ಉಡುಪಿ: ನಕ್ಸಲ್ ಮುಖಂಡ ವಿಕ್ರಂಗೌಡ (Vikram Gowda) ಎನ್‌ಕೌಂಟರ್‌ನಲ್ಲಿ (Encounter) ಹತ್ಯೆಯಾಗಿ ಇಂದಿಗೆ ಒಂದು ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆ ಮುನ್ನೇಚ್ಚರಿಕಾ ಕ್ರಮವಾಗಿ ಎಎನ್‍ಎಫ್ ಪೊಲೀಸರು ಉಡುಪಿ (Udupi) ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ (Combing Operation) ನಡೆಸಿದ್ದಾರೆ.
ಹೆಬ್ರಿ ಸಮೀಪದ ಪೀತಬೈಲಿನಲ್ಲಿ ವಿಕ್ರಂ ಗೌಡನನ್ನು ಎನ್‍ಕೌಂಟರ್ ಮಾಡಲಾಗಿತ್ತು. ಆತನ ಹತ್ಯೆಯ ಬೆನ್ನಲ್ಲೇ ಅನೇಕ ನಕ್ಸಲರು ಶರಣಾಗಿದ್ದರು. ಈ ಮೂಲಕ ಕರ್ನಾಟಕ ನಕ್ಸಲ್ ಮುಕ್ತ ಎಂದು ಘೋಷಿಸಲಾಗಿತ್ತು. ಆದರೂ ಸಹ ತಮ್ಮ ನಾಯಕರು ಹತ್ಯೆಯಾದ ದಿನ ತಮ್ಮ ಇರುವಿಕೆ ತೋರಿಸುವ ಸಾಧ್ಯತೆ ಇರಬಹುದು ಎಂಬ ಶಂಕೆ ಮೇಲೆ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ. ಇದನ್ನೂ ಓದಿ: Naxal Encounter| 3 ರಾಜ್ಯಕ್ಕೆ ಬೇಕಾಗಿದ್ದ ಮೋಸ್ಟ್ ವಾಟೆಂಡ್ ನಕ್ಸಲ್ ನಾಯಕ ವಿಕ್ರಂ ಗೌಡ ಯಾರು?
ಸದ್ಯ ಸಕ್ರಿಯ ನಕ್ಸಲರು ಇಲ್ಲದೇ ಹೋದರು ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಾಗ್ರತೆವಹಿಸಿದ್ದಾರೆ. ಇದನ್ನೂ ಓದಿ: ವಿಕ್ರಂಗೌಡ ಹತ್ಯೆ | ನಕ್ಸಲ್ ಚಟುವಟಿಕೆ ನಿಗ್ರಹಿಸಲು ಎನ್‌ಕೌಂಟರ್: ಸಿದ್ದರಾಮಯ್ಯ

