ಬೀದರ್: ಬೀದರ್ ಜಿಲ್ಲಾಡಳಿತ ಎಷ್ಟೇ ನಿರ್ಬಂಧ ಹೇರಿದರೂ ಕೂಡಾ 12ಕ್ಕೆ ಕಲ್ಯಾಣದಲ್ಲಿ ನಡೆಯುವ ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ ಕಾರ್ಯಕ್ರಮಕ್ಕೆ ನಮ್ಮ ಪ್ರವೇಶವನ್ನು ತಡೆಯಲು ಸಾಧ್ಯವಿಲ್ಲ ಎಂದು ಬೀದರ್ ಜಿಲ್ಲಾಡಳಿತಕ್ಕೆ ಆಂದೋಲ ಶ್ರೀಗಳು ಸವಾಲ್ ಹಾಕಿದರು.
9 ದಿನಗಳ ಕಾಲ ಪ್ರಮೋದ್ ಮುತಾಲಿಕ್ ಅವರನ್ನು ಹಾಗೂ ನನ್ನನ್ನು ಬೀದರ್ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದೆ. ಇದಕ್ಕೆ ಕಾರಣ ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ ಎಂಬ ಕಾರ್ಯಕ್ರಮ ಎಂದು ಜಿಲ್ಲಾಡಳಿತದ ವಿರುದ್ಧ ಶ್ರೀಗಳು ಕಿಡಿಕಾರಿದರು.
Advertisement
Advertisement
ಈ ಕಾರ್ಯಕ್ರಮದಲ್ಲಿ ಭಾಗಿಯಾದರೆ ಕೋಮು ಸೌಹಾರ್ದ ಹಾಗೂ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ ಎಂಬ ನೆಪವನ್ನು ಹೇಳಿ ಜಿಲ್ಲಾಡಳಿತ ನಮ್ಮನ್ನು ಬ್ಯಾನ್ ಮಾಡಿದೆ. ಇಂದು ಕಲ್ಯಾಣದಲ್ಲಿ ಯಾವುದೇ ಸಭೆ, ಸಮಾರಂಭ ಇಲ್ಲದೆ ಇದ್ದರೂ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದ್ದು, ಖಂಡನೀಯವಾಗಿದ್ದು, ಬಿಜೆಪಿ ಸರ್ಕಾರದ ಹಿಂದೂ ವಿರೋಧಿ ನೀತಿ ಇಂದು ಎದ್ದು ಕಾಣುತ್ತಿದ್ದು ಇದು ನಾಚೀಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೀದರ್ ಜಿಲ್ಲಾ ಪ್ರವೇಶಕ್ಕೆ ಪ್ರಮೋದ್ ಮುತಾಲಿಕ್, ಆಂದೋಲನ ಶ್ರೀಗಳಿಗೆ ಬ್ಯಾನ್
Advertisement
ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತವನ್ನು ಛೂಬಿಟ್ಟು ಸರ್ಕಾರ ಹಿಂದೂ ಮೂಲಭೂತ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಮೂಲ ಅನುಭವ ಮಂಟಪವನ್ನು ಶಾಂತಿಯಿಂದ ಪಡೆಯಬೇಕು ಎಂದು ಮಠಾಧೀಶರು ಮಾತುಕತೆ ನಡೆಸಿದ್ದಾರೆ. ಈ ವೇಳೆ ಸರ್ಕಾರವೇ ಈ ರೀತಿ ನಿರ್ಬಂಧ ಹೇರುವ ಮೂಲಕ ಗೊಂದಲ ಸೃಷ್ಟಿ ಮಾಡಿ ಶಾಂತಿಗೆ ಕಾರಣರಾಗುತ್ತಿದೆ ಎಂದು ಶ್ರೀರಾಮ್ ಸೇನೆಯ ರಾಜ್ಯಾಧ್ಯಕ್ಷ ಸಿದ್ಧಲಿಂಗ ಶ್ರೀಗಳು ಬೀದರ್ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು. ಇದನ್ನೂ ಓದಿ: 5 ವರ್ಷದ ಬಾಲಕಿಯ ಮಾದರಿಯನ್ನು ಮಂಕಿಪಾಕ್ಸ್ ಪರೀಕ್ಷೆಗೆ ಕಳುಹಿಸಿದ ವೈದ್ಯರು