ಹೈದರಾಬಾದ್: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಲೈಂಗಿಕ ಸಂಪರ್ಕ ಬೆಳಿಸಿ ಬಳಿಕ ಅದೇ ಮಂಚಕ್ಕೆ ಕಟ್ಟಿ ಹಾಕಿ ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
ಈ ಘಟನೆ ಪ್ರಕಾಶಂ ಜಿಲ್ಲೆಯ ಚೌಟಾಪಲ್ಲಿ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಮೃತನನ್ನು ಪೊಡಿಲಿ ನಿವಾಸಿ ಶೇಕ್ ಶಬ್ಬೀರ್ (32) ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ಶಕೀರಾ (28) ಕೊಲೆ ಮಾಡಿ ಬಳಿಕ ಪೊಲೀಸರಿಗೆ ಶರಣಾಗಿದ್ದಾಳೆ.
ಘಟನೆಯ ವಿವರ:
ಶಬ್ಬೀರ್ ಮರಿಪುಡಿ ಪೊಲೀಸ್ ಠಾಣೆಯಲ್ಲಿ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು. ಜೊತೆಗೆ ಕೋಳಿ ಫಾರಂ ಉದ್ಯಮವನ್ನು ಮಾಡುತ್ತಿದ್ದನು. ಇವರಿಬ್ಬರ ನಡುವೆ ಪ್ರೀತಿ ಇತ್ತು. ಆದರೆ ಶರೀರಾ ಮತ್ತು ಶಬ್ಬೀರ್ ಬೇರೆ ಬೇರೆ ಮದುವೆಯಾಗಿದ್ದರು. ಮದುವೆಯ ನಂತರವೂ ಇವರಿಬ್ಬರು ತಮ್ಮ ಅಕ್ರಮ ಸಂಬಂಧವನ್ನು ಮುಂದುವರಿಸಿದ್ದರು. ಇವರಿಬ್ಬವರು ಆಗಾಗ ಕೋಳಿ ಫಾರಂನಲ್ಲಿ ಭೇಟಿಯಾಗುತ್ತಿದ್ದರು.
ಇವರಿಬ್ಬರ ನಡುವೆ ಕಳೆದ 8 ತಿಂಗಳಿಂದ ಹಣದ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಆದ್ದರಿಂದ ಶಕೀರಾ ಶನಿವಾರ ರಾತ್ರಿ ಶಬ್ಬೀರ್ ನನ್ನು ಭೇಟಿ ಮಾಡಲು ನಿರ್ಧಾರ ಮಾಡಿದ್ದಳು. ಆದರೆ ಆಕೆ ಮೊದಲೆ ಶಬ್ಬೀರನ್ನ ಕೊಲೆ ಮಾಡಲು ಪ್ಲಾನ್ ಮಾಡಿಕೊಂಡು ಪೆಟ್ರೋಲ್ ಸಮೇತ ಅಲ್ಲಿಗೆ ಬಂದಿದ್ದಳು. ನಂತರ ಆಕೆ ಶಬ್ಬೀರ್ ಗೆ ಸೆಕ್ಸ್ ಮಾಡುವಂತೆ ಹೇಳಿದ್ದಾಳೆ. ಅದರಂತೆಯೇ ಸೆಕ್ಸ್ ಆದ ಬಳಿಕ ಅದೇ ಕಬ್ಬಿಣದ ಮಂಚಕ್ಕೆ ಸರಪಳಿಯಿಂದ ಶಬ್ಬೀರ್ ಕಟ್ಟಿಹಾಕಿದ್ದಾಳೆ. ನಂತರ ತಾನು ತಂದಿದ್ದ ಪೆಟ್ರೋಟ್ ಹಾಕಿ ಬೆಂಕಿ ಹಚ್ಚಿದ್ದಾಳೆ ಹೋಗಿದ್ದಾಳೆ ಎಂದು ಪೊಡಿಲಿ ಇನ್ಸ್ ಪೆಕ್ಟರ್ ಎಂ. ಶ್ರೀನಿವಾಸರಾವ್ ಹೇಳಿದ್ದಾರೆ.
ಸೋಮವಾರ ಮುಂಜಾನೆ ಕಾರ್ಮಿಕರು ಕೆಲಸಕ್ಕೆ ಬಂದಾಗ ನೋಡಿ ತಕ್ಷಣವೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಆದರೆ ಆರೋಪಿ ಶಕೀರಾ ಪೊಲೀಸ್ ಠಾಣೆಗೆ ಬಂದು ತಾನು ಕೊಲೆ ಮಾಡಿರುವುದನ್ನು ಹೇಳಿ ಶರಣಾಗಿದ್ದಾಳೆ. ಸದ್ಯಕ್ಕೆ ಆರೋಪಿ ಶಕೀರಾಳನ್ನು ಬಂಧಿಸಿದ್ದು, ಐಪಿಸಿ ಸೆಕ್ಷನ್ 302(ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.