ಪುಟಾಣಿಗಳನ್ನು ಅದ್ದೂರಿ, ಪ್ರೀತಿಯಿಂದ ಬರ ಮಾಡಿಕೊಂಡ ಅಂಗನವಾಡಿ ಶಿಕ್ಷಕರು

Public TV
1 Min Read
madikeri aganavadi

ಮಡಿಕೇರಿ: ಕೋವಿಡ್ ಕಾರಣದಿಂದ ಬಂದ್ ಆಗಿದ್ದ ಅಂಗನವಾಡಿಗಳಿಗೆ ಎರಡು ವರ್ಷದ ಬಳಿಕ ಆಗಮಿಸಿದ ಪುಟಾಣಿಗಳನ್ನು ಕೊಡಗಿನಲ್ಲಿ ಅದ್ದೂರಿ ಮತ್ತು ಪ್ರೀತಿಯಿಂದ ಬರಮಾಡಿಕೊಳ್ಳಲಾಯಿತು.

madikeri aganavadi 2

ಪುಟಾಣಿಗಳನ್ನು ಬರಮಾಡಿಕೊಳ್ಳುವುದಕ್ಕಾಗಿ ಶಿಕ್ಷಕರು ಅಂಗನವಾಡಿಗಳನ್ನು ವಿಶೇಷವಾಗಿ ಅಲಂಕಾರ ಮಾಡಿದ್ದು, ಅಂಗನವಾಡಿ ಮುಂಭಾಗದಲ್ಲಿ ತಳಿರು ತೋರಣಗಳನ್ನು ಕಟ್ಟಲಾಗಿತ್ತು. ಅಲ್ಲದೆ ಕಲರ್ ಪೇಪರ್ ಮತ್ತು ಬಲೂನ್ ಗಳಿಂದ ಅಂಗನವಾಡಿಯನ್ನು ಅಲಂಕಾರ ಮಾಡಲಾಗಿತ್ತು. ಮಡಿಕೇರಿ ನಗರದ ಪುಟಾಣಿ ನಗರ ಮತ್ತು ಪೆನ್ಷನ್ ಲೈನ್ ಅಂಗನವಾಡಿಗಳಲ್ಲಿ ಪುಟಾಣಿಗಳಿಗೆ ಹೂ ನೀಡಿ ಜೊತೆಗೆ ಬಲೂನ್ ಕೊಟ್ಟು ಸ್ವಾಗತಿಸಲಾಯಿತು. ಇದನ್ನೂ ಓದಿ: ಗುಂಡು ಹಾರಿಸಿ ತಂದೆ, ಮಗನ ಹತ್ಯೆ – ನಿರ್ಲಕ್ಷ್ಯ ತೋರಿದ ಇಬ್ಬರು ಪೊಲೀಸರ ಅಮಾನತು

madikeri aganavadi 4

ಕೊಡಗು ಜಿಲ್ಲಾ ಪಂಚಾಯಿತಿ ಸಿಇಓ ಭಂವರ್ ಸಿಂಗ್ ಮೀನಾ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುದ್ದಣ್ಣ ಪುಟಾಣಿ ಮಕ್ಕಳನ್ನು ಪ್ರೀತಿಯಿಂದ ಬರಮಾಡಿಕೊಂಡರು. ಭಂವರ್ ಸಿಂಗ್ ಮೀನಾ ಅವರು ಟೇಪ್ ಕತ್ತರಿಸಿ ಅಂಗನವಾಡಿ ತರಗತಿ ಆರಂಭಿಸಿದ್ದು, ಬಳಿಕ ಮುದ್ದುಮಕ್ಕಳಿಗೆ ಹೂವು ನೀಡಿ ಬರಮಾಡಿಕೊಂಡಿದ್ದಾರೆ. ಬಳಿಕ ಮಕ್ಕಳಿಗೆ ಸಿಹಿ ಹಂಚಿದ್ದು, ಇನ್ನು ತಮ್ಮ ವಾರ್ಡ್ ಆದ ಪೆನ್ಷನ್ ಲೈನ್ ಅಂಗನವಾಡಿಯಲ್ಲಿ ಮಡಿಕೇರಿ ನಗರಸಭೆ ಸದಸ್ಯ ರಾಜೇಶ್ ಯಲ್ಲಪ್ಪ ಪುಟಾಣಿಗಳಿಗೆ ಬಲೂನ್ ಮತ್ತು ಹೂವು ನೀಡಿ ಸ್ವಾಗತಿಸಿದರು.

madikeri aganavadi 1

ಈ ಸಂದರ್ಭ ಮಾತನಾಡಿದ ಮುದ್ದಣ್ಣ, ಜಿಲ್ಲೆಯಲ್ಲಿ 869 ಅಂಗನವಾಡಿ ಕೇಂದ್ರಗಳು ಇವೆ. 28,211 ವಿದ್ಯಾರ್ಥಿಗಳಿದ್ದು, ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿ ಸದ್ಯಕ್ಕೆ ದಿನಕ್ಕೆ ಎರಡು ಗಂಟೆಗಳ ಕಾಲ ಅಂಗನವಾಡಿ ನಡೆಸಿದ್ದೇವೆ ಎಂದರು. ಇದನ್ನೂ ಓದಿ: ಕ್ಯಾನ್ಸರ್‌ನಿಂದ ಗೆದ್ದು ಬಂದವರು ತಮ್ಮ ಕಥೆಗಳನ್ನು ಹೇಳಬೇಕು: ಮನಿಷಾ ಕೊಯಿರಾಲಾ

madikeri aganavadi 3

ಈ ಕುರಿತು ಭಂವರ್ ಸಿಂಗ್ ಮೀನಾ ಮಾತನಾಡಿದ್ದು, ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲೂ ಅಂಗನವಾಡಿ ತೆರೆಯಲಾಗಿದ್ದು, ಯಾವುದೇ ಸಮಸ್ಯೆ ಎದುರಾಗದ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಮಕ್ಕಳಿಗೆ ಕೋವಿಡ್ ಪಾಸಿಟಿವ್ ಆಗಿರುವ ಪ್ರಕರಣಗಳು ತೀರಾ ಕಡಿಮೆ. ಪಾಸಿಟಿವ್ ಆಗಿದ್ದರು ಆ ಮಕ್ಕಳ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ನಿರಾತಂಕವಾಗಿ ಅಂಗನವಾಡಿಗಳು ನಡೆಯಲಿವೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *