ನಡುರಸ್ತೆಯಲ್ಲಿ ಅತ್ತಿಗೆಗೆ ಕಾಲಿಂದ ಒದ್ದು ರಕ್ತ ಬರುವಂತೆ ಮೈದುನನಿಂದ ಹಲ್ಲೆ

Public TV
1 Min Read
ANE HALLE

ಬೆಂಗಳೂರು: ಕೌಟುಂಬಿಕ ಗಲಾಟೆ ಹಿನ್ನೆಲೆಯಲ್ಲಿ ಮೈದುನನೊಬ್ಬ ಅತ್ತಿಗೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣ ಸಮೀಪ ನಡೆದಿದೆ.

ರಾಜಮ್ಮ (40) ಹಲ್ಲೆಗೊಳಗಾದ ಮಹಿಳೆ. ಆನೇಕಲ್- ಹೊಸೂರು ರಸ್ತೆಯ ಹೊಂಪಲಘಟ್ಟ ಕ್ರಾಸ್ ಬಳಿ ಘಟನೆ ನಡೆದಿದ್ದು, ಮೈದುನ ನಾಗೇಶ್ ಅತ್ತಿಗೆ ರಾಜಮ್ಮ ತಲೆ, ಹೊಟ್ಟೆ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ. ಇದನ್ನು ಕಂಡ ಸ್ಥಳೀಯರು ನಾಗೇಶ್ ಮೇಲೆ ಹಲ್ಲೆ ನಡೆಸಿ ಆನೇಕಲ್ ಪೊಲೀಸರಿಗೆ ಒಪ್ಪಿಸಿದ್ದಾರೆ.

ANE HALLE 1

ಕೌಟುಂಬಿಕ ಮನಸ್ತಾಪ ಹಲ್ಲೆ ನಡೆಸಲು ಕಾರಣ ಎನ್ನಲಾಗಿದ್ದು, ಹಲ್ಲೆಗೊಳಾಗಾದ ರಾಜಮ್ಮ ಹಾಗೂ ನಾಗೇಶ್ ಗೆ ಮನೆ ಖಾಲಿ ಮಾಡುವ ವಿಚಾರವಾಗಿ ಈ ಹಿಂದೆ ಮನಸ್ತಾಪ ಇತ್ತು. ಕಳೆದ ಒಂದು ವಾರದ ಹಿಂದಷ್ಟೇ ನಾಗೇಶ್ ಬೇರೆ ಮನೆಗೆ ಸ್ಥಳಾಂತರಗೊಂಡಿದ್ದ. ಈ ನಡುವೆ ಕಳೆದ ಮೂರು ದಿನಗಳ ಹಿಂದೆ ರಾಜಮ್ಮರನ್ನು ಬೈಕ್ ನಲ್ಲೆ ಕರೆತರುವಾಗ ಮಾತಿಗೆ ಮಾತು ಬೆಳೆದು ಸಾರ್ವಜನಿಕರ ಎದುರೇ ಹಲ್ಲೆ ನಡೆಸಿದ್ದಾನೆ. ನಂತರ ತೀವ್ರ ಗಾಯಗೊಂಡಿದ್ದ ರಾಜಮ್ಮನಿಗೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆತರಲಾಗಿದೆ.

ಘಟನೆ ಕುರಿತು ಅನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸೆಕ್ಷನ್ 307 ಅಡಿ ದೂರು ದಾಖಲಾಗಿದ್ದು, ನಾಗೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

https://www.youtube.com/watch?v=_p-bfohP2uo

Share This Article
Leave a Comment

Leave a Reply

Your email address will not be published. Required fields are marked *