ಹೈದರಾಬಾದ್: ಹಿಂದೆ ರಾಜರೆಲ್ಲ ತಲೆ ಮೇಲೆ ಕಿರೀಟ ಹಾಗೂ ಆಭರಣವನ್ನೆ ಮೈ ಮೇಲೆ ಹೊತ್ತುಕೊಂಡು ವಿವಾಹವಾಗಿದ್ದನ್ನು ನೀವು ಟೀವಿಗಳಲ್ಲಿ ನೋಡಿರಬಹುದು. ಆದರೆ ಈಗ ಕಾಲ ಬದಲಾಗಿದೆ. ಕೋಟು, ಬೂಟು, ಸೂಟು, ಕುರ್ತಾ, ಪಂಚೆ, ಸಾವಿರಾರು ರೂ. ಬೆಲೆ ಬಾಳುವ ಸೀರೆ, ಇನ್ನಿತ್ಯಾದಿ ಬಟ್ಟೆಗಳನ್ನು ತೊಟ್ಟು ಮದುವೆಗಳು ನಡೆಯುತ್ತವೆ. ಆದರೆ ಇಲ್ಲೊಂದು ಮದುವೆ ಮಾತ್ರ ದೇವತೆಗಳ ಸಮ್ಮುಖದಲ್ಲಿ ಆಗಿದೆ.
Advertisement
Advertisement
Advertisement
ಅರೇ ಇದೇನಪ್ಪ ಅಂತೀರಾ ಹೌದು. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಚಿಕ್ಕ ಪಟ್ಟಣವಾದ ತನುಕದಲ್ಲಿ ನಡೆದ ಮದುವೆ ತುಂಬಾ ವಿಶೇಷತೆಯಿಂದ ಕೂಡಿತ್ತು. ತಲೆ ಮೇಲೆ ಕಿರೀಟ, ಮೈ ತುಂಬಾ ಆಭರಣಗಳು ಹಾಕಿ ವಿಷ್ಣು, ಲಕ್ಷ್ಮೀ, ರಾಮ ಸೀತೆ ಮದುವೆನಾ ಎಂದು ಬಂದವರೆಲ್ಲಾ ಅನ್ನೋ ರೀತಿಯಲ್ಲಿ ವಧು ವರರು ಕಾಣುತ್ತಿದ್ದರು.
Advertisement
ತನುಕು ಸಮೀಪದ ಮುಖ್ಯಮಾಲಾ ಆಶ್ರಮದ ಪೀಠಾಧಿಪತಿಯಾಗಿರುವ ಶ್ರೀಧರ್ ಸ್ವಾಮಿಯ ಮಗಳ ಮದುವೆಯಲ್ಲಿ ಈ ವಿಶೇಷತೆ ಕಂಡುಬಂದಿತ್ತು.ವಧು ಲಕ್ಷ್ಮೀ ದೇವಿಯಂತೆ ವಸ್ತ್ರ ಧರಿಸಿದ್ದರೆ, ವರನೂ ಕೂಡ ವಿಷ್ಣುವಿನಂತೆ ದಿರಿಸು ತೊಟ್ಟು ಹಸೆಮಣೆ ಏರಿದ್ದಾರೆ.
ವಧು ಮತ್ತು ವರನ ಪೋಷಕರು ನಿಜವಾದ ದೇವತೆಗಳ ರೀತಿ ರಾಜ, ರಾಣಿಯಂತೆ ಅಲಂಕಾರ ಮಾಡಿಕೊಂಡು ಮದುವೆ ಕಾರ್ಯಕ್ರಮದ ಪ್ರಮುಖ ಕೇಂದ್ರ ಬಿಂದುವಾಗಿದ್ದರು. ರಾಜ ರಾಣಿಯರು ಧರಿಸುವಂತಹ ಆಭರಣಗಳು ಮತ್ತು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ್ದ ಇವರನ್ನು ನೋಡಿ ಅತಿಥಿಗಳು ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಇವರಷ್ಟೇ ಅಲ್ಲದೇ ಇವರ ಆತ್ಮೀಯ ಸಂಬಂದಿಗಳು ದೇವತೆಗಳ ಉಡುಪನ್ನು ಧರಿಸಿ ಮದುವೆ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ಈ ವಿಶೇಷ ಉಡುಪುಗಳನ್ನು ಹಾಕಿ ಮದುವೆಯಾಗಿದ್ದು ಆಂಧ್ರದಲ್ಲಿ ಈಗ ಭಾರೀ ಸುದ್ದಿಯಾಗಿದ್ದು, ಮುಂದಿನ ದಿನಗಳಲ್ಲಿ ಇದು ಒಂದು ಟ್ರೆಂಡ್ ಆಗಬಹುದು ಎನ್ನುವ ಮಾತುಗಳು ಕೇಳಿಬಂದಿದೆ.