ಹೈದರಾಬಾದ್: ಆಂಧ್ರಪ್ರದೇಶ ಸಿಎಂ ವೈ.ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರ ಡಾ. ಎಪಿಜೆ ಅಬ್ದುಲ್ ಕಲಾಂ ಪ್ರತಿಭಾ ಪುರಸ್ಕಾರ್ ಅವಾರ್ಡ್ ಹೆಸರನ್ನು ವೈಎಸ್‌ಆರ್ ವಿದ್ಯಾ ಪುರಸ್ಕಾರ ಎಂದು ಬದಲಿಸಿದಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದು, ವಿರೋಧಕ್ಕೆ ಮಣಿದ ಸಿಎಂ ಪ್ರಶಸ್ತಿಗೆ ಮತ್ತೆ ಕಲಾಂ ಅವರ ಹೆಸರನ್ನೇ ಇಡಲಾಗುತ್ತದೆ ಎಂದು ತಿಳಿಸಿದ್ದಾರೆ.
It is not surprising that Jagan thinks his late father was a more accomplished scientist and academic than Bharat Ratna Dr A P J Abdul Kalam. After all he comes from a party, which named every award, scheme, stadium, road, airport etc, after members of the Nehru-Gandhi family… https://t.co/4AyjTsl894
— Amit Malviya (@amitmalviya) November 5, 2019
Advertisement
ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಹೆಸರಿನಲ್ಲಿ ನೀಡಲಾಗುತ್ತಿದ್ದ ಪ್ರಶಸ್ತಿ ಹೆಸರನ್ನು ವೈಎಸ್‌ಆರ್ ಸರ್ಕಾರ ಬದಲಿಸಿತ್ತು. ‘ಡಾ. ಎಪಿಜೆ ಅಬ್ದುಲ್ ಕಲಾಂ ಪ್ರತಿಭಾ ಪುರಸ್ಕಾರ್ ಅವಾರ್ಡ್’ ಹೆಸರನ್ನು ಬದಲಿಸಿ ‘ವೈಎಸ್‌ಆರ್ ವಿದ್ಯಾ ಪುರಸ್ಕಾರ’ ಎಂಬುದಾಗಿ ಬದಲಾವಣೆ ಮಾಡಿತ್ತು. ಸರ್ಕಾರ ಈ ಬದಲಾವಣೆ ಮಾಡುತ್ತಿದ್ದಂತೆ ರಾಜ್ಯದಲ್ಲಿ ಭಾರೀ ಚರ್ಚೆ ನಡೆಯಿತು. ಸರ್ಕಾರದ ನಡೆಯನ್ನು ವಿರೋಧಿಸಿ ವಿರೋಧ ಪಕ್ಷದ ನಾಯಕರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದರು. ಜೊತೆಗೆ ಸಾರ್ವಜನಿಕರು ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಲು ಆರಂಭಿಸಿದರು.
Advertisement
Dr. Kalam has accomplished much for the nation with his inspiring life. @ysjagan’s govt changing “APJ Abdul Kalam Pratibha Puraskar” to “YSR Vidya Puraskar” is a shocking method of self-aggrandizement at the cost of disrespecting a much venerated man. #YSRCPInsultsAbdulKalam pic.twitter.com/7lPaZddNZF
— N Chandrababu Naidu (@ncbn) November 5, 2019
Advertisement
ಹಲವು ನಾಯಕರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಆಂಧ್ರ ಸರ್ಕಾರ ಆದೇಶವನ್ನು ರದ್ದುಗೊಳಿಸಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಅಬ್ದುಲ್ ಕಲಾಂ ಪ್ರಶಸ್ತಿ ಹೆಸರು ಬದಲಾಯಿಸದಂತೆ ಸಿಎಂ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
Advertisement
‘ಮಿಸೈಲ್ ಮ್ಯಾನ್’ ಅಬ್ದುಲ್ ಕಲಾಂ ಹುಟ್ಟುಹಬ್ಬದ ಪ್ರಯುಕ್ತ ಪ್ರತಿವರ್ಷ ನವೆಂಬರ್ 1ರಂದು ಆಂಧ್ರ ಸರ್ಕಾರದಿಂದ ಈ ಪ್ರಶಸ್ತಿ ನೀಡಲಾಗುತ್ತಿತ್ತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಡಾ. ಎಪಿಜೆ. ಅಬ್ದುಲ್ ಕಲಾಂ ಪ್ರತಿಭಾ ಪುರಸ್ಕಾರ ಪ್ರಶಸ್ತಿ’ ನೀಡಿ ಪ್ರೋತ್ಸಾಹಿಸಲಾಗುತ್ತಿತ್ತು. ಆದರೆ ಜಗನ್ ಮೋಹನ್ ರೆಡ್ಡಿ ಅವರು ಪ್ರಶಸ್ತಿಗೆ ತಮ್ಮ ತಂದೆ ವೈ.ಎಸ್ ರಾಜಶೇಖರ್ ರೆಡ್ಡಿ ಹೆಸರಿಟ್ಟಿದ್ದು ಎಲ್ಲರ ಕೆಂಗಣ್ಣಿಗೆ ಕಾರಣವಾಯ್ತು.
Andhra Pradesh Government redesignates "Dr APJ Abdul Kalam Pratibha Puraskar Awards" as "YSR Vidya Puraskars" from 2019 onwards, for distribution on the occasion of National Education Day (birth anniversary of Maulana Abul Kalam Azad), on 11th November. pic.twitter.com/f0SLE7rYm7
— ANI (@ANI) November 5, 2019
ಸರ್ಕಾರ ಆದೇಶದ ವಿರುದ್ಧ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸಿಡಿದೆದ್ದರು. ಅಬ್ದುಲ್ ಕಲಾಂ ವಿಜ್ಞಾನ, ಶಿಕ್ಷಣ, ಸಾಹಿತ್ಯ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ತಮ್ಮ ಅಮೂಲ್ಯ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ನೀಡಲಾಗುತ್ತಿದ್ದ ಪ್ರಶಸ್ತಿಗೆ ಸಿಎಂ ಜಗನ್ ಮೋಹನ್ ರೆಡ್ಡಿ ತನ್ನ ತಂದೆ ಹೆಸರು ಇಟ್ಟಿದ್ದಾರೆ. ಇದು ಸಿಎಂಗೆ ಶೋಭೆ ತರುವಂತದಲ್ಲ ಎಂದು ಟ್ವೀಟ್ ಮಾಡಿ ವಿರೋಧ ವ್ಯಕ್ತಪಡಿಸಿದ್ದರು.
Andhra Pradesh Chief Minister YS Jaganmohan Reddy has ordered to immediately cancel the concerned GO (Government Order). He further ordered to reinstate the name of 'Dr APJ Abdul Kalam Pratibha Puraskar Awards'. https://t.co/JVGCx3eA2L
— ANI (@ANI) November 5, 2019