ನವದೆಹಲಿ: 17,000 ಕೋಟಿ ರೂ. ಬ್ಯಾಂಕ್ ಸಾಲ ವಂಚನೆ ಪ್ರಕರಣ ಸಂಬಂಧ ಮಂಗಳವಾರ ರಿಲಯನ್ಸ್ ಗ್ರೂಪ್ಸ್ (Reliance Groups) ಅಧ್ಯಕ್ಷ ಅನಿಲ್ ಅಂಬಾನಿ (Anil Ambani) ಇಡಿ ವಿಚಾರಣೆಗೆ (ED) ಹಾಜರಾಗಿದ್ದರು.ಇದನ್ನೂ ಓದಿ: 3,000 ಕೋಟಿ ಸಾಲ ವಂಚನೆ ಕೇಸ್ – ಅನಿಲ್ ಅಂಬಾನಿಗೆ ಸೇರಿದ 50 ಕಂಪನಿಗಳ ಮೇಲೆ ED ದಾಳಿ
ದೆಹಲಿಯಲ್ಲಿರುವ (Delhi) ಇಡಿ ಕಚೇರಿಗೆ ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಅನಿಲ್ ಅಂಬಾನಿಯವರು ಆಗಮಿಸಿದ್ದರು. ಇಡಿ ವಿಚಾರಣೆ ವೇಳೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಸದ್ಯ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಸೇರಿದಂತೆ ಹಲವು ಅನಿಲ್ ಅಂಬಾನಿ ಸಮೂಹ ಸಂಸ್ಥೆಗಳಿಂದ ಹಣಕಾಸು ಅಕ್ರಮಗಳು ಮತ್ತು 17,000 ಕೋಟಿ ರೂ.ಗೂ ಹೆಚ್ಚು ಬ್ಯಾಂಕ್ ಸಾಲ ವಂಚನೆಗೆ ಸಂಬಂಧಿಸಿದಂತೆ ಇಡಿ ತನಿಖೆ ನಡೆಸುತ್ತಿದೆ.
ಜು.24ರಂದು ಮುಂಬೈನಲ್ಲಿನ 50 ಕಂಪನಿಗಳು ಮತ್ತು ಅವರ ವ್ಯವಹಾರಗಳಿಗೆ ಸಂಬAಧಿಸಿದ 25 ವ್ಯಕ್ತಿಗಳು ಸೇರಿದಂತೆ 35 ಕಡೆಗಳಲ್ಲಿ ಇಡಿ ಶೋಧ ಕಾರ್ಯಾಚರಣೆ ನಡೆಸಿತ್ತು. ಬಳಿಕ ಸಮನ್ಸ್ ಜಾರಿ ಮಾಡಿತ್ತು. 2017 ಮತ್ತು 2019ರ ನಡುವೆ ಯೆಸ್ ಬ್ಯಾಂಕ್ ನೀಡಿದ ಸುಮಾರು 3,000 ಕೋಟಿ ರೂ.ಗಳ ಸಾಲವನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. 3,000 ಕೋಟಿ ರೂ. ಸಾಲ ತೀರಿಸಲು ಯೆಸ್ ಬ್ಯಾಂಕ್ ಅಧಿಕಾರಿಗಳಿಗೆ ಅನಿಲ್ ಅಂಬಾನಿ ಲಂಚ ನೀಡಲು ಮುಂದಾಗಿದ್ದರು ಎನ್ನುವ ಆರೋಪ ಕೂಡ ಇದೆ.ಇದನ್ನೂ ಓದಿ: ಆವತ್ತು ಸೈಕಲ್; ಇವತ್ತು ಸ್ಕೂಟರ್ – ಹೊಸ ಫ್ಲೈಓವರ್ ಮೇಲೆ ಡಿಕೆಶಿ ಸ್ಕೂಟರ್ ಸವಾರಿ