ಮಡಿಕೇರಿ: ಆಂಧ್ರ ಪ್ರದೇಶದ ಅರಣ್ಯ ಇಲಾಖೆ ಸಿಬ್ಬಂದಿಗೆ 1 ತಿಂಗಳು ತರಬೇತಿ ನೀಡುವ ಕಾರ್ಯಾಗಾರಕ್ಕೆ ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ (Dubare Elephant Camp) ಚಾಲನೆ ಸಿಕ್ಕಿದೆ. ಆಂಧ್ರದ ಅರಣ್ಯ ಸಚಿವ ಪವನ್ ಕಲ್ಯಾಣ್ (Pawan Kalyan) ಅವರ ಮನವಿ ಮೇರೆಗೆ 20ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ.
ಕಾಡಾನೆ (Forest Elephant) ಸೇರಿದಂತೆ ವನ್ಯಜೀವಿಗಳ ಸಮಸ್ಯೆ ಕರ್ನಾಟಕ ಮಲೆನಾಡು ಭಾಗದಲ್ಲಿ ಮಾತ್ರವಲ್ಲ, ನೆರೆಯ ರಾಜ್ಯ ಆಂಧ್ರಪ್ರದೇಶದಲ್ಲೂ ಹೆಚ್ಚಾಗಿದೆ. ಕಾಡಾನೆಗಳ ಹಾವಳಿಯಂತು ಮಿತಿಮೀರಿಹೋಗಿದೆ. ನಾಡಿಗೆ ನುಗ್ಗುವ ಆನೆಗಳನ್ನ ಮತ್ತೆ ಕಾಡಿಗಟ್ಟಲು ನುರಿತ ಮಾವುತರು ಹಾಗೂ ಕಾವಾಡಿಗಳು ಇಲ್ಲದೇ ಇರೋದು ಸಮಸ್ಯೆಗೆ ಕಾರಣವಾಗಿದೆ. ಆದ್ದರಿಂದ ವನ್ಯಜೀವಿ ನಿರ್ವಹಣೆ ಕುರಿತು ರಾಜ್ಯದ ಅರಣ್ಯ ಸಿಬ್ಬಂದಿಗೆ ತರಬೇತಿ ನೀಡಬೇಕೆಂದು ಕರ್ನಾಟಕದ ಅರಣ್ಯ ಸಚಿವರಾದ ಈಶ್ವರ ಖಂಡ್ರೆ (Eshwar Khandre) ಅವರಿಗೆ ಪವನ್ ಕಲ್ಯಾಣ್ ಮನವಿ ಮಾಡಿದ್ದರು. ಅದರಂತೆ ಎರಡು ರಾಜ್ಯಗಳ ಅರಣ್ಯ ಇಲಾಖೆಗಳ ಪರಸ್ಪರ ಸಹಕಾರದೊಂದಿಗೆ ತರಬೇತಿ ನೀಡಲಾಗುತ್ತಿದೆ. ಇದನ್ನೂ ಓದಿ: ಕರುನಾಡಿಗೆ ಮತ್ತೊಂದು ಗರಿ: ದೇಶದ ಅತ್ಯಂತ ಕಿರಿಯ ಪೈಲಟ್ ಆಗಿ ವಿಜಯಪುರದ ಸಮೈರಾ
ಆಂಧ್ರ ಪ್ರದೇಶದ 17 ಮಾವುತ ಮತ್ತು ಕಾವಾಡಿಗರು, ನಾಲ್ವರು ಇಲಾಖೆ ಸಿಬ್ಬಂದಿ ಸೇರಿ 21 ಮಂದಿಗೆ ನಮ್ಮ ರಾಜ್ಯದ ಮಾವುತರು ಮತ್ತು ಕವಾಡಿಗಳು ತರಬೇತಿ ನೀಡುತ್ತಿದ್ದಾರೆ. ಸಾಕಾನೆಗಳಿಗೆ ಸ್ನಾನ ಮಾಡಿಸುವುದು, ಆಹಾರ ಕೊಡುವುದು, ಇಂತಹದ್ದೇ ಪದಗಳನ್ನು ಬಳಸಿ ಆನೆಗಳನ್ನು ಮಾತನಾಡಿಸುವುದು, ವನ್ಯಜೀವಿ ಸಂಘರ್ಷ ತಡೆಯುವುದು ಸೇರಿದಂತೆ ಇನ್ನಿತರ ವನ್ಯಜೀವಿ ನಿರ್ವಹಣೆ ಕುರಿತು ಹೇಳಿಕೊಡುತ್ತಿದ್ದಾರೆ. ಇದನ್ನೂ ಓದಿ: ಕೋಲಾರಕ್ಕೆ ಈ ಬಾರಿ ಮಂತ್ರಿ ಸ್ಥಾನ ನೀಡಲೇಬೇಕು, ನಾನು ಅರ್ಹನಿದ್ದೇನೆ: ಕೆವೈ ನಂಜೇಗೌಡ
ಆನೆ ಪಳಗಿಸುವುದು ಹೇಗೆ?
ಒಂದು ಆನೆಯನ್ನು ಪಳಗಿಸಿ ಸರಿದಾರಿಗೆ ತರೋದು ಮಕ್ಕಳಿಗೆ ಅ, ಆ, ಇ, ಈ ಕಲಿಸಿದಷ್ಟು ಸುಲಭದ ಕೆಲಸವಲ್ಲ. ಕೊಂಚ ಯಡವಟ್ಟಾದ್ರೂ ಪ್ರಾಣವೇ ಹೋಗುವ ಸಾಧ್ಯತೆ ಹೆಚ್ಚು. ಅದಕ್ಕಾಗಿ ಮಾವುತರು ಬಹಳ ಜಾಣ್ಮೆಯಿಂದಲೇ ಪಾಠ ಹೇಳಿಕೊಡುತ್ತಾರೆ. ಒಂದೊಂದೇ ಪದವನ್ನು ಕಲಿಸುತ್ತಾ… ಆನೆ ತಮ್ಮ ಮಾತಿಗೆ ಸ್ಪಂದಿಸಿದಾಗ ಶಬ್ಬಾಸ್ ಹೇಳಿ ಮೈದಡವಿ ಖುಷಿಡಿಸುತ್ತಾರೆ.
ಹೀಗೆ ನಿಧಾನವಾಗಿ ಆನೆಯನ್ನ ತಮ್ಮವಶಕ್ಕೆ ತೆಗೆದುಕೊಳ್ಳುಬೇಕು ಎಂದು ಇಲ್ಲಿನ ಮಾವುತರು ಆಂಧ್ರಪ್ರದೇಶದ ಅರಣ್ಯ ಸಿಬ್ಬಂದಿಗೆ ಪಾಠ ಹೇಳಿಕೋಡುತ್ತಿದ್ದಾರೆ. ಇದನ್ನೂ ಓದಿ: ಒಂದು ಕ್ಷಣವೂ ಯೋಚಿಸದೇ ದಾಖಲೆ, ವೀಡಿಯೋ ರಿಲೀಸ್ ಮಾಡ್ಲಿ – ಯತ್ನಾಳ್‌ಗೆ ವಿಜಯೇಂದ್ರ ಸವಾಲ್