ಹೈದರಾಬಾದ್: ಬಡಿಗೆಯಿಂದ ಬಡದಾಡಿಕೊಂಡು ವಿಶಿಷ್ಟವಾಗಿ ದಸರಾ ಹಬ್ಬವನ್ನು ಆಚರಣೆ ಮಾಡಿ, 80ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ನಡೆದಿದೆ.
ಅರಕೇರೆ, ನೇರಣಿಕಿ, ಮಾಳ ಮಲ್ಲೇಶ್ವರದಲ್ಲಿ ಪ್ರತಿ ವರ್ಷದಂತೆ ಈ ವರ್ಷ ದಸರಾವನ್ನು ವಿಶಿಷ್ಟವಾಗಿ ಆಚರಣೆ ಮಾಡಿದ್ದಾರೆ. ಪೊಲೀಸರೆದುರೇ ಸಾವಿರಾರು ಭಕ್ತರು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಒಬ್ಬರಿಗೊಬ್ಬರು ಹೊಡೆದುಕೊಳ್ಳುತ್ತಾ ಆಚರಣೆ ಮಾಡಿದ್ದಾರೆ.
ಸುತ್ತಮುತ್ತಲು ಗ್ರಾಮಸ್ಥರು ಸೇರಿ ದಸರಾ ಹಬ್ಬಕ್ಕೆ ಕಟ್ಟಿಗೆ, ಕಬ್ಬಿಣ ಕೋಲಿನಿಂದ ಹೊಡೆದಾಟ ಮಾಡಿಕೊಂಡು ದೇವರನ್ನ ಗ್ರಾಮಕ್ಕೆ ಕರೆದುಕೊಂಡು ಹೋದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇಲ್ಲಿಯ ಜನರಿಗೆ ಇದೆ. ಹೀಗಾಗಿ ಹಲವು ವರ್ಷಗಳಿಂದ ಈ ಪದ್ಧತಿ ಆಚರಣೆ ನಡೆದುಕೊಂಡು ಬಂದಿದೆ. ಇದೀಗ ಕೊರೊನಾದಿಂದ ಈ ಆಚರಣೆಗೆ ನಿಷೇಧ ಇದ್ದರು ಸ್ಥಳೀಯರು ಎಲ್ಲರೂ ಸೇರಿಕೊಂಡು ಈ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ.
ಹೀಗೆ ನಿನ್ನೆ ರಾತ್ರಿ 10 ಗಂಟೆಯಿಂದ ಇಂದು ಮುಂಜಾನೆವರೆಗೂ ನಡೆದ ಈ ಆಚರಣೆಯಲ್ಲಿ 80ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಬಡಿದಾಟಕ್ಕೆ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.