ಆಂಧ್ರ ಶೈಲಿಯ ಗೊಂಗುರ ಚಿಕನ್ ಬಿರಿಯಾನಿ ತಿಂದು ನೋಡಿ..!

Public TV
2 Min Read
Gongura Chicken Biryani 1

ಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ರಾಜ್ಯದಲ್ಲಿ ಆಂಧ್ರ ಪ್ರದೇಶ ಕೂಡ ಒಂದು. ವಿವಿಧ ಶೈಲಿಯ ಚಿಕನ್ ಪಾಕವಿಧಗಳಲ್ಲಿ ಗೊಂಗುರ ಚಿಕನ್ ಬಿರಿಯಾನಿ ಬಹಳ ವಿಭಿನ್ನ. ನಿಮಗೂ ಸಾಮಾನ್ಯ ಚಿಕನ್ ಬಿರಿಯಾನಿ ತಿಂದು ಬೋರ್ ಆಗಿದೆಯಾ? ಹಾಗಾದ್ರೆ ಆಂಧ್ರ ಶೈಲಿಯ ಗೊಂಗುರ ಚಿಕನ್ ಬಿರಿಯಾನಿಯನ್ನು ಮನೆಯಲ್ಲೇ ಸುಲಭವಾಗಿ ಮಾಡುವುದು ಹೇಗೆ ಎಂದು ಇವತ್ತಿನ ನಮ್ಮ ರೆಸಿಪಿಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ.

Gongura Chicken Biryani

ಬೇಕಾಗುವ ಸಾಮಗ್ರಿಗಳು:
* ಬೋನ್‌ಲೆಸ್ ಚಿಕನ್ – 500 ಗ್ರಾಂ
* ಅಡಿಗೆ ಎಣ್ಣೆ- 60 ಗ್ರಾಂ
* ಹೆಚ್ಚಿದ ಈರುಳ್ಳಿ- 150 ಗ್ರಾಂ
* ಶುಂಠಿ ಬೆಳ್ಳುಳ್ಳಿ ಪೇಸ್ಟ್ – 40 ಗ್ರಾಂ
* ರುಬ್ಬಿದ ಟೊಮೆಟೋ ಪೇಸ್ಟ್ – 50 ಗ್ರಾಂ
* ಗೊಂಗುರ ಎಲೆಗಳ ಪೇಸ್ಟ್ – 100 ಗ್ರಾಂ
* ನೀರು – 1 ಕಪ್
* ಅರಿಶಿನ ಪುಡಿ – 1 ಚಮಚ
* ದನಿಯಾ ಪುಡಿ- 2 ಚಮಚ
* ಕಾಶ್ಮೀರಿ ಖಾರದ ಪುಡಿ- 1 ಚಮಚ
* ಅಮ್‌ಚುರ್ ಪುಡಿ-1/2 ಚಮಚ
* ಗರಂ ಮಸಾಲ – 1/2 ಚಮಚ

Gongura Chicken Biryani 2

ಬಿರಿಯಾನಿ ರೈಸ್ ಮಾಡಲು ಬೇಕಾಗಿರುವ ಸಾಮಗ್ರಿ:
* ಬಾಸುಮತಿ ಅಕ್ಕಿ( 80%) ರಷ್ಟು ಬೇಯಿಸಿದ) – 750 ಗ್ರಾಂ
* ದೇಸಿ ತುಪ್ಪ – 60 ಗ್ರಾಂ
* ಕೇಸರಿ ನೀರು – 150 ಗ್ರಾಂ
* ಗುಲಾಬಿ (ರೋಸ್ ವಾಟರ್) – 40 ಗ್ರಾಂ
* ಕೇವ್ರಾ ನೀರು – 50 ಗ್ರಾಂ
* ಉದ್ದವಾಗಿ ಹೆಚ್ಚಿದ ಹಸಿ ಮೆಣಸಿನಕಾಯಿ – 100 ಗ್ರಾಂ
* ಪುದೀನ – 1 ಚಮಚ
* ಕೊತ್ತಂಬರಿ ಸೊಪ್ಪು – 2 ಚಮಚ
* ಎಣ್ಣೆಯಲ್ಲಿ ಫ್ರೈ ಮಾಡಿದ ಈರುಳ್ಳಿ – 3 ಚಮಚ
* ಉಪ್ಪು- ರುಚಿಗೆ ತಕ್ಕಷ್ಟು

Gongura Chicken Biryani

ಮಾಡುವ ವಿಧಾನ:
* ಮೊದಲು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿಕೊಂಡು ಕತ್ತರಿಸಿದ ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿಕೊಳ್ಳಿ. ಈಗ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ. ನಂತರ ಬಾಣಲೆಯಿಂದ ಎಣ್ಣೆ ಬಿಟ್ಟುಕೊಳ್ಳುವವರೆಗೂ ಬೇಯಿಸಿಕೊಳ್ಳಿ.
* ಈಗ ಟೊಮೆಟೋ ಮತ್ತು ಗೊಂಗುರ ಎಲೆಗಳ ಪೇಸ್ಟ್ ಹಾಕಿಕೊಂಡು ಕಡಿಮೆ ಉರಿಯಲಿಟ್ಟು ಬೇಯಿಸಿಕೊಳ್ಳಿ.
* ಹಸಿವಾಸನೆ ಹೋಗುವವರೆಗೂ ಬೇಯಿಸಿಕೊಂಡ ನಂತರ ಚಿಕನ್ ಹಾಕಿಕೊಂಡು 10 ನಿಮಿಷಗಳ ಕಾಲ ಮುಚ್ಚಳ ಮುಚ್ಚಿ ಬೇಯಿಸಿಕೊಳ್ಳಿ.
* ಬಳಿಕ ಮಸಾಲೆ ಪುಡಿಗಳನ್ನು ಹಾಕಿ ಚೆನ್ನಾಗಿ ಬೇಸಿಕೊಂಡು ಪಕಕ್ಕೆ ಇಡಿ.

Gongura Chicken Biryani 3

ಬಿರಿಯಾನಿ ರೈಸ್ ಮಾಡುವ ವಿಧಾನ:
* ಒಂದು ಪ್ಯಾನ್‌ನಲ್ಲಿ ರೈಸ್ ತೆಗೆದುಕೊಂಡು ತುಪ್ಪ, ರೋಸ್ ವಾಟರ್ ಮತ್ತು ಕೆವ್ರಾ ನೀರು ಹಾಕಿ. ಬಳಿಕ ಕೊತ್ತಂಬರಿ, ಪುದೀನ ಮೆಣಸಿನ ಕಾಯಿಗಳನ್ನು ಹಾಕಿ.
* ಬಿರಿಯಾನಿ ಮೇಲೆ ಉಳಿದಿರುವ ಈರುಳ್ಳಿಯನ್ನು ಹಾಕಿ 20 ನಿಮಿಷಗಳ ಕಾಲ ದಮ್ ಕಟ್ಟಿಸಿ.
* ಈಗ ಮೊದಲು ಮಾಡಿರುವ ಗೊಂಗುರ ಚಿಕನ್ ಅನ್ನು ಬಿರಿಯಾನಿ ರೈಸ್ ಮೇಲೆ ಹಾಕಿ ಮಿಕ್ಸ್ ಮಾಡಿ.
* ಬಿಸಿಯಾಗಿರುವ ಗೊಂಗುರ ಚಿಕನ್ ಬಿರಿಯಾನಿಯನ್ನು ರಾಯಿತ ಜೊತೆ ಕುಟುಂಬದವರ ಜೊತೆ ಸವಿಯಿರಿ.

Share This Article