ಕೈ ನಾಯಕ ಮಾಜಿ ರಕ್ಷಣಾ ಸಚಿವ ಆಂಟನಿ ಪುತ್ರ ಬಿಜೆಪಿಗೆ ಸೇರ್ಪಡೆ

Public TV
2 Min Read
Anil Antony

ನವದೆಹಲಿ: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ರಕ್ಷಣಾ ಸಚಿವ ಎಕೆ ಆಂಟನಿ (AK Antony) ಅವರ ಪುತ್ರ ಅನಿಲ್ ಆಂಟನಿ (Anil Antony) ಇಂದು ಬಿಜೆಪಿಗೆ (BJP) ಸೇರ್ಪಡೆಗೊಂಡಿದ್ದಾರೆ.

ಕೇರಳದ ಕಾಂಗ್ರೆಸ್ (Kerala Congress) ನಾಯಕರಾಗಿದ್ದ ಅನಿಲ್ ಆಂಟನಿ ಅವರು 2002ರ ಗುಜರಾತ್ ಗಲಭೆಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯ (Narendra Modi) ಕುರಿತು ಬಿಬಿಸಿಯ ಸಾಕ್ಷ್ಯಚಿತ್ರದ (BBC Documentary) ವಿವಾದದ ನಂತರ ಜನವರಿಯಲ್ಲಿ ಪಕ್ಷವನ್ನು ತೊರೆದಿದ್ದರು.

ಇಂದು ನಡೆದ ಔಪಚಾರಿಕ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರಾದ ಪಿಯೂಷ್ ಗೋಯಲ್ ಮತ್ತು ವಿ ಮುರಳೀಧರನ್ ಮತ್ತು ಪಕ್ಷದ ಕೇರಳ ಘಟಕದ ಮುಖ್ಯಸ್ಥ ಕೆ ಸುರೇಂದ್ರನ್ ಅವರು ಅನಿಲ್ ಆಂಟನಿ ಅವರನ್ನು ಸ್ವಾಗತಿಸಿದರು.

ಬಿಜೆಪಿಗೆ ಸೇರ್ಪಡೆಯಾಗಿ ಮಾತನಾಡಿದ ಅವರು, ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಕುಟುಂಬಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನಂಬುತ್ತಾರೆ. ಆದರೆ ನಾನು ದೇಶಕ್ಕಾಗಿ ಕೆಲಸ ಮಾಡುತ್ತೇನೆ. ಇದು ನನ್ನ ಧರ್ಮ.  ಜಗತ್ತಿನಲ್ಲಿ ಭಾರತವನ್ನು ಪ್ರಮುಖ ಸ್ಥಾನದಲ್ಲಿ ಇರಿಸುವ ಸ್ಪಷ್ಟ ದೃಷ್ಟಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

AK Antony f anil antony

ನಿಮ್ಮ ಈ ನಿರ್ಧಾರಕ್ಕೆ ತಂದೆಯವನ್ನು ಕೇಳಿದ್ದೀರಾ ಎಂಬ ಪ್ರಶ್ನೆಗೆ, ನಾನು ಸರಿಯಾದ ಹೆಜ್ಜೆ ಇಟ್ಟಿದ್ದೇನೆ ಎಂದು ನಾನು ಬಲವಾಗಿ ನಂಬುತ್ತೇನೆ. ನನ್ನ ತಂದೆಯ ಮೇಲಿನ ನನ್ನ ಗೌರವವು ಹಾಗೆಯೇ ಉಳಿಯುತ್ತದೆ ಎಂದು ಉತ್ತರಿಸಿದರು.  ಇದನ್ನೂ ಓದಿ: ಯುಪಿಎಯಿಂದ ನಿರೀಕ್ಷಿಸಿದ್ದೆ, ಬಿಜೆಪಿ ಮುಸ್ಲಿಮರಿಗೆ ಪದ್ಮ ಪ್ರಶಸ್ತಿ ನೀಡಲ್ಲ ಎಂದು ಭಾವಿಸಿದ್ದೆ: ಮೋದಿಗೆ ರಶೀದ್ ಅಹ್ಮದ್ ಖಾದ್ರಿ ಧನ್ಯವಾದ

ಕೇರಳ ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ವಿಭಾಗವನ್ನು ನೋಡಿಕೊಳ್ಳುತ್ತಿದ್ದ ಅನಿಲ್‌ ಆಂಟನಿ ಅವರು ಬಿಬಿಸಿಯ ಸಾಕ್ಷ್ಯಚಿತ್ರವನ್ನು ಭಾರತದ ವಿರುದ್ಧ ಪೂರ್ವಾಗ್ರಹ ಪೀಡಿತ ಸಾಕ್ಷ್ಯಚಿತ್ರ ಎಂದು ಟೀಕಿಸಿದ್ದರು.

ಕೇರಳದಲ್ಲಿ ಬಿಜೆಪಿ ಸಂಘಟನೆಗೆ ಪ್ರಯತ್ನಿಸುತ್ತಿದ್ದರೂ ಇಲ್ಲಿಯವರೆಗೆ ಅಷ್ಟೇನೂ ಫಲ ನೀಡಿರಲಿಲ್ಲ. ಈಗ ಅನಿಲ್‌ ಆಂಟನಿ ಮೂಲಕ ಯುವ ಜನತೆ ಮತ್ತು ವಿಶೇಷವಾಗಿ ಕ್ರಿಶ್ಚಿಯನ್ನರ ಬೆಂಬಲ ಪಡೆಯಲು ಯತ್ನಿಸುತ್ತಿದೆ.

ಪುತ್ರ ಬಿಜೆಪಿ ಸೇರಿದ್ದಕ್ಕೆ ಪ್ರತಿಕ್ರಿಯಿಸಿ ಎಕೆ ಆಂಟನಿ, ಮಗನ ನಿರ್ಧಾರದಿಂದ ನನಗೆ ನೋವಾಗಿದೆ. ನನ್ನ ಕೊನೆಯ ಉಸಿರು ಇರುವವರೆಗೂ ಕಾಂಗ್ರೆಸ್ ಜೊತೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.

ತಂದೆಗೆ ಅನಿಲ್ ಆಂಟನಿ ದ್ರೋಹ ಬಗೆದಿದ್ದಾರೆ ಎಂದಿರುವ ಕಾಂಗ್ರೆಸ್, ಇದನ್ನು ‘ದ್ರೋಹದ ದಿನ’ ಎಂದು ಬಣ್ಣಿಸಿದೆ.

ಅನಿಲ್ ಆಂಟನಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಿಂದ ಎಂಎಸ್ಸಿ ಮತ್ತು ತಿರುವನಂತಪುರ ಎಂಜಿನಿಯರಿಂಗ್ ಕಾಲೇಜಿನಿಂದ ಬಿಟೆಕ್ ಪದವಿ ಪಡೆದಿದ್ದಾರೆ.

Share This Article