ಹನಿಮೂನ್ ಮರ್ಡರ್‌ನಂತೆಯೇ ಆಂಧ್ರದಲ್ಲೂ ಮರ್ಡರ್ – ಮೇಘಾಲಯ ಹತ್ಯೆ ವಿಚಾರದ ಬಗ್ಗೆಯೂ ಮಾತಾಡಿದ್ರಂತೆ ಆರೋಪಿಗಳು

Public TV
4 Min Read
Andhra Pradesh Murder

-ಹನಿಮೂನ್ ಹತ್ಯೆಯಂತೆ ಕೊಲ್ಲಲು ನಿರ್ಧರಿಸಿದ್ದ ಆರೋಪಿ ಐಶ್ವರ್ಯ
-ಕೊಲೆ ಬಳಿಕ 20 ಲಕ್ಷ ಸಾಲ ಪಡೆದು ಲಡಾಖ್, ಅಂಡಮಾನ್ ಹೋಗುವ ಪ್ಲ್ಯಾನ್‌ ಮಾಡಿದ್ದ ಜೋಡಿ

ಹೈದರಾಬಾದ್: ಮದುವೆಯಾದ ಒಂದು ತಿಂಗಳ ಬಳಿಕ ಪತ್ನಿ, ಆಕೆಯ ಪ್ರಿಯಕರ ಹಾಗೂ ಪತ್ನಿಯ ತಾಯಿ ಸೇರಿಕೊಂಡು ಗಂಡನನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ಸಂಗತಿಗಳು ಬಯಲಾಗುತ್ತಿವೆ.

ಹೌದು, ಕೊಲೆಗೂ ಮುನ್ನ ಆರೋಪಿ ಐಶ್ವರ್ಯ ಹಾಗೂ ಆಕೆಯ ಪ್ರಿಯಕರ ತಿರುಮಲ್ ರಾವ್ (Tirumal Rao) ಸೇರಿಕೊಂಡು ಮೇಘಾಲಯ ಹನಿಮೂನ್ ಹತ್ಯೆಯ ಕುರಿತು ಚರ್ಚಿಸಿದ್ದರು. ಈ ಕುರಿತು ತನಿಖೆ ವೇಳೆ ಆರೋಪಿಗಳಿಬ್ಬರು ಮಾಹಿತಿ ಬಿಚ್ಚಿಟ್ಟಿದ್ದು, ಪ್ರಾರಂಭದಲ್ಲಿ ಮೇಘಾಲಯದ (Meghalaya) ರಾಜಾ ರಘುವಂಶಿಯ (Raja Raghuvanshi) ಕೊಲೆ ನಡೆದ ರೀತಿಯಲ್ಲಿ ತೇಜೇಶ್ವರ್‌ನ್ನು ಕೊಲ್ಲಲು ನಿರ್ಧರಿಸಿದ್ದರು ಎಂದು ತಿಳಿದು ಬಂದಿದೆ.ಇದನ್ನೂ ಓದಿ: ಮದ್ವೆಯಾದ ಒಂದೇ ತಿಂಗಳಿಗೆ ಪತಿ ಶವವಾಗಿ ಪತ್ತೆ – ಬ್ಯಾಂಕ್ ಉದ್ಯೋಗಿ ಜೊತೆಗಿನ ಅಫೇರ್ ಕಾರಣ; ರಹಸ್ಯ ಬಯಲು

