ಅಮರಾವತಿ: ಟೊಮೆಟೋ (Tomato) ಮಾರಾಟ ಮಾಡಿ 30 ಲಕ್ಷ ರೂ. ಗಳಿಸಿದ್ದ ರೈತನನ್ನು ಹಣಕ್ಕಾಗಿ ದರೋಡೆಕೋರರು ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶದಲ್ಲಿ (Andhra Pradesh) ನಡೆದಿದೆ.
ಮದನಪಲ್ಲಿಯ ರಾಜಶೇಖರ್ ರೆಡ್ಡಿ (62) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಆತ ಟೊಮೆಟೋ ಬೆಳೆದು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ. ಜುಲೈ ಮೊದಲ ವಾರದಲ್ಲಿ ಬೆಲೆ ಏರಿಕೆಯಾಗುತ್ತಿದ್ದಾಗ ಟೊಮೆಟೋ ಮಾರಾಟ ಮಾಡಿ 30 ಲಕ್ಷ ರೂ. ಗಳಿಸಿದ್ದ. ಸುಮಾರು 70 ಬಾಕ್ಸ್ ಟೊಮೆಟೋ ಮಾರಾಟ ಮಾಡಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ – ಪತಿ ವಿರುದ್ಧ ಕೊಲೆ ಆರೋಪ
ಪ್ರಾಥಮಿಕ ತನಿಖೆಯ ಪ್ರಕಾರ ಕೊಲೆಯಲ್ಲಿ ದರೋಡೆಕೋರರ ಜೊತೆಗೆ ಕೆಲವು ಉದ್ಯಮಿಗಳು ಭಾಗಿಯಾಗಿದ್ದಾರೆ ಎಂದು ಕುಟುಂಬ ಸದಸ್ಯರು ಶಂಕಿಸಿದ್ದಾರೆ.
ಬೈಕ್‍ನಲ್ಲಿ ಹೋಗುತ್ತಿದ್ದ ವೇಳೆ ಆತನನ್ನು ದರೋಡೆಕೋರರು ಅಡ್ಡಗಟ್ಟಿದ್ದರು. ಆತನ ಬಾಯಿಗೆ ಬಲವಂತವಾಗಿ ಬಟ್ಟೆ ತುರುಕಿ ಮರಕ್ಕೆ ಕೈಕಾಲು ಕಟ್ಟಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: Don’t Allow him to Speak ಎಂದ ಸಿಎಂ: ಪ್ಲೀಸ್ ಸೇರಿಸಿ Kill Him ಎನ್ನಬಹುದಾ ಎಂದ ಸುರೇಶ್ ಕುಮಾರ್
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]