ರಾಬಾದ್: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಒಂದು ತಿಂಗಳ ದೀರ್ಘಕಾಲದ ಮತದಾನ ಪ್ರಕ್ರಿಯೆ ಇಂದಿನಿಂದ ಆರಂಭಗೊಂಡಿದ್ದು, ಇದರ ಭಾಗವಾಗಿ ಆಂಧ್ರಪ್ರದೇಶದಲ್ಲಿ ಉಂಟಾದ ಗಲಾಟೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಇಂದು ಆಂಧ್ರ ಪ್ರದೇಶದ ಲೋಕಸಭೆಯ 25 ಮತ್ತು ವಿಧಾನಸಭೆಯ 175 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಿತು. ಈ ವೇಳೆ ಅನಂತಪುರದ ತಾಡಿಪತ್ರಿಯಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಉಂಟಾದ ಗಲಾಟೆಯಲ್ಲಿ ಇಬ್ಬರನ್ನು ಕೊಲೆ ಮಾಡಲಾಗಿದೆ. ಟಿಡಿಪಿಯ ಭಾಸ್ಕರ್ ರೆಡ್ಡಿ, ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಪುಲ್ಲಾರೆಡ್ಡಿ ದಾರುಣ ಹತ್ಯೆಯಾಗಿದ್ದಾರೆ. ಇತ್ತ ವೀರಾಪುರಂನ ಮತಗಟ್ಟೆಯಲ್ಲಿ ಗ್ಯಾಂಗ್ ಒಂದು ನುಗ್ಗಿ ಅಕ್ರಮ ಮತದಾನ ನಡೆಸಲು ಯತ್ನಿಸಿದ್ದು, ಮಚ್ಚು-ಲಾಂಗು ಹಿಡಿದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ನಡುವೆ ಗಲಾಟೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
Advertisement
#WATCH Jana Sena MLA candidate Madhusudhan Gupta smashes an Electronic Voting Machine (EVM) at a polling booth in Gooty, in Anantapur district. He has been arrested by police. #AndhraPradesh pic.twitter.com/VoAFNdA6Jo
— ANI (@ANI) April 11, 2019
Advertisement
ಸತ್ತೇನಪಲ್ಲಿಯಲ್ಲಿ ಸ್ಪೀಕರ್ ಕೊಡೆಲಾ ಶಿವಪ್ರಸಾದ್ ಬಟ್ಟೆ ಹರಿದ ವೈಎಸ್‍ಆರ್ ಕಾರ್ಯಕರ್ತರು, ಕಲ್ಲು ಹೊಡೆದು ಹಲ್ಲೆ ಮಾಡಿದ್ದಾರೆ. ಕಡಪದಲ್ಲಿ ವೈಎಸ್‍ಆರ್ ಕಾರ್ಯಕರ್ತನಿಗೆ ರಕ್ತ ಬರುವಂತೆ ಟಿಡಿಪಿ ಕಾರ್ಯಕರ್ತರು ಹೊಡೆದಿದ್ದಾರೆ. ಗುತ್ತಿಯಲ್ಲಿ ಇವಿಎಂ ಒಡೆದುಹಾಕಿದ ಜನಸೇನಾ ಅಭ್ಯರ್ಥಿ ಮಧುಸೂಧನ್ ಗುಪ್ತಾರನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ಇತ್ತ ಇವಿಎಂ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಸಿಎಂ ಚಂದ್ರಬಾಬು ನಾಯ್ಡು ಅವರು, ರಾಜ್ಯದ 157 ಕಡೆ ಮರುಮತದಾನಕ್ಕೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. ಆದರೆ ಚಂದ್ರಬಾಬು ಅವರು ಸೋಲುವ ಹತಾಶೆಯಲ್ಲಿ ಈ ಆರೋಪ ಮಾಡಿದ್ದಾರೆ. ಮತದಾನ ಶುರುವಾದ 3 ಗಂಟೆಯಲ್ಲಿ ಮರುಮತದಾನಕ್ಕೆ ಬೇಡಿಕೆ ಇಟ್ಟಿರುವುದೇ ಇದಕ್ಕೆ ಸಾಕ್ಷಿ ಎಂದು ರಾಜಕೀಯ ನಾಯಕರು ಹೇಳಿದ್ದಾರೆ. ಆದರೆ ಚುನಾವಣಾ ಆಯೋಗ ಮಾತ್ರ ಇವಿಎಂನಲ್ಲಿ ಯಾವುದೇ ದೋಷ ಇಲ್ಲ. ಎಲ್ಲೂ ಮರುಚುನಾವಣೆ ನಡೆಸುವುದಿಲ್ಲ ಅಂತ ಸ್ಪಷ್ಟನೆ ನೀಡಿದೆ.
Advertisement
Andhra Pradesh Chief Minister Chandrababu Naidu and his family after casting their vote for #LokSabhaElections2019 in Amravati. pic.twitter.com/QzlYYfNzjd
— ANI (@ANI) April 11, 2019
ಕುಪ್ಪಂನಿಂದ 9ನೇ ಬಾರಿಗೆ ಮರು ಆಯ್ಕೆ ಬಯಸಿರುವ ಟಿಡಿಪಿ ಅಧ್ಯಕ್ಷ, ಸಿಎಂ ಚಂದ್ರಬಾಬು ನಾಯ್ಡು ಉಂಡವಲ್ಲಿಯಲ್ಲಿ, ವಿಪಕ್ಷ ನಾಯಕ ಜಗನ್ ರೆಡ್ಡಿ ಪುಲಿವೆಂದುಲ, ವಿಜಯವಾಡದಲ್ಲಿ ಜನಸೇನಾ ಅಧ್ಯಕ್ಷ ನಟ ಪವನ್ ಕಲ್ಯಾಣ್ ಹಕ್ಕು ಚಲಾಯಿಸಿದರು. ತೆಲಂಗಾಣ ಲೋಕಸಭಾ ಎಲೆಕ್ಷ್‍ನಲ್ಲಿ ಟಾಲಿವುಡ್ ಸ್ಟಾರ್ ಗಳು ಹಕ್ಕು ಚಲಾಯಿಸಿದರು.
#WATCH: Clash broke out between YSRCP and TDP workers in Puthalapattu Constituency in Bandarlapalli, Andhra Pradesh. Police resorted to lathi-charge pic.twitter.com/q7vxRIR0R8
— ANI (@ANI) April 11, 2019
#LokSabhaEelctions2019 #Chiranjeevi and #RamCharan cast their votes. pic.twitter.com/tIZEBEZX51
— Sreedhar Pillai (@sri50) April 11, 2019