Andhra Kurnool Murder

ಪ್ಲ್ಯಾನ್‌ ಏನಿತ್ತು?
ಮೊದಲಿಗೆ ಐಶ್ವರ್ಯ ಹಾಗೂ ತೇಜೇಶ್ವರ್ ಇಬ್ಬರು ಸೇರಿಕೊಂಡು ಬೈಕ್‌ನಲ್ಲಿ ತೆರಳುತ್ತಾರೆ. ಮಾರ್ಗಮಧ್ಯೆ ಹಂತಕರು ಅವರಿಬ್ಬರನ್ನು ಅಡ್ಡಗಟ್ಟಿ, ತೇಜೇಶ್ವರ್‌ನನ್ನು ಕೊಲೆ ಮಾಡುತ್ತಾರೆ. ಬಳಿಕ ಐಶ್ವರ್ಯ ಪ್ರಿಯಕರ ತಿರುಮಲ್ ರಾವ್ ಜೊತೆ ಅಲ್ಲಿಂದ ಪರಾರಿಯಾಗುತ್ತಾಳೆ. ಇದರಿಂದ ಪೊಲೀಸರು ಗೊಂದಲಕ್ಕೊಳಗಾಗಿ, ಯಾರೋ ಕೊಲೆ ಮಾಡಿ, ಐಶ್ವರ್ಯಳನ್ನು ಕಿಡ್ನ್ಯಾಪ್‌ ಮಾಡಿದ್ದಾರೆ ಎಂದುಕೊಳ್ಳುತ್ತಾರೆ ಎಂದು ಪ್ಲ್ಯಾನ್‌ ಮಾಡಿದ್ದರು. ಇವರಿಬ್ಬರು ಪ್ಲ್ಯಾನ್‌ ಮಾಡಿದಂತೆಯೇ ಮೇಘಾಲಯದಲ್ಲಿ ರಾಜಾ ರಘುವಂಶಿಯ ಕೊಲೆ ನಡೆದಿತ್ತು. ಆದರೆ ಮೇಘಾಲಯ ಪೊಲೀಸರ ತನಿಖೆ ವೇಳೆ ಸೋನಮ್ ಸಿಕ್ಕಿಬಿದ್ದಳು, ಕೊನೆಗೆ ಪೊಲೀಸರ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಳು. ಹೀಗಾಗಿ ತಮ್ಮ ಕೇಸ್‌ಲ್ಲಿ ಕೊನೆಗೆ ಹೀಗಾಗಬಹುದು ಎಂಬ ಭಯದಿಂದ ಈ ಪ್ಲ್ಯಾನ್‌ ಅನ್ನು ಕೈಬಿಟ್ಟಿರುವುದಾಗಿ ತಿಳಿಸಿದ್ದಾರೆ.

ಅದಲ್ಲದೇ ಐಶ್ವರ್ಯ ತನ್ನ ಪತಿಯ ಚಲನವಲನಗಳನ್ನು ಪತ್ತೆಹಚ್ಚಲು ಆತನ ಬೈಕ್‌ನಲ್ಲಿ ಜಿಪಿಎಸ್‌ನ್ನು ಅಳವಡಿಸಿದ್ದಳು. ಜೊತೆಗೆ ಇದೆಲ್ಲವನ್ನು ನೋಡಿಕೊಳ್ಳಲು ರಾಜೇಶ್ ಎಂಬಾತನನ್ನು ನೇಮಿಸಿದ್ದಳು. ಕೊಲೆ ಬಳಿಕ 20 ಲಕ್ಷ ಸಾಲ ಪಡೆದು ಐಶ್ವರ್ಯ ಹಾಗೂ ರಾವ್ ಇಬ್ಬರು ಸೇರಿಕೊಂಡು ಲಡಾಖ್‌ಗೆ ಹೋಗುವ ಪ್ಲ್ಯಾನ್‌ ಮಾಡಿದ್ದರು. ಜೊತೆಗೆ ಟಿಕೆಟ್ ಕೂಡ ಬುಕ್ ಮಾಡಿದ್ದರು. ಜೊತೆಗೆ ಅಂಡಮಾನ್‌ಗೆ ಹೋಗುವ ಯೋಜನೆಯೂ ಇತ್ತು ಎಂದು ತಿಳಿದುಬಂದಿದೆ.

