ಆನೇಕಲ್: ಯುವಕನನ್ನು ಬೇರೆಡೆ ಕೊಲೆ ಮಾಡಿ ಮನೆ ಗೇಟಿನ ಮುಂಭಾಗ ಎಸೆದು ಹೋಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ದಾಸನಪುರದಲ್ಲಿ ನಡೆದಿದೆ.
ದಾಸನಪುರ ವೆಂಕಟೇಶಪ್ಪನ ಮಗ ಸತೀಶ್(23) ಕೊಲೆಯಾದವ. ಹೂ ಸಾಗಣೆ ಮಾಡುವ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸತೀಶ್, ಗ್ರಾಮದಲ್ಲಿ ಸಭ್ಯನೆನಿಸಿಕೊಂಡಿದ್ದ. ಆದರೆ ಇದೀಗ ಆತ ಕೊಲೆಯಾಗಿರುವ ದೃಶ್ಯವನ್ನು ಕಂಡು ಜನ ಬೆಚ್ಚಿಬಿದ್ದಿದ್ದಾರೆ.
Advertisement
Advertisement
ಮನೆಯ ಮುಂದಿನ ಗೇಟಿನ ರಸ್ತೆಯಲ್ಲಿ ಬೆಳಗ್ಗೆ ಬಾಯಿಯಲ್ಲಿ ರಕ್ತ ತಲೆಯ ಹಿಂಬದಿ ಗಾಯವಾಗಿರುವ ಸ್ಥಿತಿಯಲ್ಲಿ ಯುವಕನ ಶವ ಕಂಡಿತ್ತು. ಎದುರು ಮನೆಯಾಕೆ ಎಂದಿನಂತೆ ಗೇಟು ತೆರೆದಾಗ ಯಾರೋ ಕುಡಿದು ಬಿದ್ದಿರಬಹುದೆಂದು ಮನೆಯ ಯಜಮಾನನನ್ನು ಎಬ್ಬಿಸಿ ಪರಿಶೀಲಿಸಿದಾಗ ಸತೀಶ್ ಸತ್ತುಬಿದ್ದಿರಬಹುದೆಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ
Advertisement
Advertisement
ಸ್ಥಳಕ್ಕೆ ಅತ್ತಿಬೆಲೆ ಪೊಲೀಸ್ ಇನ್ಸ್ ಪೆಕ್ಟರ್ ಬೆಂಗಳೂರು ಗ್ರಾಮಾಂತರ ಎಸ್‍ಪಿ ವಂಶಿ ಕೃಷ್ಣ ಭೇಟಿ ನೀಡಿ ಸಂಜೆ ಕೊಲೆಯಾಗಿದೆ ಎಂದು ದೃಢೀಕರಿಸಿದ್ದಾರೆ. ಜೊತೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದ್ದು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ: ಮಹಾರಾಷ್ಟ್ರದ ಮಾಜಿ ಗೃಹ ಸಚಿವರಿಗೆ 14 ದಿನ ನ್ಯಾಯಾಂಗ ಬಂಧನ