ಅಮೆರಿಕದ (America) ನಿಯೋಜಿತ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ (Donald Trump) ಅಧಿಕಾರ ವಹಿಸಿಕೊಳ್ಳುವ ಮುನ್ನವೇ ವಿವಾದಗಳನ್ನ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ನೆರೆಯ ರಾಷ್ಟ್ರಗಳನ್ನು ಎದುರುಹಾಕಿಕೊಳ್ಳುವ ದುಸ್ಸಾಹಸಕ್ಕೂ ಮುಂದಾಗುತ್ತಿದ್ದಾರೆ. ಪನಾಮ ಕಾಲುವೆ ವಿಚಾರದಲ್ಲಿ ಚೀನಾವನ್ನು ಎಳೆದು ತಂದಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಮಹತ್ವದ ನಿರ್ಧಾರಕ್ಕೂ ಟ್ರಂಪ್ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಮುಂದಿನ ತಿಂಗಳು ಶ್ವೇತಭವನದಲ್ಲಿ ಟ್ರಂಪ್ ತಮ್ಮ 2ನೇ ಅವಧಿಯನ್ನು ಪ್ರಾರಂಭಿಸಲಿದ್ದಾರೆ. ಈ ಅವಧಿಯಲ್ಲಿ ಅನೇಕ ಸಮಸ್ಯೆಗಳನ್ನು ನಿವಾರಿಸುವುದು ಟ್ರಂಪ್ ಆದ್ಯತೆಯಾಗಿದೆ. ಅವುಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರನಡೆಯುವುದೂ ಒಂದಾಗಿದೆ. ಟ್ರಂಪ್ ತಮ್ಮ ಮೊದಲ ಅವಧಿಯಲ್ಲೂ ಈ ನಿರ್ಧಾರ ಪ್ರಕಟಿಸಿದ್ದರು. ಈ ಬಾರಿ ಅದನ್ನು ಸಾಕಾರಗೊಳಿಸಬೇಕೆಂಬ ನಿಲುವು ಹೊಂದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಚೀನಾ ಮಾತನ್ನು ಕೇಳುತ್ತಿದೆ, ಅದರ ತಪ್ಪುಗಳನ್ನು ಮುಚ್ಚಿಡುತ್ತಿದೆ ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿರುವ ಸಹಾಯಧನ ನಿಲ್ಲಿಸಲು ಟ್ರಂಪ್ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಆದ್ರೆ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಂತರ ಕಾಯ್ದುಕೊಂಡರೆ, ಇಡೀ ವಿಶ್ವದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಈ ವಿವಾದದ ಹಿನ್ನೆಲೆ ಏನು ಅನ್ನೋದನ್ನ ಮೊದಲು ತಿಳಿಯೋಣ… ಇದನ್ನೂ ಓದಿ: 179 ಮಂದಿ ಸಾವು ಪ್ರಕರಣ – ದೇಶದ ಎಲ್ಲಾ ಬೋಯಿಂಗ್ 737-800 ವಿಮಾನ ಪರೀಕ್ಷೆಗೆ ಮುಂದಾದ ದ. ಕೊರಿಯಾ
Advertisement
Advertisement
ಟ್ರಂಪ್ ಸಿಟ್ಟು ಈಗಿನದ್ದಲ್ಲ
ಟ್ರಂಪ್ ಮೊದಲ ಅಧಿಕಾರವಧಿಯಲ್ಲೂ ವಿಶ್ವ ಆರೋಗ್ಯ ಸಂಸ್ಥೆಯನ್ನು ದೂರವಿಡಲು ಪ್ರಯತ್ನಿಸಿದ್ದರು. ಚೀನಾದಿಂದಾಗಿ ಕೋವಿಡ್ ಪ್ರಪಂಚದಾದ್ಯಂತ ಹರಡಿತ್ತು. ಇದು ತಿಳಿದಿದ್ದರೂ ಡಬ್ಲ್ಯೂಹೆಚ್‌ಓ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳಲಿಲ್ಲ. ಇದಕ್ಕೆ ಕಾರಣ ಚೀನಾ ಎಂದು ಗೊತ್ತಿದ್ದರೂ, ಚೀನಾ ಹೆಸರು ಪ್ರಸ್ತಾಪಿಸಲಿಲ್ಲ. WHO ಚೀನಾ ಕಡೆಗೆ ಹೆಚ್ಚು ಒಲವು ತೋರುತ್ತಿರುವುದರಿಂದ ಈಗಲೂ ವಿಶ್ವದ ಹಲವು ದೇಶಗಳನ್ನು ಅಸಮಾಧಾನಗೊಳಿಸಿದೆ. ಟ್ರಂಪ್ ಕೊರೊನಾವನ್ನು ʻಚೀನಾ ವೈರಸ್ʼ ಎಂದೇ ಕರೆದಿದ್ದರು. WHO ಸಮಯೋಚಿತ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಹಾಗಾಗಿ ಟ್ರಂಪ್‌ನ ಅಸಮಾಧಾನ ಹಾಗೆಯೇ ಉಳಿದಿದೆ.
