ಅಮರಾವತಿ: ಆಂಧ್ರದ ಕರ್ನೂಲು ಜಿಲ್ಲೆಯ ಹೊಳಗುಂದ ಮಂಡಲದ ದೇವರಗುಡ್ಡ ಎಂಬಲ್ಲಿ ಮತ್ತೊಮ್ಮೆ ರಕ್ತ ಸುರಿದಿದೆ. ಕೋಲುಗಳನ್ನು ಹಿಡಿದು ಬಡಿದಾಡಿಕೊಳ್ಳುವ (Stick Fight) ಸಂಪ್ರದಾಯದಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.
ಆಂಧ್ರಪ್ರದೇಶದ (Andhrapradesh) ಗಡಿ ಭಾಗದಲ್ಲಿ ದೇವರ ಗುಡ್ಡದಲ್ಲಿ ವಿಜಯದಶಮಿಯ ರಾತ್ರಿ ವಿಶಿಷ್ಠ ಆಚರಣೆಯೊಂದು ನಡೆಯುತ್ತದೆ. ನೆರಣಕಿ ಗ್ರಾಮಕ್ಕೆ ಸೇರಿದ ಮೀಸಲು ಅರಣ್ಯಪ್ರದೇಶದ ಗುಡ್ಡದ ಮೇಲಿರೋ ಮಾಳ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಜಯದಶಮಿ ದಿನರಾತ್ರಿ ಇಲ್ಲಿನ ಮಾಳಮ್ಮ ಮತ್ತು ಮಲ್ಲೇಶ್ವರ ಸ್ವಾಮಿಗೆ ಕಲ್ಯಾಣೋತ್ಸವ ನಡೆಯುತ್ತದೆ. ಮಲ್ಲೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ನೆರಣಕಿ ಗ್ರಾಮದ ಭಕ್ತರು ಬೆಟ್ಟಕ್ಕೆ ಬರುತ್ತಾರೆ.
Advertisement
Advertisement
ಬರುವಾಗ ಮತ್ತು ಹೋಗುವಾಗ ಈ ಉತ್ಸವ ಮೂರ್ತಿಗಳನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗಬೇಕೆಂದು ಸುತ್ತಮುತ್ತಲಿನ ಗ್ರಾಮಸ್ಥರು ಪ್ರಯತ್ನಿಸುತ್ತಾರೆ. ಈ ವೇಳೆ ಪರಸ್ಪರ ಬಡಿಗೆ ಹಿಡಿದು ಕೊಂಡು ಹೊಡೆದಾಡಿಕೊಳ್ಳುತ್ತಾರೆ. ಇದನ್ನು ನೋಡಲು ಮತ್ತು ಅದರಲ್ಲಿ ಪಾಲ್ಗೊಳ್ಳಲು ಈ ಬೆಟ್ಟ ಪ್ರದೇಶದಕ್ಕೆ ಸಾವಿರಾರು ಜನ ಬಂದು ಸೇರುತ್ತಾರೆ. ಮಧ್ಯರಾತ್ರಿ 1 ರಿಂದ 3 ಗಂಟೆವರೆಗೆ ಈ ಕಾಳಗ ನಡೆಯುತ್ತದೆ. ಇದನ್ನೂ ಓದಿ: ಭಾರತ ಅಭಿವೃದ್ಧಿಯಾದರೆ ಕೆಲವರ ಆಟ ನಡೆಯಲ್ಲ: ಮೋಹನ್ ಭಾಗವತ್
Advertisement
Advertisement
ಈ ಕಾಳಗಕ್ಕೆ ನಿಷೇಧವಿದ್ರೂ ಪೊಲೀಸರ ಎದುರಿಗೇ ಈ ಕಾಳಗ ನಡೆದು ಪರಸ್ಪರ ಬಡಿದಾಡಿಕೊಳ್ಳುತ್ತಾರೆ.
Web Stories