ಒಟ್ಟು ತೇಜೇಶ್ವರ್‌ನ್ನು ಕೊಲೆ ಮಾಡಲು ಐದು ಬಾರಿ ಯತ್ನಿಸಲಾಗಿತ್ತು ಎಂದು ತಿಳಿದುಬಂದಿದೆ. ಸದ್ಯ ಪ್ರಕರಣ ಸಂಬಂಧ 8 ಜನರನ್ನು ಬಂಧಿಸಲಾಗಿದ್ದು, ಪತ್ನಿ ಐಶ್ವರ್ಯ, ಆಕೆಯ ಪ್ರಿಯಕರ ತಿರುಮಲ್ ರಾವ್, ಆಕೆಯ ತಾಯಿ ಸುಜಾತಾ, ತಿರುಮಲ್ ರಾವ್ ತಂದೆ, ಮಾಜಿ ಹೆಡ್ ಕಾನ್‌ಸ್ಟೆಬಲ್, ಹಂತಕರಾದ ನಾಗೇಶ್, ಪರಶುರಾಮ್ ಮತ್ತು ರಾಜೇಶ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: 10 ದಿನದಲ್ಲಿ ಪ್ರೀತಿ, ಪ್ರಣಯ – ಇನ್ಸ್ಟಾದಲ್ಲಿ ಪರಿಚಯವಾದ ವಿವಾಹಿತ ಪ್ರಿಯತಮೆಯ ಕೊಲೆಯಲ್ಲಿ ಅಂತ್ಯ!

ತಾಯಿ-ಮಗಳ ತ್ರಿಕೋನ ಪ್ರೇಮ:
ಆರೋಪಿ ಐಶ್ವರ್ಯ ತಾಯಿ ಸುಜಾತಾ ಬ್ಯಾಂಕ್‌ನಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದರು. ಇದೇ ವೇಳೆ ಐಶ್ವರ್ಯ ತಾಯಿಗೆ ತಿರುಮಲ್ ರಾವ್ ಎಂಬ ಅಧಿಕಾರಿಯ ಪರಿಚಯವಾಗಿತ್ತು. ಬಳಿಕ 2016ರಲ್ಲಿ ಅವರಿಬ್ಬರ ನಡುವೆ ಸಂಬಂಧ ಬೆಳೆಯಿತು. ಅದಾದ ನಂತರ ಒಂದು ಬಾರಿ ಸುಜಾತಾ ರಜೆಗೆಂದು ಹೋದಾಗ ಐಶ್ವರ್ಯ ಹಾಗೂ ತಿರುಮಲ್ ರಾವ್ ನಡುವೆ ಸಂಬಂಧ ಬೆಳೆಯಿತು. ಬಳಿಕ 2019ರಲ್ಲಿ ತಿರುಮಲ್ ರಾವ್‌ಗೆ ಬೇರೆಯೊಬ್ಬರ ಜೊತೆ ಮದುವೆಯಾಯಿತು. ಆತನು ಕೂಡ ತನ್ನ ಹೆಂಡತಿಯನ್ನು ಕೊಲ್ಲಲು ಪ್ರಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಮಗಳು ತಿರುಮಲ್ ರಾವ್ ಜೊತೆ ಸಂಬಂಧ ಹೊಂದಿದ್ದಾಳೆಂದು ಸುಜಾತಾಗೆ ಗೊತ್ತಾದಾಗ ಆ ಸಂಬಂಧವನ್ನು ಕೊನೆಗೊಳಿಸುವಂತೆ ತಿಳಿಸಿದ್ದಳು. ಬಳಿಕ ತೇಜೇಶ್ವರ್‌ನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಳು. ಅದಾದ ನಂತರ ಫೆಬ್ರವರಿಯಲ್ಲಿ ಮದುವೆ ನಿಶ್ಚಯಿಸಲಾಗಿತ್ತು. ಆದರೆ ಅದೇ ವೇಳೆ ಐಶ್ವರ್ಯ ಕಾಣೆಯಾದಳು. ಓಡಿಹೋಗಿರಬಹುದು ಅಂದುಕೊಂಡಿದ್ದೆವು, ಆದರೆ ಸ್ವಲ್ಪ ದಿನಗಳ ನಂತರ ಮನೆಗೆ ಮರಳಿದ ಐಶ್ವರ್ಯ, ನನ್ನ ಸ್ನೇಹಿತೆಯೊಬ್ಬಳು ವರದಕ್ಷಿಣೆ ಕಿರುಕುಳದಿಂದ ಬಳಲುತ್ತಿದ್ದಳು. ಆಕೆಯನ್ನು ಭೇಟಿಯಾಗಲು ಹೋಗಿದ್ದೆ ಅಂತ ಹೇಳಿದ್ದಳು. ಬಳಿಕ ನಾನು ತೇಜೇಶ್ವರ್‌ನ್ನನ್ನ ಪ್ರೀತಿಸುತ್ತಿದ್ದೇನೆ ಅವನನ್ನೇ ಮದುವೆಯಾಗುತ್ತೇನೆ ಎಂದಿದ್ದಳು. ಆದರೆ ಕುಟುಂಬಸ್ಥರ ಮಾಹಿತಿ ಪ್ರಕಾರ, ತೇಜೇಶ್ವರ್‌ಗೆ ಆಕೆಯೊಂದಿಗೆ ಮದ್ವೆ ಬೇಡ ಅಂತಲೇ ಹೇಳಿದ್ದೆವು. ಆದ್ರೆ ಮಗ ನಮ್ಮ ಮಾತು ಕೇಳದಿದ್ದರಿಂದ ಮೇ ತಿಂಗಳಲ್ಲಿ ಮದುವೆ ನಿಶ್ಚಯಿಸಲಾಯಿತು ಎಂದರು. ಅವನು ಕಾಣೆಯಾದ ಬಳಿಕ ಅವಳು ಅಳುತ್ತಿರಲಿಲ್ಲ, ದುಃಖ ಪಡಲಿಲ್ಲ. ಇದೆಲ್ಲವನ್ನು ಗಮನಿಸಿ ನಮಗೆ ಆಕೆಯ ಮೇಲೆ ಅನುಮಾನ ಉಂಟಾಗಿತ್ತು. ಹೀಗಾಗಿ ನಾವು ಆಕೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ತಿಳಿಸಿದ್ದಾರೆ.

ಘಟನೆ ಏನು?
ಮೇ 18ರಂದು ಮೃತ ತೇಜೇಶ್ವರ್ ಹಾಗೂ ಐಶ್ವರ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಜೂ.17ರಂದು ತೇಜೇಶ್ವರ್ ನಾಪತ್ತೆಯಾಗಿರುವುದಾಗಿ ದೂರು ದಾಖಲಾಗಿತ್ತು. ದೂರಿನ ಆಧಾರದ ಮೇಲೆ ತನಿಖೆಗಿಳಿದ ಪೊಲೀಸರು, ಕರ್ನೂಲ್ ನಗರದ ಸುಮಾರು 30-40 ಕಿ.ಮೀ ದೂರದಲ್ಲಿರುವ ಪಣ್ಯಂ ಮಂಡಲದ ಸುಗಲಿಮೆಟ್ಟುವಿನಲ್ಲಿ ಆತನ ಮೃತದೇಹವನ್ನು ಪತ್ತೆಹಚ್ಚಿದ್ದರು. ಆತನ ಮುಂಗೈಯಲ್ಲಿ ತೆಲುಗುವಿನಲ್ಲಿ ಅಮ್ಮ ಎಂದು ಬರೆಯಲಾಗಿತ್ತು. ದೇಹದ ಮೇಲೆ ಚಾಕುವಿನಿಂದಾದ ಗಾಯದ ಗುರುತು, ಕುತ್ತಿಗೆ ಸೀಳಿದ ಗಾಯಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ:Honeymoon Murder | ಕೊನೆಗೂ ತಮ್ಮಿಬ್ಬರ ಸಂಬಂಧ ಒಪ್ಪಿಕೊಂಡ ಸೋನಂ ರಘುವಂಶಿ – ರಾಜ್

Share This Article