ಬಳ್ಳಾರಿ: ಬೆಲೆ ದಿಢೀರ್ ಕುಸಿತ ಕಂಡ ಹಿನ್ನೆಲೆ ವಿಜಯನಗರ (Vijayanagara) ಜಿಲ್ಲೆಯ ನಿಂಬಳಗರೆ ರೈತರೊಬ್ಬರು (Farmer) ಬೆಳೆದ ಟೊಮೆಟೋವನ್ನು (Tomato) ರಸ್ತೆ ಬದಿಯಲ್ಲಿ ಸುರಿದಿದ್ದಾರೆ.
ಗಾಬರಿ ಕಾಡಪ್ಪ ತಮ್ಮ 3 ಎಕರೆ ಜಮೀನಿನಲ್ಲಿ ಟೊಮೆಟೋ ಬೆಳೆ ಬೆಳೆದಿದ್ದರು. ಕಳೆದ ಹದಿನೈದು 15 ವಿವಿಧ ಮಾರುಕಟ್ಟೆಗಳಲ್ಲಿ ಬಾಕ್ಸ್ ಒಂದಕ್ಕೆ 200 ರಿಂದ 300 ರೂ. ಮಾರಾಟ ಮಾಡಿದ್ದರು. ಆದರೆ ಹರಪನಹಳ್ಳಿ ಮಾರುಕಟ್ಟೆಗೆ ತೆಗೆದುಕೊಂಡು ಹೋದಾಗ ಒಂದು ಬಾಕ್ಸ್ ಬೆಲೆ ಕೇವಲ 30 ರಿಂದ 50 ರೂ. ಕೇಳಿದ್ದಾರೆ.
ಇದರಿಂದ ಬೇಸತ್ತ ರೈತ ಕಾಡಪ್ಪ ಟೊಮೆಟೋ ವಾಪಸ್ ತಂದು ಜಾನುವಾರುಗಳು ತಿನ್ನಲಿ ಎಂದು ತನ್ನ ಜಮೀನ ಬಳಿಯೇ ರಸ್ತೆ ಪಕ್ಕದಲ್ಲಿ ಸುರಿದ್ದಾರೆ. ಇದನ್ನೂ ಓದಿ: PUBLiC TV Impact; 70 ಲಕ್ಷ ಕರೆಂಟ್ ಬಿಲ್ ಕಟ್ಟುವಂತೆ ಸಿದ್ದಗಂಗಾ ಮಠಕ್ಕೆ ನೀಡಿದ್ದ ನೋಟಿಸ್ ಹಿಂಪಡೆದ ಸರ್ಕಾರ
ಟೊಮೆಟೋ ಹಣ್ಣು ಬಿಡಿಸಲು ಹೆಣ್ಣು ಮಕ್ಕಳಿಗೆ 200 ರೂ. ಹಾಗೂ ಗಂಡು ಕೂಲಿಗಳಿಗೆ 500 ರೂ.ಕೂಲಿ ನೀಡಬೇಕು. ಇದರ ಜೊತೆಗೆ ವಾಹನ ಬಾಡಿಗೆಯನ್ನೂ ಕೊಡಬೇಕು. ಸಿಗುವ ಇಷ್ಟು ಬೆಲೆಯಲ್ಲಿ ಇವೆನ್ನೆಲ್ಲ ಹೇಗೆ ನಿಬಾಯಿಸಬೇಕು ಎಂದು ರೈತರು ಆತಂಕಕ್ಕೆ ಒಳಗಾಗಿದ್ದಾರೆ.