ಆರೋಪಿ ವಸುಂಧರಾ ಎಂದು ಗುರುತಿಸಲಾಗಿದೆ. ಕರ್ನೂಲ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಇದೇ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಕರುಣಾಕರ್ ಜೊತೆ ಸ್ನೇಹ ಬೆಳೆದು, ಬಳಿಕ ಪ್ರೀತಿ ಶುರುವಾಗಿತ್ತು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸೆಕ್ಸ್ ಗೆ ಮಗು ಅಡ್ಡಿ – 1 ವರ್ಷದ ಮಗುವನ್ನ ಕೊಲೆಗೈದ ತಂದೆ; ಸಿಕ್ಕಿಬಿದ್ದಿದ್ದೇ ರೋಚಕ!
ಇತ್ತೀಚಿಗೆ ಇಬ್ಬರದ್ದು ಬ್ರೇಕಪ್ ಆಗಿತ್ತು. ಆದರೆ ಅದೇ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದ ಶ್ರಾವಣಿ ಎಂಬಾಕೆಯನ್ನು ಕರುಣಾಕರ್ ಮದ್ವೆಯಾಗಿದ್ದ. ಇದು ವಸುಂಧರಾ ಕೋಪಕ್ಕೆ ಕಾರಣವಾಗಿತ್ತು. ವಸುಂಧರಾ ಹಾಗೂ ಮೂವರು ಸೇರಿ ಹೆಚ್‌ಐವಿ ಇಂಜೆಕ್ಟ್ ಪ್ಲ್ಯಾನ್ ಮಾಡಿದ್ದರು. ಬಳಿಕ ಜ.9ರಂದು ಡಾ.ಶ್ರಾವಣಿ ಮಧ್ಯಾಹ್ನ ಆಸ್ಪತ್ರೆಯಿಂದ ತನ್ನ ಸ್ಕೂಟರ್‌ನಲ್ಲಿ ಮನೆಗೆ ಹಿಂದಿರುಗುವಾಗ, ಕರ್ನೂಲಿನ ಕೆ.ಸಿ. ಕಾಲುವೆಯ ಬಳಿ ವಾಹನವೊಂದು ಡಿಕ್ಕಿ ಹೊಡೆದಿದೆ. ಈ ವೇಳೆ ದಾರಿಯಲ್ಲಿ ಹೋಗುತ್ತಿದ್ದ ವಸುಂಧರಾ ಗಾಯಗೊಂಡಿದ್ದ ಶ್ರಾವಣಿಗೆ ಸಹಾಯ ಮಾಡುವ ನೆಪದಲ್ಲಿ ಆಟೋದಲ್ಲಿ ಕರೆದೊಯ್ಯುವಾಗ ಆಕೆಯ ಕುತ್ತಿಗೆಗೆ ಇಂಜೆಕ್ಷನ್ ನೀಡಿದ್ದಳು. ಅನುಮಾನಗೊಂಡ ಶ್ರಾವಣಿ ಪತಿ ಕರುಣಾಕರ್‌ಗೆ ಮಾಹಿತಿ ನೀಡಿದ್ದರು.
ಈ ಸಂಬಂಧ ಕರುಣಾಕರ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ವಿಚಾರಣೆಗೊಳಪಡಿಸಿದಾಗ ಹೆಎಚ್‌ಐವಿ ಇಂಜೆಕ್ಟ್ ಮಾಡಿರೋದು ಬೆಳಕಿಗೆ ಬಂದಿದೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ತಾಂತ್ರಿಕ ಪುರಾವೆಗಳ ಸಹಾಯದಿಂದ ವಸುಂಧರಾ ಮತ್ತು ಆಕೆಗೆ ಸಹಾಯ ಮಾಡಿದ ಮೂವರನ್ನ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನೂ ಶ್ರಾವಣಿ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇದನ್ನೂ ಓದಿ: ತಂದೆಯೇ ಮಗು ಕೊಂದ ಪ್ರಕರಣ – ಹಲವು ಸೆಕ್ಸ್ ಚಾಟ್ ಗ್ರೂಪಲ್ಲಿ ಆಕ್ಟೀವ್ ಆಗಿದ್ದ ಶಿಜಿಲ್

