ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಆದೇಶ ಹೊರಡಿಸಿದೆ.
Advertisement
ದೇಶ್‌ಮುಖ್ ಅವರನ್ನು ನಮ್ಮ ಕಸ್ಟಡಿ ವಹಿಸುವಂತೆ ಜಾರಿ ನಿರ್ದೇಶನಾಲಯ (ಇಡಿ) ಮಾಡಿದ್ದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. 9 ದಿನ ಇಡಿ ಕಸ್ಟಡಿಗೆ ವಹಿಸುವಂತೆ ಕೋರಲಾಗಿತ್ತು. ಇದನ್ನೂ ಓದಿ: ಮೊಬೈಲ್ ಆಪ್ ಶೋಕಿಗೆ ಬಿದ್ದವ ಮುಂಬೈನಿಂದ ಗೋವಾಗೆ ಬಂದ!
Advertisement
ಇದೇ ವೇಳೆ ದೇಶ್‌ಕುಖ್ ಅವರ ಪುತ್ರ ಹೃಷಿಕೇಶ್ ಅವರು ಶನಿವಾರ ಸೆಷನ್ಸ್ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಮನವಿ ಸಲ್ಲಿಸಿದ್ದಾರೆ.
Advertisement
Advertisement
ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಹೃಷಿಕೇಶ್‌ಗೂ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ಜಾರಿ ಮಾಡಿತ್ತು. ಆದರೆ ಹೃಷಿಕೇಶ್ ಅವರು ಶುಕ್ರವಾರ ವಿಚಾರಣೆಗೆ ಗೈರಾಗಿದ್ದರು. ಇದನ್ನೂ ಓದಿ: ದೇಶದ ಅತಿ ದೊಡ್ಡ ಜೇಬುಗಳ್ಳ ಅಂದ್ರೆ ಕಾಂಗ್ರೆಸ್: ಬಿಜೆಪಿ ತಿರುಗೇಟು
ಪೊಲೀಸ್ ಇಲಾಖೆಯಲ್ಲಿ 100 ಕೋಟಿ ಲಂಚ ವಸೂಲಿ, ಸುಲಿಗೆ ಕುರಿತು ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಮ್‌ಬೀರ್ ಸಿಂಗ್ ಅವರು ದೇಶ್‌ಮುಖ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಈ ಪ್ರಕರಣದಲ್ಲಿ ದೇಶ್‌ಮುಖ್ ಅವರನ್ನು ಇಡಿ ಸೋಮವಾರ ಬಂಧಿಸಿ ಸುಮಾರು 9 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು.