ತುಮಕೂರು: ಅಂಗನವಾಡಿ ಕಾರ್ಯಕರ್ತೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕುಣಿಗಲ್ ತಾಲೂಕಿನ ನಾಗೇಗೌಡನ ಪಾಳ್ಯ ಗ್ರಾಮದಲ್ಲಿ ನಡೆದಿದೆ.
ಗೀತಾ (29) ಆತ್ಮಹತ್ಯೆಗೆ ಯತ್ನಿಸಿದ ಅಂಗನವಾಡಿ ಕಾರ್ಯಕರ್ತೆ. ಕಾರ್ಯಕರ್ತೆಯು ಹಿಂಬಡ್ತಿ ನೀಡಿದ ಕಾರಣಕ್ಕೆ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾಗೇನಹಳ್ಳಿ ಮಿನಿ ಅಂಗನವಾಡಿ ಕೇಂದ್ರದಿಂದ ಕಟ್ಟಿಗೇನಹಳ್ಳಿ ಕೇಂದ್ರಕ್ಕೆ ಮುಂಬಡ್ತಿ ನೀಡಿತ್ತು. ಮುಂಬಡ್ತಿಯಿಂದ ಹಿಂಬಡ್ತಿ ಆದೇಶ ನೀಡಿದಕ್ಕೆ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: 2 ವರ್ಷದ ಹಿಂದೆಯೇ 10 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು: ಮೃತನ ಸಂಬಂಧಿ ಹೇಳಿಕೆ
Advertisement
Advertisement
ಗೀತಾ ಅವರು ಮನೆಯಲ್ಲೇ ಸೀರೆಯಿಂದ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಕುಟುಂಬದವರೇ ಅವರು ನೇಣು ಹಾಕಿಕೊಳ್ಳುವುದನ್ನು ಕಂಡು ನೇಣಿನ ಕುಣಿಕೆಯನ್ನ ಬಿಚ್ಚಿದ್ದಾರೆ. ಅವರು ಕಳೆದ ಎರಡು ದಿನಗಳಿಂದಲೂ ಊಟ ಮಾಡದೇ ಇದ್ದರು. ಇದನ್ನೂ ಓದಿ: ಇಂಟಲಿಜೆನ್ಸ್ ಈಶ್ವರಪ್ಪ ಹತ್ರ ಇದೆಯಾ..?- ಪ್ರಿಯಾಂಕ್ ಖರ್ಗೆ ಕಿಡಿ
Advertisement
Advertisement
ಗೀತಾ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀಧರ್, ಸಿಡಿಪಿಒ ಅನುಷಾ, ಗಂಗಭೈರಮ್ಮ ವಿರುದ್ಧ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರು. ಈಗ ಅವರಿಗೆ ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯು ಅಮೃತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.