ಆನೇಕಲ್ ಬಳಿ ಹಳಿಯಲ್ಲಿ ಸಿಲುಕಿಕೊಂಡ ಕ್ಯಾಂಟರ್ – ಎಕ್ಸ್‌ಪ್ರೆಸ್‌ ರೈಲು ಡಿಕ್ಕಿಗೆ ಲಾರಿ ಎಂಜಿನ್ ಪೀಸ್ ಪೀಸ್

Public TV
1 Min Read
ANE 1

ಆನೇಕಲ್: ಮೈಸೂರು – ಪುದುಕೋಟೈ ಪ್ಯಾಸೆಂಜರ್ ಎಕ್ಸ್ ಪ್ರೆಸ್ ರೈಲು ಆನೇಕಲ್ ತಾಲೂಕಿನ ಆವಲಹಳ್ಳಿ ಬಳಿ ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿದೆ.

ANE 5

ರೈಲಿನಲ್ಲಿ ಸಾವಿರಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ. ರಾತ್ರಿ 9 ಗಂಟೆ ಸುಮಾರಿಗೆ ಲಾರಿ ಚಾಲಕ ಗೂಗಲ್ ಮ್ಯಾಪ್ ನಂಬಿ ಲಾರಿ ಚಲಾಯಿಸಿಕೊಂಡು ಬಂದಿದ್ದಾನೆ. ಆದರೆ 2 ವರ್ಷಗಳ ಹಿಂದೆಯೇ ಆ ರಸ್ತೆ ಬಂದ್ ಆಗಿದ್ದು, ಪಕ್ಕದಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ: ನೇಣುಬಿಗಿದ ಸ್ಥಿತಿಯಲ್ಲಿ ಪ್ರಯಾಗರಾಜ್ ಸಂತ ನರೇಂದ್ರಗಿರಿ ಪತ್ತೆ

ANE 3

ಸಣ್ಣ ಮಳೆಯಾದರೂ ಈ ಅಂಡರ್‍ಪಾಸ್‍ನಲ್ಲಿ ನೀರು ತುಂಬಿಕೊಳ್ಳುತ್ತದೆ. ಅವೈಜ್ಞಾನಿಕವಾಗಿ ಅಂಡರ್ ಪಾಸ್ ನಿರ್ಮಾಣವಾಗಿತ್ತು. ಇದೀಗ ಆ ಅಂಡರ್ ಪಾಸ್ ದುರಸ್ತಿ ಕಾರ್ಯ ಮಂದಗತಿಯಲ್ಲಿ ನಡೆಯುತ್ತಿದೆ. ಲಾರಿ ಚಾಲಕ ಹಳಿ ದಾಟುವ ಹೊತ್ತಿಗೆ ರೈಲು ಬಂದಿದೆ. ತಕ್ಷಣವೇ ಲಾರಿ ಚಾಲಕ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ. ಆದರೆ ಲಾರಿ ಎಂಜಿನ್ ಅನ್ನು ರೈಲು ಸುಮಾರು ಅರ್ಧ ಕಿ.ಮೀ.ವರೆಗೆ ಎಳೆದೊಯ್ದಿದೆ.

ANE 4

ಮುರ್ನಾಲ್ಕು ಗಂಟೆಗಳ ಕಾಲ ಲಾರಿ ಎಂಜಿನ್ ಅನ್ನು ಹಳಿ ಮೇಲಿಂದ ಎತ್ತಲು ಹರಸಾಹಸ ಪಡಲಾಯಿತು. ಇದರಿಂದ ಕೇರಳ, ತಮಿಳುನಾಡಿನ 2 ರೈಲುಗಳನ್ನ ತಡೆಯಲಾಗಿತ್ತು. ಈ ಎಡವಟ್ಟಿಗೆ ರೈಲ್ವೆ ಇಲಾಖೆಯೇ ಕಾರಣವೆಂದು ಪ್ರಯಾಣಿಕರು ದೂರಿದ್ದಾರೆ. ಇದನ್ನೂ ಓದಿ: ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ಮುಂದಾದ ಸರ್ಕಾರ – ಮಸೂದೆಯಲ್ಲಿ ಏನಿದೆ?

Share This Article
Leave a Comment

Leave a Reply

Your email address will not be published. Required fields are marked *