ಅಮರಾವತಿ: ಗೂಡ್ಸ್ ರೈಲಿನ ಅಡಿ ಮಲಗಿ ವ್ಯಕ್ತಿಯೊಬ್ಬರು ತನ್ನ ಪ್ರಾಣವನ್ನು ಉಳಿಸಿಕೊಂಡ ಘಟನೆ ಆಂಧ್ರಪ್ರದೇಶದ ಅನಂತಪುರ ರೈಲು ನಿಲ್ದಾಣದಲ್ಲಿ ನಡೆದಿದೆ.
ಶನಿವಾರ ರೈಲು ನಿಲ್ದಾಣದಲ್ಲಿ ಲಕ್ನೋ-ಯಶವಂತಪುರ ಟ್ರೈನ್‍ನಿಂದ ಇಳಿದ ಅಪರಿಚಿತ ವ್ಯಕ್ತಿಯೊಬ್ಬರು, ತಮ್ಮ 2ನೇ ಪ್ಲಾಟ್ ಫಾರಂನಿಂದ 1ನೇ ಪ್ಲಾಟ್ ಫಾರಂಗೆ ಹೋಗಲು ಮೇಲುಸೇತುವೆಯನ್ನು ಬಳಸದೇ, ರೈಲ್ವೇ ಹಳಿಗಳನ್ನು ದಾಟುವ ಯತ್ನ ಮಾಡುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ಗೂಡ್ಸ್ ರೈಲು ಬಂದಿದೆ.
ತಾನಿದ್ದ ಹಳಿಯಲ್ಲೇ ರೈಲು ಬರುತ್ತಿರುವುದನ್ನು ಅರಿತ ವ್ಯಕ್ತಿ ಧೃತಿಗೆಡದೇ ಟ್ರಾಕ್ ಮೇಲೆಯೇ ಮಲಗಿದ್ದಾರೆ. ನಂತರ ಗೂಡ್ಸ್ ರೈಲು ಆ ವ್ಯಕ್ತಿಯ ಮೇಲೆ ಹರಿದು ಹೋಗಿದೆ. ರೈಲು ಹೋದ ಬಳಿಕ ತನ್ನಪಾಡಿಗೆ ತಾನು ಎದ್ದು, ಏನೂ ಆಗದಂತೆ ವ್ಯಕ್ತಿ ಹೋಗಿದ್ದಾನೆ. ಇದನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಅನಂತಪುರ ರೈಲ್ವೇ ಪೊಲೀಸರು ಪ್ರತಿಕ್ರಿಯಿಸಿ, ವ್ಯಕ್ತಿಯೊಬ್ಬರು ರೈಲ್ವೇ ಹಳಿಯನ್ನು ದಾಟುತ್ತಿರುವಾಗ ಏಕಾಏಕಿ ಗೂಡ್ಸ್ ರೈಲು ಆಗಮಿಸಿತ್ತು. ಈ ವೇಳೆ ವ್ಯಕ್ತಿ ಹಳಿ ಮೇಲೆಯೇ ಮಲಗಿಕೊಂಡು, ಆಗಬಹುದಾಗಿದ್ದ ಅನಾಹುತದಿಂದ ಪಾರಾಗಿದ್ದಾರೆ. ಆದರೆ ಈ ಬಗ್ಗೆ ರೈಲ್ವೇ ನಿಲ್ದಾಣದಲ್ಲಿದ್ದ ಯಾವುದೇ ಪ್ರಯಾಣಿಕರು ನಮ್ಮ ಗಮನಕ್ಕೆ ತಂದಿರಲಿಲ್ಲ. ವಿಡಿಯೋ ವೈರಲ್ ಬಳಿಕ ಮಾಹಿತಿ ಲಭಿಸಿದೆ. ಈ ಘಟನೆ ಶನಿವಾರ ನಡೆದಿದೆ. ಪ್ರಯಾಣಿಕ ಹಳಿಯನ್ನು ದಾಟುವುದಕ್ಕೆ ಮೇಲುಸೇತುವೆಯನ್ನು ಬಳಸದೇ ಇರುವುದೇ ಕಾರಣ ಎಂದು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews