– 8 ದಿನವಾದ್ರೂ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಆಕ್ರೋಶ
ಗದಗ: ಅಂಗನವಾಡಿ (Anganawadi) ಕಾರ್ಯಕರ್ತೆ ನೇಮಕ ವಿಚಾರದಲ್ಲಿ ಅಧಿಕಾರಿಗಳು ಮಲತಾಯಿ ಧೋರಣೆ ಮಾಡಿದ್ದಾರೆಂದು ಆರೋಪಿಸಿ ಕೇಂದ್ರಕ್ಕೆ ಬೀಗ ಜಡಿದ ಘಟನೆ ಜಿಲ್ಲೆಯ ಶಿರಹಟ್ಟಿಯ ಖಾನಾಪೂರದಲ್ಲಿ ನಡೆದಿದೆ.
ಶಿರಹಟ್ಟಿ ಪಟ್ಟಣದ ವಾರ್ಡ್ ನಂಬರ್ 1 ರ ಖಾನಾಪುರ ಅಂಗನವಾಡಿ ಕೇಂದ್ರಕ್ಕೆ 8 ದಿನಗಳಿಂದ ಸ್ಥಳಿಯರು ಬೀಗ ಜಡಿದಿದ್ದಾರೆ. ಇದರಿಂದ ಸುಮಾರು 40 ಕ್ಕೂ ಅಧಿಕ ಮಕ್ಕಳು, ಬಾಣಂತಿಯರು, ಗರ್ಭಿಣಿಯರು ಪರದಾಡುವಂತಾಗಿದೆ. 8 ದಿನಗಳಾದರೂ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗೆ ಹೋಗಬಾರದವ್ವ ಅಂತ ಮಹಿಳೆಯರು ಮಾತಾಡ್ಕೊಳ್ತಿದ್ದಾರೆ – ಆರ್. ಅಶೋಕ್
Advertisement
Advertisement
ಬೀಗ ಹಾಕಿದ್ದು ಯಾಕೆ?
ಕಳೆದ 2 ವರ್ಷದಿಂದ ಈ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹುದ್ದೆ ಖಾಲಿ ಇತ್ತು. ಎರಡು ವರ್ಷದ ನಂತರ ಬೇರೆ ಗ್ರಾಮದ ಸಹಾಯಕಿಯನ್ನು ಪದೋನ್ನತಿ ನೀಡಿ ಕಾರ್ಯಕರ್ತೆಯಂದು ನೇಮಕ ಮಾಡಲಾಗಿದೆ. ಈ ನೇಮಕಾತಿಗೆ ಸ್ಥಳಿಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳಿಯ ಖಾನಾಪೂರ ನಿವಾಸಿ ಬಿಟ್ಟು ಬೇರೆ ಗ್ರಾಮದ ಕಾರ್ಯಕರ್ತೆ ನೇಮಕ ಮಾಡಿ ಮಲತಾಯಿ ಧೋರಣೆ ಮಾಡಲಾಗಿದೆ. ಪಟ್ಟಭದ್ರ ಹಿತಾಸಕ್ತಿಗಳ ಒತ್ತಡ, ಆಮಿಷಕ್ಕೆ ಅಧಿಕಾರಿಗಳು ಒಳಗಾಗಿ ಬೇರೆ ಗ್ರಾಮದವರನ್ನು ನೇಮಕ ಮಾಡಲಾಗಿದೆ ಎಂದು ಜನರು ದೂರಿದ್ದಾರೆ.
Advertisement
ಸಾಕಷ್ಟು ಜನ ಸ್ಥಳಿಯ ಮಹಿಳೆಯರು ಅರ್ಜಿ ಹಾಕಿದ್ದಾರೆ. ಅದರಲ್ಲಿ ಯಾರಾದರೊಬ್ಬರನ್ನು ನೇಮಕ ಮಾಡಿಕೊಳ್ಳಬೇಕು. ಬೇರೆ ಗ್ರಾಮದ ಕಾರ್ಯಕರ್ತೆ ಬೇಡ ಅಂತ ಪಟ್ಟು ಹಿಡಿದಿದ್ದಾರೆ. ಹೀಗೆ ಮುಂದುವರಿದರೆ ಜಿಲ್ಲಾ ಶಿಶು ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಸ್ಥಳಿಯರು ಎಚ್ಚರಿಕೆ ನೀಡಿದ್ದಾರೆ.
Advertisement