Advertisement
ತಾತ್ಕಾಲಿಕ ಅಂತರ ಕಾಯ್ದುಕೊಂಡಿದ್ದ ಟ್ರಂಪ್
ಚೀನಾ ಮಾತನ್ನು ಕೇಳುತ್ತಿದೆ ಎಂಬ ಅಸಮಾಧಾನದಿಂದಲೇ ಅಮೆರಿಕ 2020ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ ನೀಡಲಾಗುತ್ತಿದ್ದ ಧನಸಹಾಯವನ್ನು ತಾತ್ಕಾಲಿಕವಾಗಿ ನಿಲ್ಲಿಸಿತ್ತು. ಡಬ್ಲ್ಯೂಹೆಚ್‌ಒನಲ್ಲಿ ರಚನಾತ್ಮಕ ಸುಧಾರಣೆ ಜಾರಿಗೆಯಾಗುವವರೆಗೂ ಅಮೆರಿಕ ಈ ಸಂಸ್ಥೆಗೆ ಹಣ ಸಹಾಯ ಮಾಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿತ್ತು. ಅಲ್ಲದೇ ಮುಂದಿನ ನಾಲ್ಕು ತಿಂಗಳಲ್ಲಿ ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುವುದಾಗಿಯೂ ಔಪಚಾರಿಕವಾಗಿ ಘೋಷಣೆ ಮಾಡಿತ್ತು. ಅದೇ ವರ್ಷದಲ್ಲಿ ಕೊರೊನಾ ವೈರಸ್ ವಿಶ್ವಾದ್ಯಂತ ಹರಡಿತು. ಇದನ್ನೂ ಓದಿ: ಶತಾಯುಷಿ, ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ನಿಧನ
Advertisement
ಗಮನಿಸಬೇಕಾದ ಸಂಗತಿಯೆಂದರೆ, ಆರಂಭದಿಂದಲೂ ಅಮೆರಿಕವೇ ವಿಶ್ವ ಆರೋಗ್ಯ ಸಂಸ್ಥೆಗೆ ಅತ್ಯಧಿಕ ಧನಸಹಾಯ ಮಾಡುತ್ತಾ ಬಂದಿತ್ತು. ಆದರೂ ವಿಶ್ವ ಆರೋಗ್ಯ ಸಂಸ್ಥೆ ಕಡಿಮೆ ದೇಣಿಗೆ ನೀಡುತ್ತಿದ್ದ ಚೀನಾ ಪರ ಇದೆ, ಅದರ ತಪ್ಪುಗಳನ್ನು ಮುಚ್ಚಿಡುತ್ತಿದೆ ಎಂಬುದು ಟ್ರಂಪ್ ಆರೋಪವಾಗಿತ್ತು. ಆದರೆ ವಿಶ್ವ ಆರೋಗ್ಯ ಸಂಸ್ಥೆಗೆ ಹಣ ಸಹಾಯ ನಿಲ್ಲಿಸುವುದು ಅಪಾಯಕಾರಿಯಾಗಿ ಪರಿಣಮಿಸಬಹುದು ಎಂದು ಹಲವು ಸಂಸ್ಥೆಗಳು ಎಚ್ಚರಿಕೆ ನೀಡಿದ್ದವು. ಉದ್ಯಮಿ ಬಿಲ್‌ಗೇಟ್ಸ್ ಕೂಡ, ವಿಶ್ವ ಆರೋಗ್ಯ ಸಂಸ್ಥೆಯ ಅಗತ್ಯ ಹಿಂದೆಂದಿಗಿಂತಲೂ ಈಗ ಅಧಿಕವಿದೆ, ಡಬ್ಲೂಎಚ್‌ಓ ಪ್ರಯತ್ನದಿಂದಾಗಿ ಕೋವಿಡ್-19 ಹರಡುವಿಕೆ ತಗ್ಗುತ್ತಿದೆ ಎಂದು ಹೇಳಿದ್ದರು. ಈ ವೇಳೆ ಟ್ರಂಪ್ ವಿರುದ್ಧ ಹಲವು ದೇಶಗಳು ಆಕ್ರೋಶ ಹೊರಹಾಕಿದ್ದವು.
ಮುಂದಿನ ಅವಧಿಯಲ್ಲಿ ಜೋ ಬೈಡನ್ ಅವರು ಅಧಿಕಾರ ವಹಿಸಿಕೊಂಡಾಕ್ಷಣ, ಟ್ರಂಪ್ ಅವರ ನಿರ್ಧಾರವನ್ನು ಹಿಂತೆದುಕೊಂಡರು. ಅಮೆರಿಕವನ್ನು ಡಬ್ಲ್ಯೂಹೆಚ್‌ಒಗೆ ಪುನಃ ಸೇರಿಸಿಕೊಂಡರು. ಈಗ 2ನೇ ಅವಧಿಗೆ ನಿಯೋಜಿತ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರನಡೆಯಲಿದ್ದಾರೆ ಎಂದು ಹೇಳಲಾಗಿದೆ. ಆದ್ರೆ ಟ್ರಂಪ್ ಈ ಕುರಿತು ಇತ್ತೀಚೆಗೆ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ. ಅದು ಅವರ ಹಳೆಯ ನಡವಳಿಕೆ ಎಂದು ಕೆಲವು ವರದಿಗಳು ಹೇಳಿವೆ. ಇದನ್ನೂ ಓದಿ: ಮಹಿಳೆಯರನ್ನು ಉದ್ಯೋಗದಿಂದ ಕೈಬಿಡಿ – ಎನ್‌ಜಿಒಗಳಿಗೆ ತಾಲಿಬಾನ್ ಎಚ್ಚರಿಕೆ
ವಿಶ್ವ ಆರೋಗ್ಯ ಸಂಸ್ಥೆ ಜೊತೆಗಿನ ವಿವಾದ ಏನು?
ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವಸಂಸ್ಥೆಯ ಒಂದು ಭಾಗವಾಗಿದೆ. 1948ರಲ್ಲಿ ಜಿನೀವಾದಲ್ಲಿ ಇದಕ್ಕೆ ಅಡಿಪಾಯ ಹಾಕಲಾಯಿತು. ಆರೋಗ್ಯ ಸಂಬಂಧಿತ ಸಂಶೋಧನೆಗಳನ್ನು ನೋಡಿಕೊಳ್ಳುವುದು, ಕೋವಿಡ್‌ನಂತಹ ಸಾಂಕ್ರಾಮಿಕ ಸಂರ್ಭದಲ್ಲಿ ಆರೋಗ್ಯ ತುರ್ತುಪರಿಸ್ಥಿತಿಗಳನ್ನು ನಿಭಾಯಿಸುವುದು ಇದರ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ. ಇದರಲ್ಲಿ ವಿಶ್ವಮಟ್ಟದಲ್ಲಿ ಕೆಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗುತ್ತದೆ. ಹಾಗೂ ಅಗತ್ಯವಿರುವ ದೇಶಗಳಿಗೆ ಆರೋಗ್ಯ ಸೌಲಭ್ಯ ಒದಗಿಸುವುದು ಸಹ ಇದರ ಕೆಲಸವಾಗಿದೆ. ಪ್ರಸ್ತುತ ವಿಶ್ವ ಆರೋಗ್ಯಸಂಸ್ಥೆ 194 ರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತಿದೆ.
WHO ನಿಂದ ಅಮೆರಿಕ ಹೊರನಡೆದರೆ ಏನಾಗುತ್ತದೆ?
* ಕೋವಿಡ್ ನಂತರ, ಜಗತ್ತು ಮತ್ತೆ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಬಹುದು ಎಂಬ ಆತಂಕ ನಿರಂತರವಾಗಿದೆ.
* ಅಮೆರಿಕ ಮಾತ್ರವಲ್ಲದೇ ಅಮೆರಿಕ ಹಾದಿಯನ್ನು ಅನುಸರಿಸುವ ದೇಶಗಳ ಮೇಲೂ ಪರಿಣಾಮ ಬೀರುತ್ತದೆ.
* ಜಗತ್ತು ಈಗ ಯುದ್ಧದ ಭಯದಲ್ಲಿದೆ. ಅನೇಕ ರಾಷ್ಟ್ರಗಳು ರಕ್ಷಣಾವೆಚ್ಚಗಳನ್ನು ಹೆಚ್ಚಿಸುತ್ತಿವೆ. ಹೀಗಾಗಿ ಅಮೆರಿಕವನ್ನು ತೋರಿಸಿ ಇತರ ರಾಷ್ಟ್ರಗಳು ಡಬ್ಲ್ಯೂಹೆಚ್‌ಒಗೆ ಧನಸಹಾಯ ನಿಲ್ಲಿಸಬಹುದು.
* ಅಲ್ಲದೇ ಅಮೆರಿಕ ಹೊರನಡೆದು ಚೀನಾ ಆ ಸ್ಥಾನವನ್ನು ಪಡೆದುಕೊಂಡರೆ, ಸರ್ವಾಧಿಕಾರಿ ಧೋರಣೆ ನಡೆಯಬಹುದು. ಚೀನಾ ತನ್ನ ಇಚ್ಛೆಯಂತೆ ಅದರ ನೀತಿಗಳನ್ನು ಅಲ್ಲಿಯೂ ಜಾರಿಗೆ ತರುತ್ತದೆ. ಇದು ವಿಶ್ವದ ಇತರ ರಾಷ್ಟ್ರಗಳಿಗೆ ಅಪಾಯ ಎಂದು ಹೇಳಲಾಗಿದೆ.