– ಎಚ್‍ಎಲ್‍ಸಿ/ ಎಲ್‍ಎಲ್‍ಸಿ ಕಾಲುವೆ ನೀರು ಬಳಸಿ ಭತ್ತ ನಾಟಿ ಮಾಡದಂತೆ ಎಚ್ಚರಿಕೆ
ಬಳ್ಳಾರಿ: ಎಚ್‍ಎಲ್‍ಸಿ ( ತುಂಗಭದ್ರ ಮೇಲ್ದಂಡೆ ಕಾಲುವೆ)/ ಎಲ್‍ಎಲ್‍ಸಿ ( ತುಂಗಭದ್ರ ಕೆಳದಂಡೆ ಕಾಲುವೆ) ನೀರು ಬಳಸಿ ಭತ್ತ ನಾಟಿ ಮಾಡಬಾರದು, ಪೊಲೀಸರ ಮಾತು ಮೀರಿ ನಾಟಿ ಮಾಡಿದರೆ ಅವರ ವಿರುದ್ಧ ಕೇಸ್ ದಾಖಲಿಸುತ್ತೇವೆ ಎಂದು ಆಂಧ್ರ ಪೊಲೀಸರು ಕರ್ನಾಟಕ ಗಡಿಭಾಗಗಳಲ್ಲಿ ಡಂಗೂರ ಸಾರಿಸುವ ಮೂಲಕ ರೈತರಿಗೆ ಎಚ್ಚರಿಕೆ ನೀಡಿದ್ದಾರೆ.
ಬಳ್ಳಾರಿ ಜಿಲ್ಲೆಯ ನಾಲ್ಕು ತಾಲೂಕುಗಳ ಮುಖಾಂತರ ಆಂಧ್ರಕ್ಕೆ ಎಲ್‍ಎಲ್‍ಸಿ ಕಾಲುವೆ ನೀರು ಹರಿಯುತ್ತದೆ. ಜಿಲ್ಲೆಯ ಕಂಪ್ಲಿ, ಕುರುಗೋಡು, ಸಿರಗುಪ್ಪ ತಾಲೂಕಿನ ಗ್ರಾಮಗಳಿಗೆ ನೇರವಾಗಿ ಆಂಧ್ರ ಪೊಲೀಸರೇ ತೆರಳಿ ಎಚ್‍ಎಲ್‍ಸಿ/ ಎಲ್‍ಎಲ್‍ಸಿ ಕಾಲುವೆ ನೀರು ಬಳಸಿ ಭತ್ತ ನಾಟಿ ಮಾಡಬಾರದು, ಭತ್ತ ನಾಟಿ ಮಾಡಿದ್ರೆ ಅಂತವರ ಮೇಲೆ ಕೇಸ್ ದಾಖಲಿಸುತ್ತೇವೆ. ಆಂಧ್ರ ಪೊಲೀಸರ ಈ ನಡೆ ರಾಜ್ಯದ ರೈತರಲ್ಲಿ ಆತಂಕ ಸೃಷ್ಟಿಸಿದೆ.
Advertisement
Advertisement
ತುಂಗಭದ್ರ ನೀರು ನಿರ್ವಹಣಾ ಮಂಡಳಿ ಇತ್ತೀಚೆಗೆ ಕೆಳ ಮಟ್ಟದ ಕಾಲುವೆಗಳಿಗೆ ಎಪ್ರಿಲ್ 1 ರವರೆಗೆ ನೀರು ಬಿಡುವುದಾಗಿ ಪ್ರಕಟಿಸಿದೆ. ಆದ್ರೆ ಈಗ ಕಾಲುವೆ ವ್ಯಾಪ್ತಿಯ ಹತ್ತಾರು ಗ್ರಾಮಗಳಲ್ಲಿ ಆಂಧ್ರ ಪೊಲೀಸರ ಬಿಗಿ ಭದ್ರತೆ ಜೊತೆಗೆ ತಮಟೆ ಬಾರಿಸಿ ಕಾಲುವೆ ನೀರು ವ್ಯವಸಾಯಕ್ಕೆ ಬಳಸದಂತೆ ಡಂಗೂರ ಸಾರಿದ್ದರಿಂದ ರಾಜ್ಯ ಗಡಿಭಾಗದ ರೈತರು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv