– ಸಾಮಾಜಿಕ ಜಾಲತಾಣದಲ್ಲಿ ಅನಿಲ್ ಅಂಬಾನಿ, ಡಿಕೆಶಿ ಫೋಟೋ ವೈರಲ್
ಬೆಂಗಳೂರು: ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಮತ್ತು ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಜೊತೆ ಇರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಕೇಶ್ ಅಂಬಾನಿ ಪುತ್ರಿಯ ಮದುವೆ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಭಾಗಿಯಾಗಿದ್ದರು. ಈ ವೇಳೆ ಅನಿಲ್ ಅಂಬಾನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು.
Advertisement
What a blasphemy Karnataka Cong strongman @DKShivakumar is wt Anil Ambani whom his boss calls a thief. Will @RahulGandhi now seek his resignation? How can his minister associate with a man whom he calls thief? Action please @niku1630 @KiranKS @BalajiiSrinivas @ShilpaaGanesh pic.twitter.com/S1C16rZaIe
— Prakash.S ???????? (@sprakaashbjp) December 16, 2018
Advertisement
ಈ ಫೋಟೋವನ್ನು ರಾಜ್ಯ ಬಿಜೆಪಿ ವಕ್ತಾರ ಪ್ರಕಾಶ್ ಅವರು ಟ್ವೀಟ್ ಮಾಡಿ, ರಾಹುಲ್ ಗಾಂಧಿ ಕಳ್ಳ ಕಳ್ಳ ಎಂದು ಹೇಳುವ ವ್ಯಕ್ತಿಯ ಜೊತೆ ಡಿಕೆ ಶಿವಕುಮಾರ್ ಇದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಡಿಕೆ ಶಿವಕುಮಾರ್ ಅವರ ರಾಜೀನಾಮೆಯನ್ನು ಪಡೆಯುತ್ತಾರಾ ಎಂದು ಪ್ರಶ್ನಿಸಿದ್ದಾರೆ.
Advertisement
ಒಂದುಕಡೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅನಿಲ್ ಅಂಬಾನಿ ಉಲ್ಲೇಖಿಸಿ ಮೋದಿ ಅವರನ್ನು ಟೀಕೆ ಮಾಡುತ್ತಾರೆ. ಮತ್ತೊಂದು ಕಡೆ ಸಚಿವ ಡಿಕೆ ಶಿವಕುಮಾರ್ ಭೇಟಿಯಾಗಿ ಅಪ್ಪಿಕೊಳ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನ ತರಾಟೆಗೆ ತೆಗೆದುಕೊಳ್ಳುತ್ತಾರೆ.
Advertisement
ರಾಹುಲ್ ಗಾಂಧಿಯವರೇ ನಿಮ್ಮ ಕರ್ನಾಟಕದ ನಾಯಕ ಡಿಕೆ ಶಿವಕುಮರ್ ಅವರು ಮುಕೇಶ್ ಅಂಬಾನಿ ಜೊತೆಗೆ ಇರುವ ಈ ಫೋಟೋಗೆ ನಿಮ್ಮ ಅಭಿಪ್ರಾಯವೇನು? ಕಳ್ಳ ಎಂದು ಪಕ್ಷದ ಅಧ್ಯಕ್ಷರೇ ಹೇಳಿದ ವ್ಯಕ್ತಿ ಜೊತೆ ಸಚಿವರು ನಿಂತುಕೊಳ್ಳಲು ಹೇಗೆ ಸಾಧ್ಯ. ಅನಿಲ್ ಅಂಬಾನಿ ರಫೇಲ್ ಗುತ್ತಿಗೆ ಪಡೆದುಕೊಂಡ ವಿಚಾರದಲ್ಲಿ ಮೋದಿ ವಿರುದ್ಧ ಕಿಡಿ ಕಾರುತ್ತಿರುವ ನೀವು, ಡಿಕೆ ಶಿವಕುಮಾರ್ ಮೇಲೆ ಏನು ಕ್ರಮವನ್ನು ಕೈಗೊಳ್ಳುತ್ತೀರಿ? ಈ ನಿರೀಕ್ಷೆಯಲ್ಲಿ ನಾವು ಇದ್ದೇವೆ ಎಂದು ರಾಹುಲ್ ಗಾಂಧಿ ಅವರಿಗೆ ಜನ ಈ ಪ್ರಶ್ನೆ ಕೇಳುತ್ತಿದ್ದಾರೆ.
ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ನಿವೃತ್ತ ಎಚ್‍ಎಎಲ್ ಉದ್ಯೋಗಿಗಳ ಜೊತೆಗಿನ ಸಂವಾದದಲ್ಲಿ, ರಫೇಲ್ ಖರೀದಿ ಒಪ್ಪಂದದಲ್ಲಿ ಅನಿಲ್ ಅಂಬಾನಿಗೆ ಯಾವುದೇ ಅನುಭವವಿಲ್ಲ. ಎಚ್‍ಎಎಲ್ ಸಂಸ್ಥೆ ನಷ್ಟದಲ್ಲಿಲ್ಲ, ಆದರೆ ರಿಲಯನ್ಸ್ ನಷ್ಟದಲ್ಲಿದೆ. ಅನಿಲ್ ಅಂಬಾನಿಗಾಗಿ ಎಚ್‍ಎಎಲ್ ಸಂಸ್ಥೆಯನ್ನು ನಾಶ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಯವರು ಅನಿಲ್ ಅಂಬಾನಿ ಒಡೆತನದ ಸಂಸ್ಥೆಗೆ ರಫೇಲ್ ಒಪ್ಪಂದ ನೀಡುವ ಮೂಲಕ ದೇಶದ ಸಾವಿರಾರು ಜನರ ಉದ್ಯೋಗವನ್ನು ಕಿತ್ತುಕೊಂಡಿದ್ದಾರೆ. ಅಲ್ಲದೇ 35,000 ಕೋಟಿ ರೂಪಾಯಿ ಕೊಟ್ಟು ಒಪ್ಪಂದ ಮಾಡುವಲ್ಲಿ ಪ್ರಧಾನಿ ಉತ್ಸುಕರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.
ಸುಪ್ರೀಂ ಕೋರ್ಟ್ ಮೋದಿ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ರಫೇಲ್ ಡೀಲ್‍ನಲ್ಲಿ ಭ್ರಷ್ಟಾಚಾರ ನಡೆದಿರುವುದು ನಿಜ. ಸ್ನೇಹಿತ ಅನಿಲ್ ಅಂಬಾನಿಗೆ ಪ್ರಧಾನಿ ಮೋದಿ ನೆರವು ನೀಡಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತೇನೆ ಎಂದು ಗುಡುಗಿದ್ದರು.
ನರೇಂದ್ರ ಮೋದಿ ಅವರು ದೇಶವನ್ನು ಅನಿಲ್ ಅಂಬಾನಿ ಭಾರತ ಮತ್ತು ರೈತರ ಭಾರತ ಎಂದು ವಿಭಜಿಸುತ್ತಿದ್ದಾರೆ. ಒಂದೇ ಒಂದು ವಿಮಾನವನ್ನು ಈ ತನಕ ನಿರ್ಮಿಸದಿದ್ದರೂ ಅನಿಲ್ ಅಂಬಾನಿಗೆ 30,000 ಕೋಟಿ ರೂ.ಗಳ ರಫೇಲ್ ಗುತ್ತಿಗೆ ಸಿಕ್ಕಿದೆ. ಇದೇ ವೇಳೆ ಪ್ರಧಾನಿ ಮೋದಿ ಅವರು ನಾಲ್ಕು ತಿಂಗಳ ಕಠಿನ ಪರಿಶ್ರಮ ನಡೆಸಿದ ರೈತರ 750 ಕಿಲೋ ಈರುಳ್ಳಿಗೆ ಕೇವಲ 1,040 ರೂ. ಕೊಡುತ್ತಿದ್ದಾರೆ ಎಂದು ರಾಹುಲ್ ದೂರಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv