ಹೈದರಾಬಾದ್: ಮಾಜಿ ಚಾಲಕನನ್ನು ಕೊಂದ ಆರೋಪದಡಿ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‍ಆರ್‌ಸಿಪಿ) ಮುಖಂಡ ಅನಂತ ಸತ್ಯ ಉದಯ ಭಾಸ್ಕರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಚಾಲಕನನ್ನು ಸುಬ್ರಹ್ಮಣ್ಯಂ ಎಂದು ಗುರುತಿಸಲಾಗಿದೆ. ತನ್ನ ರಹಸ್ಯಗಳು ಮತ್ತು ಇತರೆ ಚಟುವಟಿಕೆಗಳನ್ನು ಎಲ್ಲಿ ಬಹಿರಂಗಪಡಿಸುತ್ತಾನೋ ಎಂಬ ಭಯದಿಂದ ಮೇ 19ರಂದು ಗುರುವಾರ ರಾತ್ರಿ 9.30ರ ಸುಮಾರಿಗೆ ಸುಬ್ರಹ್ಮಣ್ಯಂ ಅವರನ್ನು ಭೇಟಿಯಾಗುವಂತೆ ಅನಂತ ಭಾಸ್ಕರ್ ತಿಳಿಸಿದ್ದರು. ಆದರೆ ಶುಕ್ರವಾರ 2 ಗಂಟೆಯ ಸುಮಾರಿಗೆ ಸುಬ್ರಹ್ಮಣ್ಯಂ ಅಪಘಾತದಲ್ಲಿ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ಹೇಳಿದ್ದಾರೆ. ಇದನ್ನೂ ಓದಿ: ಉತ್ತರ ಕೊರಿಯಾದಲ್ಲಿ ನಿಯಂತ್ರಣಕ್ಕೆ ಬಂದ ಕೊರೊನಾ
Advertisement
Advertisement
ಈ ಘಟನೆ ಸಂಬಂಧ ಮೇ 20 ರಂದು ಮೃತರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಆಂಧ್ರಪ್ರದೇಶದ ಪೂರ್ವ ಗೋದಾವ್ರಿ ಜಿಲ್ಲೆಯ ಸರ್ಪವರಂ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ. ಅಲ್ಲದೇ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಚಾಲಕನ ಖಾಸಗಿ ಭಾಗಕ್ಕೆ ಪೆಟ್ಟಾಗಿದ್ದು, ಆತನ ಕಾಲು, ಕೈ ಮತ್ತು ತಲೆಗೆ ಗಂಭೀರ ಗಾಯಗಳಾಗಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಪಿಯುಸಿ ಅಡ್ಮಿಷನ್‍ಗೆ ಹೊರಟಿದ್ದ ಪ್ರತಿಭಾವಂತ ವಿದ್ಯಾರ್ಥಿ ಅಪಘಾತದಲ್ಲಿ ಸಾವು
Advertisement
Advertisement
ಈ ಘಟನೆ ಕುರಿತಂತೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರನಾಥ್ ಬಾಬು ಅವರು, ಮೇ 19 ರಂದು ಉದಯ ಭಾಸ್ಕರ್, ಸುಬ್ರಹ್ಮಣ್ಯಂ ಅವರನ್ನು ರಾತ್ರಿ ಭೇಟಿಯಾಗುವಂತೆ ತಿಳಿಸಿದ್ದರು. ನಂತರ ಶಂಕರನಗರ ಸೆಲ್ ಟವರ್ ಪ್ರದೇಶದಲ್ಲಿ ಸುಬ್ರಮಣ್ಯಂ ಮೇಲೆ ಅನಂತ ಭಾಸ್ಕರ್ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ.