ಹೈದರಾಬಾದ್: ಹಾರ್ಮೋನ್ ಮಾತ್ರೆ ತೆಗೆದುಕೊಳ್ಳುವಂತೆ ಮಗಳಿಗೆ ಒತ್ತಾಯಿಸಿದ ತಾಯಿಯನ್ನು ಆಂಧ್ರಪ್ರದೇಶ (Andhrapradesh) ದ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು 16 ವರ್ಷದ ಹುಡುಗಿ (Girl) ಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ನೋವು ಮತ್ತು ಅಡ್ಡ ಪರಿಣಾಮಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಆಕೆ ಚೈಲ್ಡ್‍ಲೈನ್‍ನ ಸಹಾಯ ಪಡೆದು ದೂರು ದಾಖಲಿಸಿದ್ದಾಳೆ. ಈ ವೇಳೆ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
Advertisement
Advertisement
ಕಳೆದ ನಾಲ್ಕು ವರ್ಷಗಳಿಂದ ಈ ಹಾರ್ಮೋನ್ ಮಾತ್ರೆ (Hormone Pills) ಗಳನ್ನು ಆಕೆ ಸೇವಿಸುತ್ತಿದ್ದಳು. ಇದರಿಂದಾಗಿ ಪ್ರಜ್ಞಾಹೀನತೆ ಮತ್ತು ದೇಹದಲ್ಲಿ ತೀವ್ರವಾದ ಊತವನ್ನು ಅನುಭವಿಸಿದ್ದಾಳೆ. ಸಿನಿಮಾದಲ್ಲಿ ಅಭಿನಯಿಸುವ ಸಲುವಾಗಿ ದೈಹಿಕ ಬೆಳವಣಿಗೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ತನ್ನ ತಾಯಿ ಒತ್ತಾಯಿಸುತ್ತಿದ್ದಳು ಎಂದು ಹುಡುಗಿ ಬಹಿರಂಗಪಡಿಸಿದ್ದಾಳೆ.
Advertisement
ಬಲವಂತದ ಔಷಧ ತನ್ನ ಶಿಕ್ಷಣದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ಗೊತ್ತಾದಾಗ ಯುವತಿ ಆಘಾತಕ್ಕೊಳಗಾಗಿದ್ದಾಳೆ. ಮಗಳನ್ನು ಹೇಗಾದ್ರೂ ಮಾಡಿ ಸಿನಿಮಾದಲ್ಲಿ ಅಭಿನಯಿಸುವಂತೆ ಮಾಡಬೇಕು ಎಮದು ಪಣ ತೊಟ್ಟಿರುವ ತಾಯಿ ಕೆಲವೊಂದು ಸಿನಿಮಾ ನಿರ್ಮಾಪಕರ ಜೊತೆ ಸಂಪರ್ಕದಲ್ಲಿದ್ದರು. ಆದರೆ ಇದನ್ನೆಲ್ಲಾ ವಿರೋಧಿಸಿದಾಗ ತಾಯಿ ತನಗೆ ನೀಡಿರುವ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನೂ ಕೂಡ ಆಕೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಇದನ್ನೂ ಓದಿ: ಮಕ್ಕಳ ಮಾಹಿತಿ ಅಕ್ರಮವಾಗಿ ಸಂಗ್ರಹ – 165 ಕೋಟಿ ಪಾವತಿಗೆ ಮುಂದಾದ ಮೈಕ್ರೋಸಾಫ್ಟ್