ಕೊಲಂಬೊ: ಶ್ರೀಲಂಕಾದ (Sri Lanka) ಕ್ರಿಕೆಟ್ ದಿಗ್ಗಜರಲ್ಲಿ ಒಬ್ಬರಾದ ಏಂಜಲೊ ಮ್ಯಾಥ್ಯೂಸ್ (Angelo Mathews) ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಜೂನ್ 17ರಿಂದ 21ರ ವರೆಗೆ ಗಾಲೆ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದ ಬಳಿಕ ಏಂಜೆಲೊ ಮ್ಯಾಥ್ಯೂಸ್ ಟೆಸ್ಟ್ ಕ್ರಿಕೆಟ್‌ಗೆ (Test Cricket) ಗುಡ್‌ಬೈ ಹೇಳಲಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಇದನ್ನೂ ಓದಿ: ಭಾರತ ಕೊಟ್ಟ ಏಟಿಗೆ ಡಿಆರ್‌ಎಸ್ ನಿಯಮವನ್ನೇ ಕೈಬಿಟ್ಟ ಪಿಎಸ್‌ಎಲ್!
ಗಾಳೆ ಅಂಗಳದಲ್ಲಿ ನಡೆಯುವ ಟೆಸ್ಟ್ ಮ್ಯಾಥ್ಯೂಸ್ ಅವರ 119ನೇ ಟೆಸ್ಟ್ ಪಂದ್ಯವಾಗಿದೆ. 2009ರಲ್ಲಿ ಇದೇ ಗಾಲೆ ಕ್ರೀಡಾಂಗಣದಲ್ಲೇ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮ್ಯಾಥ್ಯೂಸ್ ಅದೇ ಅಂಗಳದಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ. ಇದನ್ನೂ ಓದಿ: IPL 2025 | ಮೋದಿ ಸ್ಟೇಡಿಯಂನಲ್ಲೇ ಫೈನಲ್ ಮ್ಯಾಚ್
ನಾಯಕನಾಗಿ 34 ಟೆಸ್ಟ್ ಪಂದ್ಯಗಳನ್ನಾಡಿರುವ ಮಾಥ್ಯೂಸ್ ಲಂಕಾ ಪರ ಅತಿಹೆಚ್ಚು ಟೆಸ್ಟ್ ಋನ್ ಗಳಿಸಿರುವ 3ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೊದಲ ಎರಡು ಸ್ಥಾನಗಳಲ್ಲಿ ಕ್ರಮವಾಗಿ ಕುಮಾರ್ ಸಂಗಕ್ಕಾರ, ಮಹೇಲ ಜಯವರ್ದನೆ ಇದ್ದಾರೆ. ಸಂಗಕ್ಕಾರ 134 ಟೆಸ್ಟ್ ಪಂದ್ಯಗಳನ್ನಾಡಿದ್ದು 57.40 ಸರಾಸರಿಯಲ್ಲಿ 12,400 ರನ್ ಗಳಿಸಿದ್ದರೆ, ಜಯವರ್ದನೆ 149 ಪಂದ್ಯಗಳನ್ನಾಡಿದ್ದು 49.84 ಸರಾಸರಿಯಲ್ಲಿ 11,814 ರನ್ ಗಳಿಸಿದ್ದಾರೆ. 3ನೇ ಸ್ಥಾನದಲ್ಲಿರುವ ಮ್ಯಾಥ್ಯೂಸ್ ಕೊನೆಯ ಟೆಸ್ಟ್ ಪಂದ್ಯಕ್ಕೂ ಮುನ್ನ 118 ಪಂದ್ಯಗಳಲ್ಲಿ 44.62 ಸರಾಸರಿಯಲ್ಲಿ 8,167 ರನ್ ಗಳಿಸಿದ್ದಾರೆ. ಇದರಲ್ಲಿ 16 ಶತಕ ಮತ್ತು 45 ಅರ್ಧಶತಕಗಳೂ ಸೇರಿವೆ. ಅಲ್ಲದೇ ಅವರು ಟೆಸ್ಟ್ 33 ವಿಕೆಟ್ ಗಳನ್ನೂ ಕಬಳಿಸಿದ್ದಾರೆ.
