ಹಾವೇರಿ: ಪಕ್ಕದ ಆಂಧ್ರ, ತಮಿಳುನಾಡಿನಲ್ಲೂ ನಮಗಿಂತ ದರ ಹೆಚ್ಚಿದೆ. ನಮ್ಮದೇ ಕಡಿಮೆ ಇದೆ ಎಂದು ಬಸ್ ಟಿಕೆಟ್ ದರ (Bus Ticket Price Hike) ಏರಿಕೆಯನ್ನು ಸಚಿವ ಶಿವಾನಂದ ಪಾಟೀಲ್ (Shivanand Patil) ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಹಾವೇರಿಯಲ್ಲಿ (Haveri) ಮಾತನಾಡಿದ ಅವರು, ಬಿಜೆಪಿ ಅವರಿಗೆ ಹೋರಾಟ ಮಾಡೋದು ಬಿಟ್ಟರೆ ಏನು ಕೆಲಸ ಇದೆ ಹೇಳಿ? ಒಂದು ಸಲವಾದರೂ ಅಭಿವೃದ್ಧಿ ಬಗ್ಗೆ ಮಾತಾನಾಡುತ್ತಾರಾ? ಶಕ್ತಿ ಯೋಜನೆಯಲ್ಲಿ ಜನರನ್ನು ಓಡಾಡಿಸುತ್ತಿದ್ದೇವೆ ಅಂದರೆ ಅಟ್ ಲೀಸ್ಟ್ ನೋ ಪ್ರಾಫಿಟ್ ನೋ ಲಾಸ್‌ನಲ್ಲಿ ಆದರೂ ಉಳಿಸಬೇಕು ಎಂಬ ಉದ್ದೇಶ ಅಷ್ಟೇ. ಹೆಣ್ಣು ಮಕ್ಕಳಿಗೆ, ಬಡವರಿಗೆ ಏನು ಕೊಡಬೇಕೋ ಅದನ್ನು ಆದಷ್ಟು ಕೊಟ್ಟಿದ್ದೇವೆ ಎಂದರು. ಇದನ್ನೂ ಓದಿ: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ – ಪತಿ, ಅತ್ತೆಯ ವಿರುದ್ಧ ಕೊಲೆ ಆರೋಪ
Advertisement
Advertisement
ದುಡಿಯುವ ಗಂಡಮಕ್ಕಳಿಗೆ 15% ಭಾರ ಆಗಬಹುದು. ನಾನು ಇಲ್ಲ ಅಂತ ಹೇಳಲ್ಲ. ಪ್ರತಿ ನಿತ್ಯ ಓಡಾಡುತ್ತಿರೋದು ಹೆಣ್ಣ ಮಕ್ಕಳೇ ಇದ್ದಾರೆ. ಗಂಡುಮಕ್ಕಳು ಓಡಾಡಲ್ಲ, ನೀವು ಉಲ್ಟಾ ಹೇಳುತ್ತಿದ್ದೀರಿ ಎಂದರು. ಇದನ್ನೂ ಓದಿ: ಆಧಾರವಿಲ್ಲದೆ ವಿಪಕ್ಷಗಳು ಆರೋಪ ಮಾಡಬಾರದು – ಟಿಕೆಟ್ ದರ ಏರಿಕೆ ಸಮರ್ಥಿಸಿಕೊಂಡ ಸಿಎಂ
Advertisement
Advertisement
ಕಾಂಗ್ರೆಸ್‌ನಲ್ಲಿ ಪುನಃ ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಯಾರು ಸಿಎಂ ಇರಬೇಕು, ಡಿಸಿಎಂ ಇರಬೇಕು ಎಂಬುದನ್ನು ವರಿಷ್ಟರು ತೀರ್ಮಾನ ಮಾಡಬೇಕು. ಈ ಬಗ್ಗೆ ಸಿಎಲ್‌ಪಿನಲ್ಲಿ ನಿರ್ಣಯ ಆಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಫೆ.4ರಂದು ಬಸವನ ಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ: ಈಶ್ವರಪ್ಪ