ಆಂಧ್ರ ಸಚಿವೆ ರೋಜಾ ಕಾರಿನ ಮೇಲೆ ಪವನ್ ಕಲ್ಯಾಣ್ ಬೆಂಬಲಿಗರಿಂದ ದಾಳಿ

Public TV
2 Min Read
roja

ಹೈದರಾಬಾದ್: ಟಾಲಿವುಡ್ ನಟ ಪವರ್ ಸ್ಟಾರ್ ಮತ್ತು ರಾಜಕಾರಣಿ ಪವನ್ ಕಲ್ಯಾಣ್ (Pawan Kalyan) ಬೆಂಬಲಿಗರು ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ ( Yuvajana Sramika Rythu Congress Part) (ವೈಎಸ್‍ಆರ್‌ಸಿ) ನಾಯಕಿ ಆರ್.ಕೆ. ರೋಜಾ (R K Roja) ಅವರ ಕಾರಿನ ಮೇಲೆ ವಿಶಾಖಪಟ್ಟಣಂ ವಿಮಾನ ನಿಲ್ದಾಣದ ಹೊರಗೆ ದಾಳಿ ನಡೆಸಿದ್ದಾರೆ.

pawan kalyan

ಜೋಗಿ ರಮೇಶ್ (Jogi Ramesh) ಮತ್ತು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ (Y V Subba Reddy) ಅವರ ವಾಹನಗಳ ಮೇಲೂ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿರುವ ರೋಜಾ ಅವರು, ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ (Y S Jagan Mohan Reddy) ಅವರು ಪ್ರಸ್ತಾಪಿಸಿದ ಮೂರು ರಾಜಧಾನಿ ಯೋಜನೆಯನ್ನು ಬೆಂಬಲಿಸುವ ರ್‍ಯಾಲಿಯಲ್ಲಿ ಭಾಗವಹಿಸಲು ವೈಜಾಗ್‍ಗೆ ಹಿಂತಿರುಗುತ್ತಿದ್ದರು. ಈ ವೇಳೆ ಪವನ್ ಕಲ್ಯಾಣ್ ಬೆಂಬಲಿಗರು ರೋಜಾ ಅವರಿದ್ದ ಕಾರಿನ ಮೇಲೆ ದಾಳಿ ನಡೆಸಿದ್ದು, ಘಟನೆಯಲ್ಲಿ ರೋಜಾ ಅವರ ಚಾಲಕನ ತಲೆಗೆ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಇದೀಗ ದಾಳಿ ನಡೆಸಿದವರು ಯಾರು ಎಂಬುದನ್ನು ಪತ್ತೆ ಹಚ್ಚಲು ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿರುವುದಾಗಿ ಪೊಲಿಸರು ತಿಳಿಸಿದ್ದಾರೆ.

Roja 2

ಇತ್ತೀಚೆಗಷ್ಟೇ ರಾಜ್ಯ ಸಚಿವರು ಮತ್ತು ವೈಎಸ್‍ಆರ್‌ಸಿಪಿ ನಾಯಕರು ಪವನ್ ಕಲ್ಯಾಣ್ ವಿರುದ್ಧ ನೀಡಿದ್ದ ಹೇಳಿಕೆಯಿಂದ ರೊಚ್ಚಿಗೆದಿದ್ದ ಜನಸೇನಾ ಕಾರ್ಯಕರ್ತರು ಮತ್ತು ಪವನ್ ಕಲ್ಯಾಣ್ ಬೆಂಬಲಿಗರು ಈ ಕೃತ್ಯ ವೆಸಗಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: 5 ವರ್ಷದ ಬಳಿಕ ಮತ್ತೆ ದಾಖಲೆಯತ್ತ ಬೆಂಗಳೂರು ಮಹಾಮಳೆ!

