ಹೈದರಾಬಾದ್: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮತದಾರರಿಗೆ ಭರ್ಜರಿ ಆಮಿಷವೊಡ್ಡಿದ್ದಾರೆ. ರಾಜ್ಯದ ನಿರುದ್ಯೋಗಿ ಬ್ರಾಹ್ಮಣ ಸಮುದಾಯದ ಯುವಕರಿಗೆ ಸ್ವಿಫ್ಟ್ ಡಿಸೈರ್ ಕಾರು ಹಂಚಿದ್ದಾರೆ.
ಸ್ವಯಂ ಉದ್ಯೋಗ ಯೋಜನೆ ಅಡಿ ಕಾರು ವಿತರಣೆ ಮಾಡಲಾಗಿದ್ದು, ನಿರುದ್ಯೋಗಿ ಫಲಾನುಭವಿಗಳು ಶೇ.10ರಷ್ಟು ಮೊತ್ತವನ್ನು ಭರಿಸಿದರೆ ಸಾಕು, ಉಳಿದ ಹಣವನ್ನು ಆಂಧ್ರ ಪ್ರದೇಶ ಬ್ರಾಹ್ಮಣ ಸಹಕಾರ ಕ್ರೆಡಿಟ್ ಸೊಸೈಟಿ ಭರಿಸಲಿದೆ.
Advertisement
Advertisement
ಯೋಜನೆಯ ಆರಂಭದ ಭಾಗವಾಗಿ ಸಿಎಂ ಚಂದ್ರಬಾಬು ನಾಯ್ಡು 30 ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರುಗಳನ್ನು ನಿರುದ್ಯೋಗಿ ಬ್ರಾಹ್ಮಣ ಯುವಕರಿಗೆ ವಿತರಿಸಿದ್ದಾರೆ. ಅಲ್ಲದೇ ಮೊದಲ ಹಂತವಾಗಿ ಐವತ್ತು ಕಾರುಗಳನ್ನು ವಿತರಿಸಲಾಗಿದೆ. ಕಾರು ಪಡೆದ ನಿರುದ್ಯೋಗಿಗಳಿಗೆ ಸಬ್ಸಿಡಿ 2 ಲಕ್ಷ ರೂ. ದೊರೆಯುತ್ತದೆ.
Advertisement
ಆಂಧ್ರ ಪ್ರದೇಶ ಬ್ರಾಹ್ಮಣ ಪ್ರಾಧಿಕಾರ ಆರಂಭವಾಗಿ ಇದುವರೆಗೂ ಇದರಿಂದ 1 ಲಕ್ಷ ಮಂದಿ ಅನುಕೂಲ ಪಡೆದಿದ್ದು, ಕಾರುಗಳ ಮೂಲಕ ಸ್ವತಃ ಚಾಲಕರಾಗಿ ವೃತ್ತಿ ಆರಂಭಿಸಬಹುದಾಗಿದೆ. ಈ ಯೋಜನೆಗೂ ಮುನ್ನ ಆಂಧ್ರ ಪ್ರದೇಶ ಸರ್ಕಾರ ಎಲ್ಲರ ಮನೆಗಳಿಗೂ ಸ್ಮಾರ್ಟ್ ಫೋನ್ ಹಂಚಿಕೆಯ ಯೋಜನೆಯನ್ನು ಘೋಷಣೆ ಮಾಡಿತ್ತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv