ ಆಧಾರದ ಮೇಲೆ ಗೆಲುವುವನ್ನು ನಿರ್ಧರಿಸಲಾಗುತ್ತದೆ. ಈ ಬಗ್ಗೆ ಕ್ರಿಕೆಟ್ ವಿಶ್ಲೇಷಕರು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಪರಿಣಾಮ ಐಸಿಸಿ ಈ ಬಗ್ಗೆ ಸಮೀಕ್ಷಾ ಸಮಾವೇಶವನ್ನು ನಡೆಸಲು ತೀರ್ಮಾನಿಸಿದೆ. ಇದರ ಭಾಗವಾಗಿಯೇ ಕುಂಬ್ಳೆ ನೇತೃತ್ವದಲ್ಲಿ ಕಮಿಟಿ ರಚಿಸಲಾಗಿದೆ. ಈ ಕಮಿಟಿ ಸಭೆ ನಡೆಸಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಿದೆ.
Advertisement
Advertisement
ಕುಂಬ್ಳೆ ನೇತೃತ್ವದ ಸಭೆ ಮುಂದಿನ ವರ್ಷ ನಡೆಯಲಿದೆ ಎಂದು ಐಸಿಸಿ ಪ್ರಧಾನ ವ್ಯವಸ್ಥಾಪಕ ಸ್ಪಷ್ಟಪಡಿಸಿದ್ದಾರೆ. ಪಂದ್ಯ ಟೈ ಆದರೆ ಸೂಪರ್ ಓವರ್ ಮೂಲಕ ಫಲಿತಾಂಶವನ್ನು ನಿರ್ಣಹಿಸುವ ಪದ್ಧತಿಯನ್ನ 2009 ರಿಂದ ಅನುಸರಿಸುತ್ತಿದ್ದೆವೆ. ಸೂಪರ್ ಓವರ್ ನಲ್ಲೂ ಟೈ ಆದರೆ ಬೌಂಡರಿಗಳ ಆಧಾರದ ಮೇಲೆ ಗೆಲುವು ತೀರ್ಮಾನಿಸಲಾಗುತ್ತದೆ. ಇದೇ ವಿಶ್ವಕಪ ಫೈನಲ್ ಪಂದ್ಯದಲ್ಲೂ ನಡೆದಿದೆ. ವಿಶ್ವದ ಎಲ್ಲಾ ಟಿ20 ಕ್ರಿಕೆಟ್ ಟೂರ್ನಿಗಳಲ್ಲೂ ಇದನ್ನೇ ಅನುಸರಿಸಲಾಗುತ್ತಿದೆ. ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಒಂದೇ ರೀತಿಯ ನಿಯಮಗಳು ಇರಬೇಕಾಗಿದ್ದು, ಈ ಬಗ್ಗೆ ಗೊಂದಲಗಳು ಇದ್ದರೆ ಅನಿಲ್ ಕುಂಬ್ಳೆ ನೇತೃತ್ವದ ಸಮಿತಿ ತೀರ್ಮಾನಿಸಲಿದೆ ಎಂದು ವಿವರಿಸಿದ್ದಾರೆ. ಅನಿಲ್ ಕುಂಬ್ಳೆ ನೇತೃತ್ವ ಸಮಿತಿ ಯಾವ ತೀರ್ಮಾನ ಕೈಗೊಳ್ಳಿಲಿದೆ ಎಂಬುವುದನ್ನು ಕಾದು ನೋಡಬೇಕಿದೆ.