— Angelo Mathews (@Angelo69Mathews) May 23, 2025
ಈ ಕುರಿತು ಎಕ್ಸ್‌ನಲ್ಲಿ ಭಾವು ಸಂದೇಶ ಹಂಚಿಕೊಂಡಿರುವ ಏಂಜಲೊ ಮ್ಯಾಥ್ಯೂಸ್, ನಾನು ಈ ಆಟಕ್ಕೆ ಕೃತಜ್ಞನಾಗಿದ್ದೇನೆ. ಜೊತೆಗೆ ವೃತ್ತಿಜೀವನದುದ್ದಕ್ಕೂ ನನ್ನನ್ನು ಬೆಂಬಲಿಸಿದ ಸಾವಿರಾರು ಶ್ರೀಲಂಕಾ ಕ್ರಿಕೆಟ್ ಅಭಿಮಾನಿಗಳಿಗೆ ಕೃತಜ್ಞನಾಗಿದ್ದೇನೆ. ಈ ಟೆಸ್ಟ್ ತಂಡವು ಪ್ರತಿಭಾನ್ವಿತರ ತಂಡವಾಗಿದೆ ಎಂದು ನಾನು ನಂಬುತ್ತೇನೆ, ಇದರಲ್ಲಿ ಅನೇಕ ಭವಿಷ್ಯದ ಮತ್ತು ಪ್ರಸ್ತುತ ಶ್ರೇಷ್ಠರು ಆಟವಾಡುತ್ತಿದ್ದಾರೆ. ಮುಂದಿನ ಪೀಳಿಗೆಗೆ ಅವಕಾಶ ಕಲ್ಪಿಸಲು ಇದು ಉತ್ತಮ ಸಮಯವೆಂದು ಭಾವಿಸುತ್ತೇನೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
`Timed Out’ಗೆ ವಿಕೆಟ್ ಒಪ್ಪಿಸಿದ ಮೊದಲ ಆಟಗಾರ:
ಏಕದಿನ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಶ್ರೀಲಂಕಾದ ಕ್ರಿಕೆಟಿಗ ಏಂಜಲೋ ಮಾಥ್ಯೂಸ್ ಒಂದೇ ಒಂದು ಎಸೆತ ಎದುರಿಸದೇ ಟೈಮ್ಡ್ ಔಟ್‌ಗೆ (Timed Out) ಬಲಿಯಾದ ಘಟನೆ 2023ರಲ್ಲಿ ನಡೆದಿತ್ತು. ಇದನ್ನೂ ಓದಿ: ವಿಶ್ವಕಪ್‌ನಲ್ಲಿ `Timed Out’ ಟಾಕ್ ವಾರ್ ಜೋರು – ವೀಡಿಯೋ ಪ್ರೂಫ್ ಕೊಟ್ಟ ಮಾಥ್ಯೂಸ್
ಬಾಂಗ್ಲಾ (Bangladesh) ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ 24.2ನೇ ಓವರ್‌ನಲ್ಲಿ 135 ರನ್‌ಗಳಿಸಿದ್ದಾಗ ಸಮರವಿಕ್ರಮ ಔಟಾದರು. ಈ ವೇಳೆ ಏಂಜಲೊ ಮಾಥ್ಯೂಸ್ ಕ್ರೀಸ್‌ಗೆ ಬಂದರು. ಆದ್ರೆ ಬಾಲ್ ಎದುರಿಸಲು ಮುಂದಾದಾಗ ಹೆಲ್ಮೆಟ್ ಪಟ್ಟಿ ತುಂಡಾಗಿರುವುದು ಗೊತ್ತಾಯಿತು. ಹೀಗಾಗಿ ಬೇರೆ ಹೆಲ್ಮೆಟ್ ತರುವಂತೆ ಮಾಥ್ಯೂಸ್ ತಂಡಕ್ಕೆ ಸೂಚಿಸಿದರು. ಈ ಸಂದರ್ಭದಲ್ಲಿ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಅಂಪೈರ್ ಜೊತೆ ಬ್ಯಾಟರ್ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿ ಟೈಮ್ಡ್ ಔಟ್‌ಗೆ ಮನವಿ ಮಾಡಿದರು. ಈ ಮನವಿಯನ್ನು ಅಂಪೈರ್ ಪುರಸ್ಕರಿಸಿದರು. ಈ ವೇಳೆ ಮ್ಯಾಥ್ಯೂಸ್ ಅವರು, ನನ್ನ ಹೆಲ್ಮೆಟ್ ಪಟ್ಟಿ ಮುರಿದು ಹೋಗಿದೆ. ಹೀಗಾಗಿ ಬೇರೆ ಹೆಲ್ಮೆಟ್ ತರುವಂತೆ ಹೇಳಿದ್ದೇನೆ ಎಂದು ಅಂಪೈರ್‌ಗೆ ಸಮಸ್ಯೆಯನ್ನು ವಿವರಿಸಿದರು. ಅಂಪೈರ್ ಮತ್ತು ಬಾಂಗ್ಲಾ ಆಟಗಾರರ ಜೊತೆಗೆ ಹೆಲ್ಮೆಟ್ ದೋಷದ ಬಗ್ಗೆ ಮನವರಿಕೆ ಮಾಡಿದರೂ ಶಕೀಬ್ ಮಾತ್ರ ತಮ್ಮ ಟೈಮ್ಡ್ ಔಟ್ ಮನವಿಯಿಂದ ಹಿಂದಕ್ಕೆ ಸರಿಯಲಿಲ್ಲ. ಕೊನೆಗೆ ಏಂಜಲೊ ಮಾಥ್ಯೂಸ್ ಬಾಂಗ್ಲಾ ವಿರುದ್ಧ ಗೊಣಗುತ್ತಲೇ ಪೆವಿಲಿಯನ್‌ಗೆ ಮರಳಿದರು. ಬೌಂಡರಿ ಗೆರೆ ದಾಟುತ್ತಿದ್ದಂತೆ ಹೆಲ್ಮೆಟ್ ಎಸೆದು ಸಿಟ್ಟು ಹೊರಹಾಕಿದರು.