ಅಮರಾವತಿ: ಕ್ವಾರಂಟೈನ್‍ನಲ್ಲಿ ಇರುವ ಕೊರೊನಾ ಶಂಕಿತರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ‘ಕೈ ತುತ್ತು’ (ಗೋರು ಮುದ್ದ) ಮೆನು ನೀಡುತ್ತಿದ್ದಾರೆ.
ವಿಜಯವಾಡದ ಕ್ವಾರಂಟೈನ್ ಕೇಂದ್ರದಲ್ಲಿ ಇರುವ ಕೊರೊನಾ ಸೋಂಕು ಶಂಕಿರಿಗೆ ಬಾಳೆಹಣ್ಣು, ಮೋಸಂಬಿ, ಒಣ ದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ ಖರ್ಜೂರ ಮತ್ತು ಮೊಟ್ಟೆಗಳನ್ನು ನೀಡಲಾಗುತ್ತಿದೆ. ಇದೇ ರೀತಿ ಕೈ ತುತ್ತು ಮೆನುವನ್ನು ರಾಜ್ಯದಾದ್ಯಂತದ ಎಲ್ಲಾ ಕ್ವಾರಂಟೈನ್ ಕೇಂದ್ರಗಳಲ್ಲಿ ಅನುಸರಿಸಬೇಕು ಎಂದು ಜಗನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ.
Advertisement
Advertisement
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಗುರುವಾರ ಬೆಳಗ್ಗೆ ವೇಳೆಗೆ ಒಂದೇ ದಿನದಲ್ಲಿ ಆಂಧ್ರಪ್ರದೇಶದಲ್ಲಿ 43 ಜನರಿಗೆ ಕೊರೊನಾ ದೃಢವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 348ಕ್ಕೆ ಏರಿಕೆ ಕಂಡಿದೆ. ಇಲ್ಲಿವರೆಗೂ 6 ಮಂದಿ ಚೇತರಿಸಿಕೊಂಡಿದ್ದು, ನಾಲ್ವರು ಮೃತಪಟ್ಟಿದ್ದಾರೆ.
Advertisement
Andhra Pradesh: A quarantine center in Vijayawada is serving fruits, dry fruits, and eggs in a bid to boost the immune system of the occupants. All relief centers across the states have also been asked to follow the ' Goru Mudda' menu by the Chief Minister YS Jagan Mohan Reddy. pic.twitter.com/YzGtriPtfT
— ANI (@ANI) April 9, 2020