ಅಮರಾವತಿ: ಆಂಧ್ರಪ್ರದೇಶದ (Andhrapradesh) ವಿಜಯನಗರಂ ಜಿಲ್ಲೆಯಲ್ಲಿ ರೈಲು ಹಳಿ ತಪ್ಪಿದ್ದು, ಘಟನೆಯಲ್ಲಿ ಮೃತರ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಇನ್ನು ಮೃತರ ಕುಟುಂಬಸ್ಥರಿಗೆ ಆಂಧ್ರ ಸರ್ಕಾರ 10 ಲಕ್ಷ ಪರಿಹಾರ ಹಾಗೂ ಗಾಯಾಳುಗಳಿಗೆ 2.5 ಲಕ್ಷ ಸಾವಿರ ಪರಿಹಾರ ಘೋಷಿಸಿದೆ.
ಭಾನುವಾರ ರಾತ್ರಿ 7 ಗಂಟೆ ಸುಮಾರಿಗೆ ವಿಶಾಖಪಟ್ಟಣಂ-ರಾಯಗಢ (Visakhapatnam to Rayagada) ಪ್ಯಾಸೆಂಜರ್ ರೈಲು ವಿಶಾಖಪಟ್ಟಣಂ-ಪಲಾಸ ಪ್ಯಾಸೆಂಜರ್ ರೈಲಿಗೆ ಡಿಕ್ಕಿಯಾಗಿತ್ತು. ಘಟನೆಯಲ್ಲಿ 11 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಆಂಧ್ರದಲ್ಲಿ ನಿಂತಿದ್ದ ಪ್ಯಾಸೆಂಜರ್ ರೈಲಿಗೆ ಎಕ್ಸ್‌ಪ್ರೆಸ್ ರೈಲು ಡಿಕ್ಕಿ; 6 ಮಂದಿ ಸಾವು
ವಿಶಾಖಪಟ್ಟಣದಿಂದ ರಾಯಗಢಕ್ಕೆ ರೈಲು ಪ್ರಯಾಣಿಸುತ್ತಿತ್ತು. ವಿಶಾಖಪಟ್ಟಣದಿಂದ ಪಲಾಸಕ್ಕೆ ಅದೇ ಮಾರ್ಗದಲ್ಲಿ ಚಲಿಸುತ್ತಿದ್ದ ಪ್ಯಾಸೆಂಜರ್ ರೈಲಿಗೆ ಡಿಕ್ಕಿಯಾಗಿದೆ. ಪರಿಣಾಮ ರೈಲಿನ ಬೋಗಿಗಳು ಹಳಿ ತಪ್ಪಿದೆ. ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್‍ಗೆ ಕರೆ ಮಾಡಿ ಪ್ರಧಾನಿ ಮೋದಿ ಘಟನೆಯ ಮಾಹಿತಿ ಪಡೆದುಕೊಂಡಿದ್ದಾರೆ.
Web Stories