Roja 1

ವೈಜಾಗ್ ಅನ್ನು ಆಂಧ್ರಪ್ರದೇಶದ ಕಾರ್ಯಕಾರಿ ರಾಜಧಾನಿಯನ್ನಾಗಿ ಮಾಡಲು ಬೆಂಬಲಿಸುವ ಸಲುವಾಗಿ ಸಾವಿರಾರು ಜನರು ಶನಿವಾರ ವಿಶಾಖಪಟ್ಟಣದಲ್ಲಿ ಜಮಾಯಿಸಿದ್ದರು. ಭಾರೀ ಮಳೆಯ ನಡುವೆಯೂ ರ್‍ಯಾಲಿಯಲ್ಲಿ ಸಂಘಟಕರು ಉತ್ತರಾಂಧ್ರ ಜಂಟಿ ಕ್ರಿಯಾ ಸಮಿತಿ (ಜೆಎಸಿ) ಆಡಳಿತ ಮಂಡಳಿಯ ಬೆಂಬಲದೊಂದಿಗೆ ಭಾರೀ ಜನರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Jagan Mohan Reddy EPS

2019 ರಲ್ಲಿ ವೈ.ಎಸ್. ಜಗನ್‍ಮೋಹನ್ ರೆಡ್ಡಿ ಅಧಿಕಾರಕ್ಕೆ ಬಂದ ನಂತರ, ವಿಕೇಂದ್ರೀಕರಣ ಮತ್ತು ಮೂರು-ರಾಜಧಾನಿ ಯೋಜನೆಯ ಬಗ್ಗೆ ಚರ್ಚಿಸಿದ್ದರು. ವಿಶಾಖಪಟ್ಟಣಂ (Visakhapatnam) ಅನ್ನು ಆಡಳಿತ ಮತ್ತು ಕಾರ್ಯಕಾರಿ ರಾಜಧಾನಿಯಾಗಿ, ಅಧಿಕಾರದ ಸ್ಥಾನದಿಂದ ಕರಾವಳಿ ನಗರದಲ್ಲಿ ಸಚಿವಾಲಯ ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಿದರು.

Chandrababu Naidu

ಆಂಧ್ರಪ್ರದೇಶ ಮತ್ತು ತೆಲಂಗಾಣ ವಿಭಜನೆಯಾದ ಬಳಿಕ ಆಂಧ್ರಪ್ರದೇಶದ ಮೊದಲ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರು ರಾಜ್ಯಕ್ಕಾಗಿ ಅಮರಾವತಿಯಲ್ಲಿ ವಿಜಯವಾಡ ಮತ್ತು ಗುಂಟೂರು ಎರಡರಲ್ಲಿ ಒಂದನ್ನು ಹೊಸ ರಾಜಧಾನಿಯನ್ನು ನಿರ್ಮಿಸಲು ಪ್ರಸ್ತಾಪಿಸಿದ್ದರು.  ಇದನ್ನೂ ಓದಿ: ಧರ್ಮಸ್ಥಳ, ಹಾಸನಾಂಬೆ ದರ್ಶನ ಮುಗಿಸಿ ವಾಪಸಾಗುತ್ತಿದ್ದಾಗ ಭೀಕರ ಅಪಘಾತ – ಮಕ್ಕಳು ಸೇರಿ 9 ಮಂದಿ ದುರ್ಮರಣ

ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷದ ನಾಯಕರು, ಇತ್ತೀಚಿನ ಬೆಳವಣಿಗೆಗಳ ಕುರಿತು ಶನಿವಾರ ಸಭೆ ನಡೆಸಿದರು ಮತ್ತು ರಾಜ್ಯದಲ್ಲಿ ಮೂರು ರಾಜಧಾನಿಗಳನ್ನು ಅಭಿವೃದ್ಧಿಪಡಿಸುವ ಹೆಸರಿನಲ್ಲಿ ಆಡಳಿತ ಪಕ್ಷವು ದ್ವೇಷವನ್ನು ಹುಟ್ಟುಹಾಕುತ್ತಿದೆ ಎಂದು ಆರೋಪಿಸಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *